alex Certify Karnataka | Kannada Dunia | Kannada News | Karnataka News | India News - Part 1878
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಕೊರೊನಾ ಬಿಗ್ ಶಾಕ್: ಒಂದೇ ದಿನ ದಾಖಲೆಯ 9058 ಜನರಿಗೆ ಸೋಂಕು, 90999 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇವತ್ತು 9058 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,51,481 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 5159 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. Read more…

ಕೊರೊನಾ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಸ್ಪತ್ರೆಗೆ ದಾಖಲು

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನನಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದ್ದು ಯಾವುದೇ Read more…

ಹೆಚ್.ಡಿ ಕುಮಾರಸ್ವಾಮಿ ಮತ್ತಿನಲ್ಲಿ ಹೇಳಿದ್ದಾರಾ…?: ಸಚಿವ ಸಿ.ಟಿ. ರವಿ ಪ್ರಶ್ನೆ

ಬೆಂಗಳೂರು: ಡ್ರಗ್ಸ್ ಜಾಲದಿಂದ ಬಂದ ಹಣದಿಂದ ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಬೀಳಿಸಿದ್ದರು ಎಂಬ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, Read more…

ಗೊತ್ತಿರದ ವಿಚಾರದ ಬಗ್ಗೆ ಮಾತನಾಡುವುದು ತಪ್ಪು ಎಂದ ಕಿಚ್ಚ ಸುದೀಪ್

ತುಮಕೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಈ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ. ನನಗೆ ಗೊತ್ತಿರದ ವಿಚಾರದ ಬಗ್ಗೆ ಮಾತನಾಡುವುದು Read more…

ನವಜಾತ ಕಂದನನ್ನು ಬಿಸಾಕಿ ಹೋದ ಪೋಷಕರು

ರಾಯಚೂರು: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಜಮೀನಿನಲ್ಲಿ ಶಿಶು ಪತ್ತೆಯಾಗಿದ್ದು, ನವಜಾತ Read more…

ಕುತೂಹಲ ಮೂಡಿಸಿದ ಕಿಚ್ಚ ಸುದೀಪ್, ಇಂದ್ರಜಿತ್ ಲಂಕೇಶ್ ಸಿದ್ಧಗಂಗಾ ಮಠದ ಭೇಟಿ

ತುಮಕೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಾಳೆ ಕಿಚ್ಚ ಸುದೀಪ್ ಅವರ Read more…

ಮೂರು ಹೆಸರಲ್ಲಿ ಡ್ರಗ್ ಡೀಲ್ ಮಾಡುತ್ತಿದ್ದ ಕಿಂಗ್ ಪಿನ್

ಬೆಂಗಳೂರು: ಡ್ರಗ್ಸ್ ಕಿಂಗ್ ಪಿನ್ ಅನಿಕಾ ಕುರಿತಾಗಿ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಅನಿಕಾ ಮೂರು ಹೆಸರುಗಳಲ್ಲಿ ಡ್ರಗ್ಸ್ ಡೀಲ್ ಮಾಡುತ್ತಿದ್ದಳು ಎಂಬ ವಿಷಯ ಹೊರಬಂದಿದೆ. ಬಂಧಿತ ಡ್ರಗ್ಸ್ Read more…

ಸಚಿವೆ ಶಶಿಕಲಾ ಜೊಲ್ಲೆ ಚೇತರಿಕೆಗೆ ಸಿಎಂ ಹಾರೈಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ 14 Read more…

ಧರ್ಮಸ್ಥಳದಲ್ಲಿ ಶಿವಾನಿ ತುಂಟಾಟ ಕಣ್ತುಂಬಿಕೊಂಡ ಭಕ್ತರು

ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿ ಆನೆಗೆ ಜನಿಸಿದ ಮುದ್ದುಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮೊಮ್ಮಗಳು Read more…

ಬಿಗ್ ನ್ಯೂಸ್: ಮುಂದಿನ ತಿಂಗಳು ಗ್ರಾಮ ಪಂಚಾಯಿತಿ ಚುನಾವಣೆ…?

ಬೆಂಗಳೂರು: ಅವಧಿ ಮುಗಿದರೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿದೆ. ಅಕ್ಟೋಬರ್ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ Read more…

ವೃದ್ಧ ದಂಪತಿ ಕೊಲೆ ಆರೋಪಿ ಮೇಲೆ ಫೈರಿಂಗ್

ಹಾಸನದ ಜಿಲ್ಲೆಯಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಮೇಲೆ ಅಣ್ಣೇನಹಳ್ಳಿಯಲ್ಲಿ ಫೈರಿಂಗ್ Read more…

ಗುಡ್ ನ್ಯೂಸ್: ಕೊರೊನಾ ಸೋಂಕಿತರ ಜೀವ ಉಳಿಸಿದೆ ಈ ಸಂಜೀವಿನಿ, ಪರಿಣಾಮಕಾರಿಯಾಗಿದೆ ಔಷಧ

ಬೆಂಗಳೂರು: ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ 73 ಕೊರೋನಾ ಸೋಂಕಿತರ ಚಿಕಿತ್ಸೆಗೆ ರೆಮ್ ಡೆಸಿವಿರ್ ಬಳಕೆ ಮಾಡಲಾಗಿದ್ದು ಐಸಿಯುನಿಂದ ಹೊರ ಬಂದ ರೋಗಿಗಳು ಚೇತರಿಸಿಕೊಂಡಿದ್ದಾರೆ. ರೆಮ್ ಡೆಸಿವಿರ್ Read more…

ಅಕ್ಕಿ ಎಟಿಎಂ: ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನೀರಿನ ಎಟಿಎಂ ಮಾದರಿಯಲ್ಲೇ ಅಕ್ಕಿ ಎಟಿಎಂ ಅಳವಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ Read more…

ಡ್ರಗ್ ಮಾಫಿಯಾದಿಂದ ಸರ್ಕಾರ ಬುಡಮೇಲು, HDK ಹೇಳಿಕೆ: ಸಚಿವ ಸುಧಾಕರ್ ರಾಜೀನಾಮೆ ಸವಾಲು

ಬೆಂಗಳೂರು: ಡ್ರಗ್ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಆದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ವೈದ್ಯಕೀಯ Read more…

ಮಾಫಿಯಾ ಹಣದಿಂದ ಸರ್ಕಾರ ಬುಡಮೇಲು: ರಾತ್ರೋರಾತ್ರಿ ವಿಮಾನ ಬದಲಿಸಿದ ಸುಧಾಕರ್, ಮುಂಬೈ ವೀರರಿಗೆ ಗೊತ್ತು – HDK ತಿರುಗೇಟು

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದ್ದಾರೆ. ಬಹುಶಃ ಅವರಿಗೆ ಸ್ಮರಣ ಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ Read more…

ಕೊರೋನಾ ಬಿಗ್ ಶಾಕ್: ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೊನಾ ಪಾಸಿಟಿವ್…? ಸಾವು…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 6495 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 172, ಬಳ್ಳಾರಿ 365, ಬೆಳಗಾವಿ 154, ಬೆಂಗಳೂರು ಗ್ರಾಮಾಂತರ 73, ಬೆಂಗಳೂರು Read more…

ಕೊರೊನಾ ಆತಂಕದ ನಡುವೆ ಗುಡ್ ನ್ಯೂಸ್: ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಭಾರೀ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 6495 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 7238 ಜನ ಸೋಂಕಿತರು ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,42,423 ಕ್ಕೆ Read more…

ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಜಾಲಕ್ಕೆ ಬೀಳುವ ಅವಕಾಶ ಹೆಚ್ಚು: ಹೆಚ್ ವಿಶ್ವನಾಥ್

ಮಂಡ್ಯ: ರಾಜಕಾರಣಿಗಳ ಮಕ್ಕಳು ಆರ್ಥಿಕವಾಗಿ ಸದೃಢವಾಗಿರುವುದರಿಂದ ಡ್ರಗ್ಸ್ ನಂತಹ ವ್ಯಸನಗಳಿಂದ ಕೆಡಲು ಹೆಚ್ಚು ಅವಕಾಶಗಳಿರುತ್ತವೆ. ಹಾಗಾಗಿ ಡ್ರಗ್ಸ್ ಜಾಲವನ್ನು ಮಟ್ಟಹಾಕಲೇಬೇಕು ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ. Read more…

ಡ್ರಗ್ಸ್ ಜಾಲದಲ್ಲಿನ ಸ್ಯಾಂಡಲ್ ವುಡ್ ಸ್ಟಾರ್ ಗಳ ಹೆಸರು ಕೇಳಿ ಸಿಸಿಬಿ ಅಧಿಕಾರಿಗಳಿಗೆ ಶಾಕ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಸಿಸಿಬಿ ವಿಚಾರಣೆ ಅಂತ್ಯಗೊಂಡಿದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಕನ್ನಡ ಚಿತ್ರರಂಗದ Read more…

ಡ್ರಗ್ಸ್ ಮಾಫಿಯಾದಲ್ಲಿ ಶಾಸಕರ ಮಕ್ಕಳೇ ಬಾಗಿ

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಶಾಸಕರ ಮಕ್ಕಳೇ ಬಾಗಿಯಾಗಿದ್ದಾರೆ. ಈ ಹಿಂದೆ ಶಾಸಕರೊಬ್ಬರು ವಿಧಾನಸೌಧದಲ್ಲಿ ಕಣ್ಣೀರಿಟ್ಟಿದ್ದರು. ಅಂದು ನಾನೂ ಕೂಡ ಅಲ್ಲಿದ್ದೆ. ಅಂದೇ ನಾನು ಡ್ರಗ್ಸ್ ಮಾಫಿಯಾ ಮಟ್ಟಹಾಕುವಂತೆ ಸರ್ಕಾರವನ್ನು Read more…

ಡ್ರಗ್ಸ್ ಮಾಫಿಯಾ ಕರ್ನಾಟಕಕ್ಕೆ ಕಳಂಕ ಎಂದ ಚಾಲೆಂಜಿಂಗ್ ಸ್ಟಾರ್

ದಾವಣಗೆರೆ: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಯಾರೆಲ್ಲ ಇದ್ದಾರೆ ಎಂಬುದು ತನಿಖೆಯಿಂದ ಹೊರಬರಲಿ. ವಿಚಾರಣೆ ನಡೆಯುತ್ತಿರುವ ವೇಳೆ Read more…

ಸಿಸಿಬಿಯಿಂದ ಇಂದ್ರಜಿತ್ ವಿಚಾರಣೆ ಆರಂಭ; ಯಾರ ಒತ್ತಡವೂ ನನಗಿಲ್ಲ ಎಂದ ನಿರ್ದೇಶಕ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ ಹಾಜರಾಗಿದ್ದು, ವಿಚಾರಣೆ ಆರಂಭವಾಗಿದೆ. ಸಿಸಿಬಿ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ Read more…

ತಲಕಾವೇರಿ ಭೂಕುಸಿತ: ಮತಾಂತರಗೊಂಡ ಅರ್ಚಕರ ಪುತ್ರಿಯರಿಗೆ ಪರಿಹಾರ ಬೇಡ

ಕೊಡಗು ಜಿಲ್ಲೆ ತಲಕಾವೇರಿ ಭೂಕುಸಿತ ಪ್ರಕರಣದಲ್ಲಿ ಮೃತಪಟ್ಟ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ಯ ಅವರ ಪುತ್ರಿಯರಿಗೆ ಪರಿಹಾರ ಕೊಡಬಾರದೆಂದು ಒತ್ತಾಯ ಕೇಳಿಬಂದಿದೆ. 5 ಲಕ್ಷ ರೂ. ಪರಿಹಾರದ ಚೆಕ್ Read more…

ಶಾಕಿಂಗ್: ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ವಿಜಯಪುರದ ಯೋಧ ಸಾವು

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಬಡಿಗೇರ(31) ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯನಿರತರಾಗಿದ್ದ ವೇಳೆಯಲ್ಲೇ ಮೃತಪಟ್ಟಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅವರು ಸಾವನ್ನಪ್ಪಿದ್ದು ಭಾರತೀಯ Read more…

ಒಂಬತ್ತು ಗಂಟೆ ಸುಖವಾಗಿ ನಿದ್ರೆ ಮಾಡಿ ಲಕ್ಷ ರೂ. ಗೆಲ್ಲಿ…!

ನೀವೆಂದಾದರೂ ‘Sleep Internship’ ಎಂಬ ಅಭಿಯಾನದ ಬಗ್ಗೆ ಕೇಳಿದ್ದೀರಾ? ಬೆಂಗಳೂರು ಮೂಲದ ನವೋದ್ಯಮ ’ವೇಕ್‌ಫಿಟ್’ ಸ್ಥಾಪಿಸಿದ ಈ ಅಭಿಯಾನದಲ್ಲಿ, ಸತತ 100 ದಿನಗಳ ಮಟ್ಟಿಗೆ ಪ್ರತಿನಿತ್ಯ 9 ಗಂಟೆಗಳ Read more…

ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಸೆ. 8 ಕೊನೆ ದಿನ

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯದ ಅಧೀನಕ್ಕೊಳಪಟ್ಟ ಸ್ನಾತಕೋತ್ತರ ವಿಭಾಗಗಳ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣಕಾಲಿಕ ಅಥವಾ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ Read more…

ಶಾಕಿಂಗ್: ಬೈಕ್ ನಲ್ಲಿ ತೆರಳುತ್ತಿದ್ದವನ ಭೀಕರ ಹತ್ಯೆ – ಬೆಚ್ಚಿಬಿದ್ದ ಜನ

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಸಂಗಾಪುರದಲ್ಲಿ ಕೊಡಲಿಯಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಾಬು ಕೋಬಾಳ(32) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ Read more…

ಹುಚ್ಚು ನಾಯಿ ತಡೆಗೆ ಮನೆ ಮುಂಭಾಗದ ಗೇಟ್ ಗೆ ವಿದ್ಯುತ್ ಹರಿಬಿಟ್ಟ ವ್ಯಕ್ತಿ ಅದೇ ತಂತಿ ತುಳಿದು ಸಾವು

ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದ ಕಾನಕೇರಿಯಲ್ಲಿ ಮನೆ ಮುಂಭಾಗದ ಗೇಟಿಗೆ ವಿದ್ಯುತ್ ಹರಿಬಿಟ್ಟ ವ್ಯಕ್ತಿ ಅದೇ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. 58 ವರ್ಷದ ನಿಂಗಪ್ಪ Read more…

ಒಂದೇ ವಾರದಲ್ಲಿ 10 ಕ್ಕೂ ಹೆಚ್ಚು ಸರಗಳವು, ಬೆಳ್ಳಂಬೆಳಗ್ಗೆ ಆರೋಪಿಗಳಿಗೆ ಗುಂಡೇಟು

ಬೆಂಗಳೂರಿನಲ್ಲಿ ಗುಂಡುಹಾರಿಸಿ ಇಬ್ಬರು ಸರಗಳ್ಳರನ್ನು ಬಂಧಿಸಲಾಗಿದೆ. ಬೆಳ್ಳಂಬೆಳಗ್ಗೆ ಇಸ್ಕಾನ್ ದೇವಾಲಯದ ಬಳಿ ಘಟನೆ ನಡೆದಿದೆ. ಕಳೆದ ಒಂದು ವಾರದಲ್ಲಿ ಆರೋಪಿಗಳು 10 ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದರು. ಇಂದು Read more…

ತುಪ್ಪ ಸವರುವುದನ್ನು ಕೈಬಿಡಿ, ಒಳಮೀಸಲಾತಿ ಜಾರಿ ಮಾಡಿ: HDK ಆಗ್ರಹ

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಒಳ ಮೀಸಲಾತಿ ವಿಚಾರದಲ್ಲಿ ತುಟಿಗೆ ತುಪ್ಪ ಸವರುವ ನೀತಿಗಳನ್ನು ಸರ್ಕಾರಗಳು ಇನ್ನಾದರೂ ಬಿಡಬೇಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...