HomeBeautyಇಲ್ಲಿದೆ ಕಲೆರಹಿತ ಮುಖಕ್ಕೆ ಸೂಪರ್ ಟಿಪ್ಸ್....!

ಇಲ್ಲಿದೆ ಕಲೆರಹಿತ ಮುಖಕ್ಕೆ ಸೂಪರ್ ಟಿಪ್ಸ್….!

ಮುಖ ಚೆಂದವಾಗಿ ಕಾಣಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ತ್ವಚೆಯ ಮೇಲೆ ಚಿಕ್ಕ ಮೊಡವೆಯಾದರೂ ಕಿರಿಕಿರಿಯಾಗಿ ಬಿಡುತ್ತದೆ. ಅದರ ಕಲೆ ಇದ್ದರಂತೂ ಕೇಳುವುದೇ ಬೇಡ. ಇಲ್ಲಿ ಸುಲಭವಾಗಿ ಮಾಡಬಹುದಾದ ಒಂದು ಫೇಸ್ ಪ್ಯಾಕ್ ಇದೆ ಟ್ರೈ ಮಾಡಿ. ಇದು ಕಲೆ ನಿವಾರಿಸುವುದರ ಜತೆಗೆ ಮುಖದ ಕಾಂತಿ ಕೂಡ ಹೆಚ್ಚಿಸುತ್ತದೆ.

1 ಕಪ್ ಮಸೂರ್ ದಾಲ್ ಅನ್ನು ನಯವಾಗಿ ಪುಡಿ ಮಾಡಿಕೊಳ್ಳಿ. ನಂತರ ಇದನ್ನು ಒಂದು ಬಾಟಲಿನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳಿ. ರಾತ್ರಿ ಮಲಗುವ ಮೊದಲು ಈ ಮಸೂರ್ ದಾಲ್ ಅನ್ನು 2 ಟೀ ಸ್ಪೂನ್ ತೆಗೆದುಕೊಂಡು ಒಂದು ಬೌಲ್ ಗೆ ಹಾಕಿ ಅದಕ್ಕೆ 1 ಟೀ ಸ್ಪೂನ್ ಹಸಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಡಿ. ಬೆಳಿಗ್ಗೆ ತನಕ ಇದು ಹಾಗೆಯೇ ಇರಲಿ.

ಬೆಳಿಗ್ಗೆ ಇದಕ್ಕೆ 1 ಟೀ ಸ್ಪೂನ್ ಅಕ್ಕಿ ಹಿಟ್ಟು, 1 ಟೀ ಸ್ಪೂನ್ ಆಲೂಗಡ್ಡೆ ರಸ, 4 ಹನಿ ಲಿಂಬೆಹಣ್ಣಿನ ರಸ, ¼ ಟೀ ಸ್ಪೂನ್ ಜೇನುತುಪ್ಪ, ¼ ಟೀ ಸ್ಪೂನ್ ಕಸ್ತೂರಿ ಅರಿಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ನಿಧಾನಕ್ಕೆ ಮಸಾಜ್ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖ ತೊಳೆದುಕೊಳ್ಳಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular