alex Certify Live News | Kannada Dunia | Kannada News | Karnataka News | India News - Part 645
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ; ಇಬ್ಬರು ಮಹಿಳೆಯರ ಸ್ಥಿತಿ ಗಂಭೀರ

ಉಡುಪಿ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆ ಬಳಿ ನಡೆದಿದೆ. Read more…

ಬ್ರದರ್ ಸ್ವಾಮಿಗಳಿಂದ ಹಗ್ಗ ತೋರಿಸಿ ಹಾವು ಎಂಬಂತೆ ಬಿಂಬಿಸುವ ಸಾಹಸ: HDK ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ರಾಸಲೀಲೆ ಇರುವ ಪೆನ್ ಡ್ರೈವ್ ಬಹಿರಂಗವಾದ ವಿಚಾರ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ವಾಗ್ವಾದಕ್ಕೆ Read more…

ನನ್ನ ಹೆಸರು ಹೇಳಿಲ್ಲವೆಂದರೆ ಪಾಪ ಅವರಿಗೆ ನಿದ್ದೆಯೇ ಬರಲ್ಲ: HDK ವಿರುದ್ಧ ಡಿಕೆಶಿ ವ್ಯಂಗ್ಯ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಮೂಲಕ ಸಂತ್ರಸ್ತೆಯರ ಅವಮಾನಪಡಿಸಿರುವ ಘಟನೆ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು Read more…

ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕನ ಮನೆಗೆ ಪೊಲೀಸ್ ರಕ್ಷಣೆ

ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಇರುವ ಪೆನ್ ಡ್ರೈವ್ ಹೊಂದಿದ್ದರೆನ್ನಲಾದ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮನೆಗೆ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಹಾಸನ ಜಿಲ್ಲೆ Read more…

Watch |ಪಾಕಿಸ್ತಾನದಲ್ಲಾಗುತ್ತಿರುವ ಹತ್ಯೆಗಳಲ್ಲಿ ಭಾರತದ ಪಾತ್ರವೆಂದ ಪಾಕ್ ISPR ಡಿಜಿ; ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗಿದೆ ಈ ಹೇಳಿಕೆ

ನೆರೆರಾಷ್ಟ್ರ ಪಾಕಿಸ್ತಾನ, ಭಾರತದ ಮೇಲೆ ಮತ್ತೆ ಗೂಬೆ ಕೂರಿಸುವ ಹೇಳಿಕೆ ನೀಡಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವ ಹತ್ಯೆಗಳಲ್ಲಿ ಭಾರತದ ಪಾತ್ರವಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ನ ಮಹಾನಿರ್ದೇಶಕ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೇಘನಾ ಗಾಂವ್ಕರ್

ಚಾರ್ಮಿನಾರ್ ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2010 ರಲ್ಲಿ ತೆರೆಕಂಡ ‘ನಮ್ ಏರಿಯಾಲ್ ಒಂದ್ ದಿನ’ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ Read more…

ಮೇ 10ಕ್ಕೆ ಬಿಡುಗಡೆಯಾಗಲಿದೆ ‘chef ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್

ಆನಂದರಾಜ್ ರಚಿಸಿ ನಿರ್ದೇಶಿಸಿರುವ ಅನಿರುದ್ಧ್ ಅಭಿನಯದ ‘chef ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್ ಇದೆ ಮೇ ಹತ್ತಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ Read more…

ಇಂದು ನಟ ಕಾಶಿನಾಥ್ ಜನ್ಮದಿನ

2018 ಜನವರಿ 16ರಂದು ನಿಧನರಾದ ಖ್ಯಾತ ಹಿರಿಯ ನಟ ಕಾಶಿನಾಥ್ ಅವರ ವಿಭಿನ್ನ ಸಿನಿಮಾಗಳು ಇಂದಿಗೂ ಎಲ್ಲರ ಮನೆ ಮಾತಾಗಿವೆ. ಇಂದು ಕಾಶಿನಾಥ್ ಅವರ ಜನ್ಮದಿನವಾಗಿದ್ದು, ಹಲವಾರು ಹಿರಿಯ Read more…

ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಭಗವಂತ ಖೂಬಾ ಅವರು ತಮ್ಮ ಶರ್ಟ್ Read more…

ವಿಶ್ವದಾದ್ಯಂತ ಎಲ್ಲಾ ಕೋವಿಶೀಲ್ಡ್ ಲಸಿಕೆ ವಾಪಸ್ ಪಡೆದ ಅಸ್ಟ್ರಾಜೆನಿಕಾ

ನವದೆಹಲಿ: ವಿಶ್ವದಾದ್ಯಂತ ಕೋವಿಶೀಲ್ಡ್ ಎಲ್ಲಾ ಲಸಿಕೆಗಳನ್ನು ಅಸ್ಟ್ರಾಜೆನಿಕಾ ಕಂಪನಿ ವಾಪಸ್ ಪಡೆದುಕೊಂಡಿದೆ. ಲಸಿಕೆ ತಯಾರಿಸುವುದಿಲ್ಲ ಮತ್ತು ಸರಬರಾಜು ಮಾಡುವುದಿಲ್ಲ ಎಂದು ಅಸ್ಟ್ರಾಜೆನಿಕಾ ಕಂಪನಿ ತಿಳಿಸಿದೆ ಲಸಿಕೆ ಹಿಂಡೆದಿರುವುದು ಕಾಕತಾಳಿಯವಷ್ಟೇ. Read more…

ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ತನಿಖೆಗೆ ಮೂರು ತಂಡ ರಚನೆ

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಡಿ.ವೈ.ಎಸ್.ಪಿ. ಮುರುಳಿ ಅವರ ನೇತೃತ್ವದಲ್ಲಿ Read more…

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತ್ನಿಯನ್ನೇ ಕೊಂದ ಪತಿ: ಪೊಲೀಸ್ ವಿಚಾರಣೆಗೆ ಹೆದರಿ ಪ್ರಿಯತಮೆ ಆತ್ಮಹತ್ಯೆ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಪತ್ನಿಯನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ ರವಿಚಂದ್ರ ಬಂಧಿತ ಆರೋಪಿ. ದೊಡ್ಡಬಳ್ಳಾಪುರ Read more…

BREAKING: ಹೈದರಾಬಾದ್ ನಲ್ಲಿ ಘೋರ ದುರಂತ: ಗೋಡೆ ಕುಸಿದು 7 ಮಂದಿ ಸಾವು

ಹೈದರಾಬಾದ್ ನಗರದ ಬಾಚುಪಲ್ಲಿಯ ರೇಣುಕಾ ಎಲ್ಲಮ್ಮ ಕಾಲೋನಿಯಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಬಾಚುಪಲ್ಲಿಯ ರೇಣುಕಾ ಎಲ್ಲಮ್ಮ ಕಾಲೋನಿಯಲ್ಲಿ ನಿರ್ಮಾಣ Read more…

BREAKING: ಚುನಾವಣಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಗೆ ಬೆಂಕಿ, ಹಲವು ಬೂತ್ ಗಳ ಇವಿಎಂಗಳಿಗೆ ಹಾನಿ

ಮಧ್ಯಪ್ರದೇಶದ ಬೇತಲ್ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವಾರು ಇವಿಎಂಗಳಿಗೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆದರೆ, ಘಟನೆಯಲ್ಲಿ Read more…

ರೌಡಿಶೀಟರ್ ಕೊಲೆ ಮಾಡಿದ್ದ 9 ಮಂದಿಗೆ ಜೀವಾವಧಿ ಶಿಕ್ಷೆ

ಹಾಸನ: ರೌಡಿಶೀಟರ್ ಮಾಸ್ತಿಗೌಡ ಕೊಲೆ ಮಾಡಿದ್ದ 9 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ರೌಡಿಶೀಟರ್ ಯಾಚೇನಹಳ್ಳಿ ಚೇತು ಸೇರಿದಂತೆ 9 ಮಂದಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೆಚ್ಚುವರಿ Read more…

ʼಮದರ್ಸ್‌ ಡೇʼ ದಿನ ಉಡುಗೊರೆಯಾಗಿ ನೀಡಲು ಇಲ್ಲಿವೆ ಬೆಸ್ಟ್‌ ಸ್ಕೂಟರ್‌

ಮದರ್ಸ್‌ ಡೇ ಬಹಳ ವಿಶೇಷವಾದ ಆಚರಣೆಗಳಲ್ಲೊಂದು. ಈ ದಿನ ಅಮ್ಮನಿಗೆ ಏನಾದರೂ ವಿಶೇಷ ಉಡುಗೊರೆ ಕೊಡಬೇಕು ಅನ್ನೋದು ಎಲ್ಲರ ಆಸೆ. ತಾಯಿಯನ್ನು ಸಂತೋಷಪಡಿಸಲು ಮತ್ತು ಅವರ ಕೆಲಸವನ್ನು ಸುಲಭಗೊಳಿಸುವ Read more…

ಆಗುಂಬೆ ಘಾಟಿಯಲ್ಲಿ 3500 ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ

ರಾಷ್ಟ್ರೀಯ ಹೆದ್ದಾರಿ 169ಎ ಮಲ್ಪೆ -ತೀರ್ಥಹಳ್ಳಿ ಚತುಷ್ಪಥ ಯೋಜನೆ ಪ್ರಗತಿಯಲ್ಲಿದೆ. ಈ ನಡುವೆ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಮತ್ತೆ ಚರ್ಚೆಯಾಗತೊಡಗಿದೆ. ಕೇಂದ್ರ ಹೆದ್ದಾರಿ ಸಚಿವ Read more…

ಮನೆಯಲ್ಲಿ ಇಲ್ಲದಿದ್ದರೂ ಕಾರಿನಲ್ಲಿರಲೇಬೇಕು ಏರ್ ಪ್ಯೂರಿಫೈಯರ್; ಇದರ ಹಿಂದಿದೆ ಈ ಕಾರಣ

ಕಳೆದ ಕೆಲವು ವರ್ಷಗಳಿಂದ ವಾಯು ಮಾಲಿನ್ಯದ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಂತೂ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾತಾವರಣ ಸಂಪೂರ್ಣ ಕಲುಷಿತವಾಗುತ್ತದೆ. ಅನೇಕ ಜನರು Read more…

ಕಾರ್ ಮೇಲೆ ಮರ ಬಿದ್ದು ಯುವಕ ಸಾವು: ಮೂರು ಇಲಾಖೆಗಳ ವಿರುದ್ಧ ಎಫ್ಐಆರ್ ದಾಖಲು

ಮಂಡ್ಯ: ಮಂಡ್ಯ ನಗರದಲ್ಲಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಕಾರ್ ಮೇಲೆ ಮರ ಬಿದ್ದು ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂರು ಇಲಾಖೆಗಳ ವಿರುದ್ಧ Read more…

ಈ ಹಣ್ಣುಗಳನ್ನು ತಿನ್ನಿ ಕ್ಯಾನ್ಸರ್ ನಿಂದ ದೂರವಿರಿ

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು Read more…

ಎಚ್ಚರ: ನೀವು ಸೇವಿಸುವ ಆ ಜ್ಯೂಸ್ ನಲ್ಲಿರುತ್ತದೆ 5 ಟೀ ಸ್ಪೂನ್ ನಷ್ಟು ಸಕ್ಕರೆ

ಹಣ್ಣುಗಳು ಮತ್ತು ಜ್ಯೂಸ್‌ಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಪ್ಯಾಕ್ ಮಾಡಿದಾಗ ಹೆಚ್ಚುವರಿ ಪ್ರಮಾಣದ ಸಕ್ಕರೆ ಬಳಕೆಯಿಂದ ಆರೋಗ್ಯಕರವೆಂದು ಪರಿಗಣಿಸುವುದು ಕಷ್ಟವಾಗುತ್ತದೆ. ಇದು ಕೇವಲ ಜ್ಯೂಸ್ ಅಷ್ಟೇ ಅಲ್ಲ, Read more…

ಬ್ಯೂಟಿ ಪಾರ್ಲರ್ ತೆರೆಯಲು ಪತಿಯಿಂದ 2 ಲಕ್ಷ‌ ರೂ. ಪಡೆದ ಪತ್ನಿ; ಅದೇ ಹಣದಲ್ಲಿ ಗಂಡನ ಕೊಲೆಗೆ ಸುಪಾರಿ

ಬ್ಯೂಟಿ ಪಾರ್ಲರ್ ತೆರೆಯಲು ಗಂಡನಿಂದ ಹಣ ಪಡೆದು ಅದೇ ಹಣದಿಂದ ಗಂಡನ ಕೊಲೆಗೆ ಸುಪಾರಿ ಕೊಟ್ಟ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ಗಂಡನ ಕೊಲೆಯಾದ 24 ಗಂಟೆಯೊಳಗೇ Read more…

ಓರ್ವ ಹುಡುಗನಿಗಾಗಿ ರಸ್ತೆಯಲ್ಲೇ ಹುಡುಗಿಯರ ಫೈಟ್; ಶಾಕಿಂಗ್‌ ವಿಡಿಯೋ ವೈರಲ್

ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ರಸ್ತೆಯಲ್ಲೇ ಕಿತ್ತಾಡುವ ಪ್ರಸಂಗಗಳು ಹೆಚ್ಚಾಗುತ್ತಿದ್ದು ಇಂಥದ್ದೇ ಮತ್ತೊಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಅದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಓರ್ವ ಹುಡುಗನಿಗಾಗಿ ಕಿತ್ತಾಡಿಕೊಂಡಿದ್ದಾರೆ. ವೀಡಿಯೊದಲ್ಲಿ Read more…

ಪೋಷಕರ ಜತೆ ತೆರಳಲು ನಿರಾಕರಿಸಿದ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಪ್ರಾಪ್ತೆ

ಬೆಂಗಳೂರು: ಮನೆ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಪ್ರಾಪ್ತೆ ಪೋಷಕರೊಂದಿಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ನಾಪತ್ತೆಯಾಗಿರುವ ತನ್ನ ಅಪ್ರಾಪ್ತ Read more…

ನೀವು ಹೋದ ಕಡೆಯಲ್ಲೆಲ್ಲಾ ಬರುತ್ತೆ ಈ ಎಸಿ; ಶರ್ಟ್ ನೊಂದಿಗೆ ಧರಿಸಬಹುದು ಏರ್ ಕಂಡೀಷನರ್…!

ಬಿಸಿಲ ಬೇಗೆ ಹೆಚ್ಚಾಗಿದ್ದು ಸೆಖೆ ತಡೆಯಲು ಆಗುತ್ತಿಲ್ಲ. ಮನೆಯಲ್ಲಿದ್ದರೆ ಫ್ಯಾನ್ ಅಥವಾ ಎಸಿ ಬಳಸಬಹುದು ಆದರೆ ಹೊರಗಡೆ ಇದ್ದಾಗ ಕೂಲ್ ಆಗಲು ಪರ್ಯಾಯ ಮಾರ್ಗವಿದೆಯಾ ಎಂದು ಯೋಚಿಸುವವರಿಗೆ ಸೋನಿ Read more…

ಸನ್ ಬರ್ನ್‌ ದೂರವಾಗಿಸಲು ಬಳಸಿ ‘ಟೀ ಬ್ಯಾಗ್’

ನೀವು ಬೆಳಗೆದ್ದು ಚಹಾ ಕುಡಿಯುವವರೇ, ಅದರಲ್ಲೂ ನಿಮಗೆ ಗ್ರೀನ್ ಟೀ ಎಂದರೆ ಬಹಳ ಇಷ್ಟವೇ…? ಒಮ್ಮೆ ಬಳಸಿದ ಟೀ ಪುಡಿಯ ಬ್ಯಾಗ್ ಅನ್ನು ಹಾಗೆ ಎಸೆದು ಬಿಡಬೇಡಿ. ಅದರಲ್ಲಿ Read more…

ಎಸ್.ಎಂ. ಕೃಷ್ಣ ಆರೋಗ್ಯ ವಿಚಾರಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಅನಾರೋಗ್ಯದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ್ದಾರೆ. ಎಸ್.ಎಂ. Read more…

ಇಂದು H.D. ರೇವಣ್ಣ ಕಸ್ಟಡಿ ಅಂತ್ಯ; ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಎಸ್ಐಟಿ

ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿರುವ ಹಾಗೂ ಕಿಡ್ನಾಪ್ ಪ್ರಕರಣದಲ್ಲಿ ಎಸ್ಐಟಿ ತಂಡದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಈ Read more…

ಬೇಸಿಗೆಯಲ್ಲಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಇಲ್ಲಿದೆ ಸುಲಭ ಟಿಪ್ಸ್‌

ಬೇಸಿಗೆಯಲ್ಲಿ ವಿಪರೀತ ಸೆಖೆಯಿದ್ದಾಗ ತಣ್ಣನೆಯ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಮೊಸರು ಬೇಗ ಹುಳಿಯಾಗುತ್ತದೆ. ಅದರ ರುಚಿ ಕೆಡುತ್ತದೆ. ಸೆಖೆಗಾಲದಲ್ಲೂ ಮೊಸರು ಹುಳಿಯಾಗದಂತಿರಲು ಕೆಲವೊಂದು Read more…

BIG NEWS: ಬ್ಯಾಡ್ಜ್ ಧರಿಸಿ ಮತಗಟ್ಟೆ ಪ್ರವೇಶ; ಬಿಜೆಪಿ ಅಭ್ಯರ್ಥಿ ವಿರುದ್ಧ ಕೇಸ್

ಕರ್ನಾಟಕದಲ್ಲಿ ಮಂಗಳವಾರದಂದು 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆದಿದ್ದು, ಬಿರು ಬಿಸಿಲಿನಲ್ಲೂ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಮತದಾನ ಸಂದರ್ಭದಲ್ಲಿ ಬೀದರ್ ಕ್ಷೇತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...