alex Certify ಮ್ಯಾಟ್ರಿಮೋನಿಯ ಹೆಸರಲ್ಲಿ ಮಹಿಳೆಯರಿಗೆ ವಂಚನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಟ್ರಿಮೋನಿಯ ಹೆಸರಲ್ಲಿ ಮಹಿಳೆಯರಿಗೆ ವಂಚನೆ..!

ಆನ್‌ಲೈನ್‌ನಲ್ಲಿ ಮದುವೆ ವೆಬ್‌ಸೈಟ್‌ಗಳು ಸಾಕಷ್ಟಿವೆ. ತಮ್ಮ ತಮ್ಮ ಸಂಗಾತಿಗಳನ್ನು ಹುಡುಕಿಕೊಳ್ಳಲು ಇದೊಂದು ಒಳ್ಳೆ ವೇದಿಕೆ ಅಂತಾರೆ ಅನೇಕರು. ಆದರೆ ಈ ಮೂಲಕವೂ ಮೋಸ ಮಾಡುವವರಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೂ ಮದುವೆಯ ಹೆಸರಿನಲ್ಲಿ ವಂಚನೆ ನಡೆದಿದೆ.

ಹೌದು, ಈ ಘಟನೆ ನಡೆದಿರುವುದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಮದುವೆಯಾಗೋದಾಗಿ ಮಹಿಳೆಯರಿಬ್ಬರನ್ನು ನಂಬಿಸಿದ ಯುವಕರು ಇವರುಗಳಿಂದ ಸುಮಾರು 63 ಲಕ್ಷ ಹಣ ದೋಚಿದ್ದಾರೆ. ಜಯನಗರ ಹಾಗೂ ಜಾಲಹಳ್ಳಿಯ ಇಬ್ಬರು ಮಹಿಳೆಯರು ಎಂದು ಹೇಳಲಾಗುತ್ತಿದೆ.

ಜಯನಗರದ ಮಹಿಳೆಗೆ ದಿನೇಶ್ ಆಚಾರ್ಯ ಎಂಬಾತ ಮ್ಯಾಟ್ರಿಮೋನಿಯಾದಲ್ಲಿ ಪರಿಚಯವಾಗಿದ್ದಾನೆ. ಪ್ರತಿನಿತ್ಯ ಕಾಲ್ ಮಾಡಿ ಮಾತನಾಡುವ ಮೂಲಕ ಆ ಮಹಿಳೆಯ ನಂಬಿಕೆ ಗಿಟ್ಟಿಸಿದ್ದಾನೆ. ಇದೇ ನಂಬಿಕೆಯಿಂದ 5.65 ಲಕ್ಷವನ್ನು ಆತನಿಗೆ ನೀಡಿದ್ದಾಳೆ. ಇತ್ತ ಜಾಲಹಳ್ಳಿಯ ಮಹಿಳೆಗೂ ಇದೇ ವೆಬ್‌ಸೈಟ್ ಮೂಲಕ ಆದಿತ್ಯ ಎಂಬಾತ ಪರಿಚಯವಾಗಿದ್ದಾನೆ.

ತಾನು ಲಂಡನ್‌ನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ ಈತ, ಮದುವೆಯಾಗಿ ಲಂಡನ್‌ನಲ್ಲಿ ಸೆಟ್ಟಲ್ ಆಗೋಣ ಎಂದು ನಂಬಿಸಿದ್ದಾನೆ. ಇದಕ್ಕಾಗಿ ಆ ಮಹಿಳೆಯಿಂದ ಹಂತಹಂತವಾಗಿ ಸುಮಾರು 57 ಲಕ್ಷ ಹಣ ಪೀಕಿದ್ದಾನೆ. ಗಿಫ್ಟ್ ಕೊಡುವ ನೆಪದಲ್ಲೂ ಹಣ ಪೀಕಿದ್ದಾನೆ. ಈ ಎರಡು ಪ್ರಕರಣ ಸಂಬಂಧ ಇದೀಗ ಪಶ್ಚಿಮ ವಿಭಾಗದ ಸೈಬರ್ ಕ್ರೈಂನಲ್ಲಿ ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...