HomeEntertainmentCCL 2026 Final: ಕರ್ನಾಟಕ ಬುಲ್ಡೋಜರ್ಸ್ ದಾಳಿಗೆ ನಲುಗಿದ ಬೆಂಗಾಲ್ ಟೈಗರ್ಸ್; ಗೆಲುವಿನತ್ತ ಕಿಚ್ಚ ಬಾಯ್ಸ್

CCL 2026 Final: ಕರ್ನಾಟಕ ಬುಲ್ಡೋಜರ್ಸ್ ದಾಳಿಗೆ ನಲುಗಿದ ಬೆಂಗಾಲ್ ಟೈಗರ್ಸ್; ಗೆಲುವಿನತ್ತ ಕಿಚ್ಚ ಬಾಯ್ಸ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರ ಆವೃತ್ತಿಗೆ ಇಂದು ( ಫೆಬ್ರವರಿ 1 ) ನಡೆಯುತ್ತಿರುವ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ. ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳು ಟ್ರೋಫಿಗಾಗಿ ಅಂತಿಮ ಕಾದಾಟ ನಡೆಸಿವೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ ಜಾಯ್ ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರನೂ ಸಹ ಬುಲ್ಡೋಜರ್ಸ್ ಬೌಲಿಂಗ್ ಅಬ್ಬರದ ಎದುರು ಸಮರ್ಥರಾಗಿ ನಿಲ್ಲಲಿಲ್ಲ. ಜಾಯ್ 54 ರನ್ ಗಳಿಸಿದರೆ, ಉದಯ್ 5, ಜ್ಯಾಮಿ 4, ಜಿಶು 17, ರಾಹುಲ್ 10, ಯೂಸುಫ್ 1, ರತ್ನದೀಪ್ ಡಕ್‌ಔಟ್, ಆದಿತ್ಯ ಡಕ್‌ಔಟ್, ಇಂದ್ರಶಿಶ್ 17 ಹಾಗೂ ಆನಂದ ಅಜೇಯ 12 ರನ್ ಕಲೆಹಾಕಿದರು.

ಈ ಮೂಲಕ 20 ಓವರ್‌ಗಳಲ್ಲಿ 129 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಬೆಂಗಾಲ್ ಟೈಗರ್ಸ್ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 130 ರನ್‌ಗಳ ಸಾಧಾರಣ ಗುರಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಬುಲ್ಡೋಜರ್ಸ್ ಪರ ಪ್ರತಾಪ್ ನಾರಾಯಣ್ ಮೂರು ವಿಕೆಟ್, ಸುನಿಲ್ ರಾವ್ ಎರಡು ವಿಕೆಟ್, ಕರಣ್ ಆರ್ಯನ್ ಹಾಗೂ ಕಾರ್ತಿಕ್ ಜಯರಾಮ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular