alex Certify ಇಶಾ ಗುಪ್ತಾ ಫಿಟ್ನೆಸ್ ಪಾಠ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಶಾ ಗುಪ್ತಾ ಫಿಟ್ನೆಸ್ ಪಾಠ….!

ಬಾಲಿವುಡ್ ನಟಿ ಇಶಾ ಗುಪ್ತಾ ಸದಾ ಸಖತ್ ಹಾಟ್ ಆಗಿಯೇ ಕಾಣಿಸಿಕೊಳ್ಳುವವರು. ನಾನು ಮೋಸ್ಟ್ ಸೆಕ್ಸಿ ಗರ್ಲ್ ಎಂಬುದನ್ನು ಹಲವು ಬಾರಿ ಹೇಳಿಕೊಂಡವರು. ಆಕೆಯ ಫಿಟ್ ನೆಸ್ ಪಾಠಗಳು ಇಲ್ಲಿವೆ ಕೇಳಿ.

ಕೈಕಾಲು ಬಿಡಿಸಿದರೂ ಗೋಡೆ ತಾಕದಷ್ಟು ದೊಡ್ಡ ಕೊಠಡಿಯನ್ನು ಆಯ್ದುಕೊಳ್ಳಿ. ಹಾಲ್ ನಲ್ಲಿದರೆ ಮಧ್ಯಕ್ಕೆ ನಿಲ್ಲಿ. ಎರಡೂ ಕಾಲುಗಳನ್ನು ಜೋಡಿಸಿ ನಿಲ್ಲಿ. ನಿಧಾನಕ್ಕೆ ಎರಡೂ ಕಾಲಿನ ಅಂತರ ಹೆಚ್ಚಿಸುತ್ತಾ ಹೋಗಿ. ಇನ್ನಾಗದು ಅನ್ನಿಸಿದಾಗ ನಿಲ್ಲಿಸಿ ಮುಂದಕ್ಕೆ ಬಾಗಿ.

ಎರಡೂ ಕೈಗಳನ್ನು ಕತ್ತರಿಯಾಕಾರಕ್ಕೆ ತಂದು ನೆಲಕ್ಕೆ ಊರಿ. ಇದನ್ನು ನಾಲ್ಕಾರು ಬಾರಿ ಮಾಡುವುದರಿಂದ ದೇಹ ಚುರುಕಾಗುತ್ತದೆ ಎನ್ನುತ್ತಾರವರು. ದಿನಕ್ಕೆ ಕನಿಷ್ಠ ಅರ್ಧ ಗಂಟೆಯನ್ನು ಯೋಗಾಸನ, ಪ್ರಾಣಾಯಮಕ್ಕೆ ಮೀಸಲಿಡಿ.

ಸಮಯ ಸಿಕ್ಕಾಗಲೆಲ್ಲಾ ಬಿಸಿ ನೀರು ಕುಡಿಯುತ್ತಿರಿ. ಇದರಿಂದ ದೇಹದಲ್ಲಿ ಹೆಚ್ಚಿರುವ ಕೊಬ್ಬು ಕರಗುತ್ತದೆ ಮಾತ್ರವಲ್ಲ ದೇಹ ನಿರ್ಜಲೀಕರಣಗೊಳ್ಳುವುದು ತಪ್ಪುತ್ತದೆ. ನೀರು ಕುಡಿದಷ್ಟು ತ್ವಚೆ ಹೊಳೆಯುವುದು ಅಧಿಕ. ಹಾಗಾಗಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ತಪ್ಪದೆ ಕುಡಿಯಿರಿ.

ನಾರಿನಂಶ ಹೇರಳವಾಗಿರುವ ತರಕಾರಿ, ಹಣ್ಣುಗಳನ್ನು ಸೇವಿಸಿ. ದಿನಕ್ಕೆ ಇಂಥದ್ದನ್ನೇ ತಿನ್ನಬೇಕು ಎಂಬುದರ ಚಾರ್ಟ್ ತಯಾರಿಸಿಕೊಳ್ಳಿ. ನಿಯಮಿತವಾಗಿ ಆಹಾರ ಸೇವನೆ ಮಾಡುವುದರಿಂದ ಜಿಮ್ ಗೆ ತೆರಳದೆಯೂ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು ಎನ್ನುತ್ತಾರೆ ಇಶಾ ಗುಪ್ತಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...