alex Certify ಎಲ್ಲರೆದುರಲ್ಲೇ ಮಹಿಳೆಯನ್ನು ಕೊಚ್ಚಿ ಕೊಂದ ಮೂರನೇ ಗಂಡ ಸೇರಿ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರೆದುರಲ್ಲೇ ಮಹಿಳೆಯನ್ನು ಕೊಚ್ಚಿ ಕೊಂದ ಮೂರನೇ ಗಂಡ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಅರ್ಚನಾ ರೆಡ್ಡಿ ಹತ್ಯೆ ಮಾಡಿದ್ದ ಮೂರನೇ ಪತಿ ಸೇರಿ ಇಬ್ಬರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಅರ್ಚನಾ ರೆಡ್ಡಿಯ ಮೂರನೇ ಪತಿ ನವೀನ್ ಮತ್ತು ಅನೂಪ್ಗ ಅವರನ್ನು ಬಂಧಿಸಲಾಗಿದೆ. ಐವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಚ್ಚಿ ಕೊಂದಿದ್ದರು. ಹೊಸ ರೋಡ್ ಸಿಗ್ನಲ್ ಬಳಿ ಅರ್ಚನಾ ರೆಡ್ಡಿಯನ್ನು ಹತ್ಯೆ ಮಾಡಿದ್ದರು. ಬೆಂಗಳೂರು ನಗರ ಆನೇಕಲ್ ತಾಲೂಕಿನ ಜಿಗಣಿ ಮೂಲದ ಅರ್ಚನಾ ರೆಡ್ಡಿ(38) ಅವರನ್ನು ಹತ್ಯೆ ಮಾಡಲಾಗಿತ್ತು. ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ದೃಶ್ಯ ಬೆಚ್ಚಿ ಬೀಳಿಸುವಂತಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...