alex Certify ʼಕೌನ್ ಬನೇಗಾ ಕರೋಡ್‌ ಪತಿʼ ಮೊದಲ ಪ್ರಶ್ನೆಯೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೌನ್ ಬನೇಗಾ ಕರೋಡ್‌ ಪತಿʼ ಮೊದಲ ಪ್ರಶ್ನೆಯೇನು ಗೊತ್ತಾ…?

ಕೊರೊನಾ ವೈರಸ್, ಲಾಕ್ ಡೌನ್ ಕಾರಣ ಯಾವುದೇ ಟಿವಿ ಕಾರ್ಯಕ್ರಮ, ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ. ಈ ಮಧ್ಯೆ ಟಿವಿಯ ಅತಿದೊಡ್ಡ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಒಂದಾದ ʼಕೌನ್ ಬನೇಗಾ ಕರೋಡ್ ಪತಿ‌ʼಯ 12 ನೇ ಸರಣಿ ಶುರುವಾಗ್ತಿದೆ. ನಿನ್ನೆ ಅಂದರೆ ಮೇ 9 ರಿಂದ ಕೆಬಿಸಿ 12 ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಕೌನ್ ಬನೇಗಾ ಕರೋಡ್ ಪತಿ‌ಯ ಮೊದಲ ಪ್ರಶ್ನೆಯನ್ನು ಈಗಾಗಲೇ ಕೇಳಲಾಗಿದೆ. ಅಮಿತಾಬ್ ಬಚ್ಚನ್ ಈ ಋತುವಿನ ನೋಂದಣಿಯ ಮೊದಲ ಪ್ರಶ್ನೆಯನ್ನು ಬಹಳ ಆಸಕ್ತಿದಾಯಕ ಶೈಲಿಯೊಂದಿಗೆ ಕೇಳಿದ್ದಾರೆ. ಈ ಮೊದಲ ಪ್ರಶ್ನೆಯು ಪ್ರಸ್ತುತ ಕೊರೊನಾ ವೈರಸ್‌ಗೆ ಸಂಬಂಧಿಸಿದೆ.

ಸೋನಿ ಟಿವಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೆಬಿಸಿ 12 ನೋಂದಣಿಗಾಗಿ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯನ್ನು ವಿಡಿಯೋ ಮೂಲಕ ಹಂಚಿಕೊಳ್ಳಲಾಗಿದೆ. ಕೊರೊನಾ ವೈರಸ್ ಸೋಂಕನ್ನು ಚೀನಾದ ಯಾವ ನಗರದಲ್ಲಿ ಮೊದಲು ಪತ್ತೆ ಹಚ್ಚಲಾಯ್ತು ಎಂದು ಅಮಿತಾಬ್ ಬಚ್ಚನ್ ಕೇಳಿದ್ದಾರೆ. ಈ ವಿಡಿಯೋವನ್ನು ಅಮಿತಾಬ್ ಬಚ್ಚನ್ ಮನೆಯಲ್ಲಿಯೇ ಶೂಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...