ರಾಜಸ್ತಾನದಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ. ಜಲೋರ್ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಆಕೆಯ ಇಬ್ಬರು ಸ್ನೇಹಿತರು ಅತ್ಯಾಚಾರವೆಸಗಿದ್ದಾರೆ.
ವಿದ್ಯಾರ್ಥಿನಿಗೆ ಇಬ್ಬರು ಸ್ನೇಹಿತೆಯರಿದ್ದಾರೆ. ಅವ್ರ ಮೂಲಕ ಆರೋಪಿ ಪೀಡಿತೆಗೆ ಮೊಬೈಲ್ ಕೊಡಿಸಿದ್ದನಂತೆ. ಕೆಲ ದಿನಗಳ ಹಿಂದೆ ಆಕೆಯನ್ನು ನಂಬಿಸಿ ಆಕೆ ಮೇಲೆ ಅತ್ಯಾಚಾರವೆಸಗಿದ್ದನಂತೆ. ಅದ್ರ ವಿಡಿಯೋ ಮಾಡಿ ಪೀಡಿತೆಗೆ ಹೆದರಿಸುತ್ತಿದ್ದನಂತೆ. ನಂತ್ರ ಮತ್ತಿಬ್ಬರು ಸ್ನೇಹಿತರು ಪೀಡಿತೆ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆಕೆ ತಂದೆ ಆರೋಪ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಪೀಡಿತೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.