alex Certify BREAKING: ಅಡುಗೆ ತಯಾರಿಸುವ ವಿಚಾರಕ್ಕೆ ಜಗಳವಾಗಿ ಯುವಕನ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಡುಗೆ ತಯಾರಿಸುವ ವಿಚಾರಕ್ಕೆ ಜಗಳವಾಗಿ ಯುವಕನ ಕೊಲೆ

ಬೆಂಗಳೂರು: ಅಡುಗೆ ತಯಾರಿಸುವ ವಿಚಾರಕ್ಕೆ ಜಗಳವಾಗಿ ಯುವಕನ ಕೊಲೆ ಮಾಡಿದ ಘಟನೆ ಜೆ.ಪಿ. ನಗರದ ಪಬ್ ನಲ್ಲಿ ನಡೆದಿದೆ.

ಚಾಕುವಿನಿಂದ ಇರಿದು ಪಶ್ಚಿಮಬಂಗಾಳದ 22 ವರ್ಷದ ಸಾಗರ್ ಎಂಬುವವನನ್ನು ಕೊಲೆ ಮಾಡಲಾಗಿದೆ. ಸಾಗರ್ ಮತ್ತು ಮೌಸಿಕ್ ಪಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಸರಿಯಾಗಿ ಕೆಲಸ ಮಾಡಲ್ಲ ಎಂದು ಮೌಸಿಕ್ ಸಾಗರ್ ಮೇಲೆ ಹಲ್ಲೆ ಮಾಡಿದ್ದಾನೆ.

ಈ ವೇಳೆ ಸಾಗರ್ ಹೊಟ್ಟೆ, ಎದೆಗೆ ಚಾಕುವಿನಿಂದ ಮೌಸಿಕ್ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಾಗರ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆಯ ನಂತರ ಮೌಸಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...