alex Certify ʼಹೆಲ್ತ್ ಟಿಪ್ಸ್ʼ ನೀಡಿದ ನಟಿ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೆಲ್ತ್ ಟಿಪ್ಸ್ʼ ನೀಡಿದ ನಟಿ ಸಮಂತಾ

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಸಮಂತಾ ಮನೆಯಿಂದಲೇ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಒಂದಿಷ್ಟು ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ ಯಾವುದೇ ಕಾರಣಕ್ಕೂ ಯೋಗ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲವಂತೆ. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾವು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತೇವೆ. ಇಲ್ಲವಾದರೆ ನಮ್ಮ ಯೌವ್ವನ ಕ್ಷೀಣಗೊಳ್ಳುತ್ತದೆ ಎನ್ನುತ್ತಾರವರು.

ಯೋಗದೊಂದಿಗೆ ಮೆಡಿಟೇಶನ್ ಗೂ ಹೆಚ್ಚು ಸಮಯ ಮೀಸಲಿಡುತ್ತಾರೆ. ಮನೆಗೆ ಬೇಕಾದ ತರಕಾರಿಗಳನ್ನು ಮನೆಯಂಗಳದಲ್ಲೇ ಬೆಳೆಯುತ್ತಾರೆ. ಬೆಳಗ್ಗೆ ಬಿಸಿಬಿಸಿಯಾಗಿರುವ ತಿಂಡಿಗಳನ್ನೇ ತಿನ್ನುತ್ತೇನೆ. ಬೆಳಗ್ಗೆಯೇ ಖಾಲಿ ಹೊಟ್ಟೆ ಬಿಡುವುದು ಒಳ್ಳೆಯದಲ್ಲ ಎಂಬುದು ಅವರ ಸಲಹೆ.

ಬೆಳಿಗ್ಗೆ ತಾಜಾ ಆಗಿರುವ ಹಣ್ಣುಗಳ ಸೇವನೆ ಮಾಡುವುದರಿಂದ ಆರೋಗ್ಯದಿಂದ ಇರಬಹುದು. ಅವಕಾಡೋ ಹಣ್ಣಿನೊಂದಿಗೆ ಮೊಟ್ಟೆ ಅಥವಾ ಗೆಣಸನ್ನು ಉಪಾಹಾರಕ್ಕೆ ಸೇವಿಸಿದರೆ ಮಧ್ಯಾಹ್ನ ಊಟಕ್ಕೆ ಮೀನು ಅಥವಾ ತರಕಾರಿ ಸಾಂಬಾರು ಬಳಸುತ್ತಾರೆ. ತಾಜಾ ಸೊಪ್ಪುಗಳ ಸಾಂಬಾರಿಗೂ ಜಾಗ ಕೊಡುತ್ತಾರೆ. ವಿರಾಮದ ಅವಧಿಯಲ್ಲಿ ಎಳನೀರು ಕುಡಿಯುತ್ತಿರುತ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...