alex Certify ತಾಯಿ ಸತ್ತ ನೋವಿನಲ್ಲಿ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಸತ್ತ ನೋವಿನಲ್ಲಿ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ

ತನ್ನ ತಾಯಿ ಮೃತಪಟ್ಟ ನೋವನ್ನು ಭರಿಸಲಾರದೆ ಯುವತಿಯೊಬ್ಬಳು ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಸಂಗ ನಡೆದಿದೆ.

ದೆಹಲಿಯ ಏಮ್ಸ್ ನಲ್ಲಿ ತನ್ನ ತಾಯಿ ಕ್ಯಾನ್ಸರ್ ನಿಂದ ಮೃತಪಟ್ಟ ನಂತರ 23 ವರ್ಷದ ಮಗಳು ನಾಪತ್ತೆಯಾಗಿದ್ದಳು. ಆದರೆ ಆಕೆಯ ಮೃತದೇಹ ಆಸ್ಪತ್ರೆಯ ಬಳಿ ಪತ್ತೆಯಾಗಿದೆ. ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಕುಟುಂಬದವರು ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯವರಾಗಿದ್ದು, ಪತ್ನಿ ಮೃತಪಟ್ಟ ನಂತರ ಪ್ರಕ್ರಿಯೆಯನ್ನು ಪತಿ ಪೂರೈಸುವ ವೇಳೆ ಮಗಳು ನಾಪತ್ತೆಯಾಗಿದ್ದಳು. ಶನಿವಾರ ಆಕೆಯ ಮೃತದೇಹ ಆಸ್ಪತ್ರೆಯ ಖಾಸಗಿ ವಾರ್ಡ್ ಬ್ಲಾಕ್ ಬಳಿ ಕಂಡುಬಂದಿತ್ತು.

ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆಯು ತನ್ನ ಗೆಳತಿಯರಿಗೆ ಕರೆಮಾಡಿ, ತಾನು ಸಾಯುತ್ತಿರುವುದಾಗಿಯೂ ಹೇಳಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...