alex Certify ಒಂದೇ ದಿನದಲ್ಲಿ 100 ನಿಸಾನ್ ಕಾರುಗಳ ಡೆಲಿವರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನದಲ್ಲಿ 100 ನಿಸಾನ್ ಕಾರುಗಳ ಡೆಲಿವರಿ…!

ನಿಸ್ಸಾನ್‌ನ ಸಬ್‌ 4-ಮೀಟರ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಆದ ಮ್ಯಾಗ್ನೈಟ್‌ ಕಾರನ್ನು ಡಿಸೆಂಬರ್‌ 2, 2020ರಂದು ಬಿಡುಗಡೆ ಮಾಡಿದಾಗಿನಿಂದಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ಕಾರಿನ ಎಕ್ಸ್‌ಇ ಅವತರಣಿಕೆಯ ಆರಂಭಿಕ ಬೆಲೆಯು 4.99 ಲಕ್ಷ ರೂ.ಗಳಷ್ಟಿದೆ.

ನಿಸ್ಸಾನ್‌ನ ಈ ಪೈಪೋಟಿದಾಯಕ ಬೆಲೆಯ ಕಾರಣ ಮ್ಯಾಗ್ನೈಟ್‌‌ ಕಾರಿಗೆ ನಿರೀಕ್ಷೆ ಮೀರಿ ಬೇಡಿಕೆ ಇದ್ದು ಬುಕಿಂಗ್ ಭರಾಟೆ ಜೋರಾಗಿದೆ. ಕಾರಿನ ಡೆಲಿವರಿ ಆರಂಭಗೊಳ್ಳುವ ಮುನ್ನವೇ ದೇಶಾದ್ಯಂತ 10,000ಕ್ಕೂ ಹೆಚ್ಚು ಕಾರುಗಳನ್ನು ಬುಕಿಂಗ್ ಮಾಡಲಾಗಿತ್ತು. ಬುಕಿಂಗ್ ಮಾಡಿದ ಮೇಲೆ ಎಂಟು ತಿಂಗಳ ಬಳಿಕ ಕಾರು ಸಿಗಲಿದೆ ಎಂದರೂ ಸಹ ಗ್ರಾಹಕರು ಬುಕಿಂಗ್ ಮಾಡಲು ಸರತಿಯಲ್ಲಿ ನಿಲ್ಲುತ್ತಿದ್ದಾರೆ.

ಬೆಂಗಳೂರಿನ ಸೂರ್ಯ ನಿಸ್ಸಾನ್ ಡೀಲರ್‌‌ ಒಂದೇ ದಿನದಲ್ಲಿ 100 ಮ್ಯಾಗ್ನೈಟ್ ಕಾರುಗಳನ್ನು ಡೆಲಿವರಿ‌ ಮಾಡುವ ಮೂಲಕ ಭಾರೀ ಸದ್ದು ಮಾಡಿದೆ. ಮೆಗಾ ಡೆಲಿವರಿ ಕಾರ್ಯಕ್ರಮ ಇಟ್ಟುಕೊಂಡಿದ್ದ ಸೂರ್ಯ, ಈ ಎಲ್ಲ ಗ್ರಾಹಕರನ್ನು ಒಂದು ವೃತ್ತದಲ್ಲಿ ನಿಲ್ಲಿಸಿ ಕಾರಿನ ಕೀಗಳನ್ನು ಹಸ್ತಾಂತರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...