alex Certify ರಾತ್ರಿ ಗಂಡ ಇದ್ದಾಗಲೇ ಗೃಹಿಣಿ ಮನೆಗೆ ಬಂದ ಗೆಳೆಯ, ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಗಂಡ ಇದ್ದಾಗಲೇ ಗೃಹಿಣಿ ಮನೆಗೆ ಬಂದ ಗೆಳೆಯ, ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

ಬೆಂಗಳೂರು: ಅಕ್ರಮ ಸಂಬಂಧದ ವಿಚಾರದಲ್ಲಿ ಮಹಿಳೆಯನ್ನು 16 ಸಲ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಲೇಔಟ್ ನಲ್ಲಿ ಘಟನೆ ನಡೆದಿದೆ.

40 ವರ್ಷದ ಮಹಿಳೆ ಕೊಲೆಯಾಗಿದ್ದು, ಆಕೆಯ ಪತಿ 55 ವರ್ಷದ ಧನು ಮತ್ತು ಪ್ರಿಯಕರ 36 ವರ್ಷದ ವಡಿವೇಲು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ ಪತಿ ಧನು ಮನೆಯಲ್ಲಿದ್ದ ಸಂದರ್ಭದಲ್ಲಿ ಪ್ರಿಯಕರ ವಡಿವೇಲು ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿ ಮಹಿಳೆ ಕೊಲೆ ಮಾಡಲಾಗಿದ್ದು 16 ಬಾರಿ ಇರಿದ ಗುರುತುಗಳು ಪತ್ತೆಯಾಗಿವೆ.

ಮಹಿಳೆಯ ಪ್ರಿಯಕರ ಮತ್ತು ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಹತ್ಯೆ ಮಾಡಿದವರು ಯಾರು ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...