alex Certify NCB ಮುಂದೆ ತಪ್ಪೊಪ್ಪಿಕೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NCB ಮುಂದೆ ತಪ್ಪೊಪ್ಪಿಕೊಂಡ ನಟಿ

ಡ್ರಗ್ಸ್ ಚಾಟ್ ವಿಷ್ಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರಣೆ ನಡೆದಿದೆ. ಬೆಳಿಗ್ಗೆ 10 ಗಂಟೆಯಿಂದ ದೀಪಿಕಾ ವಿಚಾರಣೆ ನಡೆಸಿದ ಎನ್ ಸಿಬಿ ಅನೇಕ ವಿಷ್ಯಗಳ ಬಗ್ಗೆ ಮಾಹಿತಿ ಪಡೆದಿದೆ. ಆರಂಭದಲ್ಲಿ ದೀಪಿಕಾ ಒಬ್ಬರನ್ನೇ ವಿಚಾರಣೆ ನಡೆಸಿದ ಅಧಿಕಾರಿಗಳು ನಂತ್ರ ಮ್ಯಾನೇಜರ್ ಕರೀಷ್ಮಾ ಹಾಗೂ ದೀಪಿಕಾರನ್ನು ಒಟ್ಟಿಗೆ ವಿಚಾರಣೆ ಮಾಡಿದ್ದಾರೆ.

ವಿಚಾರಣೆ ವೇಳೆ ಡ್ರಗ್ಸ್ ಚಾಟ್ ಬಗ್ಗೆ ದೀಪಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಡ್ರಗ್ಸ್  ಸೇವನೆ ಬಗ್ಗೆ ದೀಪಿಕಾ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಅನೇಕ ಪ್ರಶ್ನೆಗಳಿಗೆ ದೀಪಿಕಾ ಸರಿಯಾಗಿ ಉತ್ತರ ನೀಡಿಲ್ಲ ಎನ್ನಲಾಗಿದೆ. ಇಂದಿನ ವಿಚಾರಣೆ ಮುಗಿದಿದ್ದು, ಎನ್.ಸಿ.ಬಿ. ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

ಡ್ರಗ್ಸ್ ಚಾಟ್ ನಲ್ಲಿ ಪಾಲ್ಗೊಂಡಿದ್ದೆ ಎಂಬ ದೀಪಿಕಾ ತಪ್ಪೊಪ್ಪಿಗೆ ದೀಪಿಗೆ ದೊಡ್ಡ ಸಮಸ್ಯೆಯಾಗುವ ಸಾಧ್ಯತೆಯಿದೆ. ಕರೀಷ್ಮಾ ಹಾಗೂ ದೀಪಿಕಾ ಇಬ್ಬರು ಮಾತನಾಡಿಕೊಂಡು ಬಂದಿದ್ದಾರೆ ಎಂದು ಎನ್.ಸಿ.ಬಿ. ಅಂದಾಜಿಸುತ್ತಿದೆ. ಗೋವಾದಲ್ಲಿ ದೀಪಿಕಾ ಜೊತೆಗಿದ್ದ ಕರೀಷ್ಮಾ ಆರೋಗ್ಯದಲ್ಲಿ ಏರುಪೇರಾಗಿದೆ. ಸೆಪ್ಟೆಂಬರ್ 25ರಂದು ವಿಚಾರಣೆ ಬರ್ತೇನೆ ಎಂದಿದ್ದರು. ಚಾಟ್ ನಲ್ಲಿ ಮಾಲ್ ಇದ್ಯಾ ಎಂದು ದೀಪಿಕಾ ಪ್ರಶ್ನೆ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...