HomeBeautyಸೌಂದರ್ಯವರ್ಧಕವಾಗಿ ಪೌಷ್ಟಿಕಾಂಶದಿಂದ ಕೂಡಿದ ʼಸಪೋಟಾʼ

ಸೌಂದರ್ಯವರ್ಧಕವಾಗಿ ಪೌಷ್ಟಿಕಾಂಶದಿಂದ ಕೂಡಿದ ʼಸಪೋಟಾʼ

ಸಪೋಟಾ ಹಣ್ಣು ಪೌಷ್ಟಿಕಾಂಶದಿಂದ ಕೂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಇದು ಸಹಕಾರಿ. ಹಾಗಾಗಿ ಸಪೋಟಾವನ್ನು ಚರ್ಮ ಮತ್ತು ಕೂದಲಿನ ಸೌಂದರ್ಯಕ್ಕಾಗಿ ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.

*1 ಚಮಚ ಸಪೋಟಾ ತಿರುಳನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಹಾಲು, 1 ಚಮಚ ಕಡಲೆಹಿಟ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಒಣಗಿದ ಬಳಿಕ ಉಗುರ ಬೆಚ್ಚನೆ ನೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆ 2 ಬಾರಿ ಬಳಸುವುದರಿಂದ ಚರ್ಮವು ಕಾಂತಿಯುಕ್ತವಾಗುತ್ತದೆ.

 *ಸೀಳು ಕೂದಲಿನ ಸಮಸ್ಯೆಯನ್ನು ನಿವಾರಿಸಲು ಚಿಕ್ಕುವನ್ನು ಕಂಡೀಷನರ್ ಆಗಿ ಬಳಸಬಹುದು. ಸಪೋಟಾ ಹಣ್ಣಿನ ಸಿಪ್ಪೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದಕ್ಕೆ 100ಗ್ರಾಂನಷ್ಟು ಮೆಂತ್ಯ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಬಳಸುವ ಎಣ್ಣೆಯಲ್ಲಿ ಸೇರಿಸಿ 3ದಿನಗಳ ಕಾಲ ಬಿಸಿಲಿನಲ್ಲಿ ಇಡಿ. ಇದನ್ನು ವಾರಕ್ಕೊಮ್ಮೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ . ಇದರಿಂದ ಕೂದಲು ಕವಲೊಡೆಯುವುದು ನಿವಾರಣೆಯಾಗಿ ಕೂದಲು ಮೃದುವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular