alex Certify ಕಾಮದ ಮದದಲ್ಲಿ ಮಗಳ ಮೇಲೆ ಮುಗಿಬಿದ್ದು ಪ್ರಾಣ ಕಳೆದುಕೊಂಡ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದ ಮದದಲ್ಲಿ ಮಗಳ ಮೇಲೆ ಮುಗಿಬಿದ್ದು ಪ್ರಾಣ ಕಳೆದುಕೊಂಡ ಪಾಪಿ

ಚಂಡೀಗಡ: ವ್ಯಕ್ತಿಯೊಬ್ಬ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಆತನನ್ನು ಮಕ್ಕಳೊಂದಿಗೆ ಸೇರಿ ಪತ್ನಿ ಕೊಲೆ ಮಾಡಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಲೂಧಿಯಾನಾದ ಸುಂದರ್ ನಗರ ನಿವಾಸಿಯಾಗಿರುವ 46 ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಕೊಲೆ ಮಾಡಿದ್ದು ಇದಕ್ಕೆ 20 ವರ್ಷದ ಪುತ್ರ ಮತ್ತು 15 ವರ್ಷದ ಪುತ್ರಿ ಸಾಥ್ ನೀಡಿದ್ದಾರೆ. ಪತ್ನಿಗೆ ಎರಡನೇ ಮದುವೆ ಇದಾಗಿದ್ದು, ಮೊದಲ ಪತಿಯಿಂದ ಇಬ್ಬರು ಮಕ್ಕಳಿದ್ದಾರೆ.

ಶನಿವಾರ ರಾತ್ರಿ ಕೊಲೆಯಾದ ವ್ಯಕ್ತಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಅಪ್ರಾಪ್ತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಪತ್ನಿ ಮತ್ತು ಮಕ್ಕಳಿಗೆ ಬೆದರಿಕೆ ಹಾಕಿ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಈ ವೇಳೆ ಆಕ್ರೋಶಗೊಂಡ ಪತ್ನಿ, ಮಕ್ಕಳೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ.

ಕೊಲೆಯಾಗಿರುವ ವ್ಯಕ್ತಿ 2014ರಲ್ಲಿ ತನ್ನ ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಎಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 6 ತಿಂಗಳು ಜೈಲಿನಲ್ಲಿ ಕಳೆದ ಆರೋಪಿ ಕುಟುಂಬ ರಾಜಿ ಮಾಡಿಕೊಂಡಿದ್ದರಿಂದ ಕುಟುಂಬದವರೊಂದಿಗೆ ವಾಸವಾಗಿದ್ದ. ನಂತರದಲ್ಲಿ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದಾದ ಮೇಲೆ ಪತ್ನಿಯ ಸಹೋದರಿ ಮೇಲೆಯೂ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಅದೇ ರೀತಿ ಶನಿವಾರ ಮದ್ಯಪಾನ ಮಾಡಿ ಮನೆಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಪತ್ನಿ, ಮಕ್ಕಳು ಸೇರಿ ಕೊಲೆ ಮಾಡಿದ್ದಾರೆ. ಪತ್ನಿ ಹಾಗೂ ಮಕ್ಕಳು ತಾವೇ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಲೂಧಿಯಾನ ಎಸಿಪಿ ಗುರುವಿಂದರ್ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...