ನವದೆಹಲಿ: 2025- 26 ನೇ ಆರ್ಥಿಕ ವರ್ಷಕ್ಕೆ ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿ ದರವನ್ನು ಹಾಲಿ ಶೇಕಡ 8.25ರ ದರದಲ್ಲಿ ಮುಂದುವರೆಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದಲ್ಲಿ ಸೋಮವಾರ ಇಪಿಎಫ್ ಬಡ್ಡಿದರ ನಿರ್ಧರಿಸುವ ಅತ್ಯುನ್ನತ ಮಂಡಳಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸಭೆ ನಡೆಸಲಾಗಿದೆ. ಸಭೆಯಲ್ಲಿ ಶೇಕಡ 8.25ರ ಬಡ್ಡಿ ದರ ಮುಂದುವರೆಸಲು ಶಿಫಾರಸು ಮಾಡಲಾಗಿದೆ.
ಇದರೊಂದಿಗೆ ಇಪಿಎಫ್ ಬಡ್ಡಿ ದರ ಸತತ ಮೂರನೇ ವರ್ಷವೂ ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ. ಕೇಂದ್ರ ಹಣಕಾಸು ಸಚಿವಾಲಯ ಬಡ್ಡಿದರ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ ನಂತರ ಇಪಿಎಫ್ಒ ಚಂದಾದಾರರ ಖಾತೆಗಳಿಗೆ ಬಡ್ಡಿದರ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.

