alex Certify ಕಂಗನಾಗೆ ನಟಿ ರಮ್ಯಾ ನೀಡಿದ್ದಾರೆ ಈ ಸಲಹೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾಗೆ ನಟಿ ರಮ್ಯಾ ನೀಡಿದ್ದಾರೆ ಈ ಸಲಹೆ…!

ತಮ್ಮ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಈಗ ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ. ಜೊತೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಸತತವಾಗಿ ಮಾತನಾಡುತ್ತಲೇ ಇದ್ದಾರೆ.

ಅಲ್ಲದೇ ಬಾಲಿವುಡ್ ನಲ್ಲಿರುವ ಶೇಕಡ 99 ರಷ್ಟು ಮಂದಿ ಸೇವಿಸುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕಂಗನಾ ರಣಾವತ್ ನೀಡಿದ್ದು, ತಾವು ಕೂಡ ಹಿಂದೆ ಡ್ರಗ್ಸ್ ವ್ಯಸನಕ್ಕೆ ಸಿಲುಕಿದ್ದಾಗಿ ತಿಳಿಸಿದ್ದರು.

ಇದೀಗ ಮಾಜಿ ಸಂಸದೆ ನಟಿ ರಮ್ಯಾ ಟ್ವೀಟ್ ಮಾಡುವ ಮೂಲಕ ಕಂಗನಾಗೆ ಸಲಹೆ ನೀಡಿದ್ದು, ಡ್ರಗ್ಸ್ ಮಾಫಿಯಾ ಕುರಿತು ನಿಮ್ಮ ಬಳಿ ಮಾಹಿತಿ ಇದ್ದರೆ ಅದನ್ನು ಬಹಿರಂಗಪಡಿಸಿ. ಜೊತೆಗೆ ಪೊಲೀಸರಿಗೆ ಸಾಕ್ಷಿ ಕೊಡಿ ಎಂದಿದ್ದಾರೆ. ಒಂದು ಕಾಲಕ್ಕೆ ನಾನೂ ಕೂಡ ಡ್ರಗ್ ಅಡಿಕ್ಟ್ ಆಗಿದ್ದೆ ಎಂದು ಹೇಳಿಕೊಂಡಿರುವ ನೀವು, ಈ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಜಗತ್ತಿಗೆ ತಿಳಿಸಿ ಎಂದಿದ್ದಾರೆ ರಮ್ಯಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...