alex Certify India | Kannada Dunia | Kannada News | Karnataka News | India News - Part 1217
ಕನ್ನಡ ದುನಿಯಾ
    Dailyhunt JioNews

Kannada Duniya

55 ಸಾವಿರ ಕೋಟಿ ಮೌಲ್ಯದ ಸಬ್‌ ಮರೀನ್ ಖರೀದಿಗೆ ಮುಂದಾದ ಭಾರತ

ಭಾರತೀಯ ನೌಕಾಪಡೆಗೆ ಆರು‌ ಸಬ್ ಮರೀನ್‌ ಖರೀದಿಗೆ 55 ಸಾವಿರ ಕೋಟಿ ರೂ. ಮೌಲ್ಯದ ಪ್ರಕ್ರಿಯೆ ಆರಂಭಿಸಲು ರಕ್ಷಣಾ ಇಲಾಖೆ ಸಜ್ಜಾಗಿದೆ. ಚೀನಾದ ಮುಂದೆ ನೌಕಾಪಡೆಯಲ್ಲಿ ಹಿಂದಿರುವ ಭಾರತ, Read more…

ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ ಅನುಭವಿಸಿದ ಮಲ್ಯ

ವಿದೇಶಕ್ಕೆ ಓಡಿ ಹೋಗಿರುವ ವಿಜಯ್ ಮಲ್ಯಗೆ ಸುಪ್ರಿಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಮಲ್ಯ ನ್ಯಾಯಾಂಗ ನಿಂದನೆ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಸಾವಿರಾರು ಕೋಟಿ ಸಾಲ Read more…

ಸಿಸಿ ಟಿವಿ ಮೂಲಕ ಮುಂದಿನ ಮನೆಯವರ ಮೇಲೆ ಕಣ್ಣಿಟ್ಟಿದ್ದ ವ್ಯಕ್ತಿ

ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ಯಾರೂ ಸಹಿಸುವುದಿಲ್ಲ. ಬೇರೆಯವರ ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧವೂ ಹೌದು. ಆಗ್ರಾದಲ್ಲಿ ಮುಂದಿನ ಮನೆಯವರ ಖಾಸಗಿತನಕ್ಕೆ ಧಕ್ಕೆ ತಂದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ. ಮೂರು Read more…

ಕೋವಿಡ್-19 ಚುಚ್ಚುಮದ್ದಿನ ವೆಚ್ಚ ಭರಿಸಲಿವೆಯೇ ಆರೋಗ್ಯ ವಿಮಾ ಸಂಸ್ಥೆಗಳು…? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್‌ಗೆ ಚುಚ್ಚುಮದ್ದು ಕಂಡುಹಿಡಿಯಲು ಜಗತ್ತಿನಾದ್ಯಂತ ಯತ್ನಗಳು ಸಾಗುತ್ತಿವೆ. ಬಹಳಷ್ಟು ಚುಚ್ಚುಮದ್ದುಗಳ ಪ್ರಯೋಗಗಳು ಮೂರನೇ ಹಂತದಲ್ಲಿದ್ದು, ವೈರಾಣುಗಳ ವಿರುದ್ಧ ಮದ್ದು ಆದಷ್ಟು ಬೇಗ ಬರಲಿದೆ ಎಂಬ ಭರವಸೆಗಳನ್ನು ಹುಟ್ಟಿಸುತ್ತಲೇ Read more…

ಬಿಗ್ ನ್ಯೂಸ್: ಕೊರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗೆ ಬರಲಿದೆ ನಿಯಮಾವಳಿ

ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುವ ಕಾರಣದಿಂದ ಮುಂಬರುವ ಹಬ್ಬದ ಮಾಸಕ್ಕೆ ಸರ್ಕಾರ ಕೆಲವೊಂದು ನಿಯಮಾವಳಿಗಳನ್ನು ತರಲು ಮುಂದಾಗಿವೆ. ಹಬ್ಬ ಹರಿದಿನಗಳಲ್ಲಿ ಜನರು ಒಂದೆಡೆ ಸೇರುವ Read more…

ಸೋಮವಾರವೂ ದೇಶದಲ್ಲಿ ಕೊರೊನಾ ಅಬ್ಬರ: ಒಂದೇ ದಿನ 78,512 ಸೋಂಕಿತರು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ದಿನ ನಿತ್ಯ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 78,512 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ Read more…

BIG NEWS: ಕೊರೊನಾದಿಂದ ಸಂಪೂರ್ಣ ಗುಣಮುಖರಾದ ಅಮಿತ್ ಶಾ ಡಿಸ್ಚಾರ್ಜ್

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕು ತಗಲಿದ ಅವರು ಈ ಮೊದಲು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ Read more…

ಹುಡುಗಿಯನ್ನು ಜೂಟಾಟಕ್ಕೆ ಕರೆದ ಬಾಲಕರಿಂದ ಆಘಾತಕಾರಿ ಕೃತ್ಯ

ನವದೆಹಲಿ: ತ್ರಿಪುರಾದ ಹಳ್ಳಿಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 8 ವರ್ಷದ ಬಾಲಕಿ ಮೇಲೆ 7 ಮಂದಿ ಹದಿಹರೆಯದ ಬಾಲಕರು ಅತ್ಯಾಚಾರ ಎಸಗಿದ್ದಾರೆ. ಬಾಲಕಿಗೆ ಪರಿಚಿತರಾಗಿರುವ ಬಾಲಕರು ಜೂಟಾಟಕ್ಕೆ ಆಹ್ವಾನಿಸಿ Read more…

ಜ್ವಾಲಾಮುಖಿಯ ಮಿಮಿಕ್ರಿ ಜೊತೆ ಶಿಕ್ಷಕರ ವಿಜ್ಞಾನ ಪಾಠ

ಕೊರೊನಾ ಲಾಕ್‌ಡೌನ್‌ ನಡುವೆ ಆನ್ಲೈನ್ ಕ್ಲಾಸ್‌ಗಳ ಮೂಲಕ ತಮ್ಮ ವಿದ್ಯಾರ್ಥಿಗಳೊಂದಿಗೆ ಟಚ್‌ನಲ್ಲಿರುವ ಶಿಕ್ಷಕರು ಬಹಳ ಕ್ರಿಯಾಶಾಲಿ ಐಡಿಯಾಗಳ ಮೂಲಕ ಬೋರ್‌ ಆಗದಂತೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. Read more…

ಅದಕ್ಷ, ಭ್ರಷ್ಟ ನೌಕರರಿಗೆ ‘ಮೋದಿ ಸರ್ಕಾರ’ದಿಂದ ಬಿಗ್ ಶಾಕ್: ಕೆಲಸದಿಂದಲೇ ಗೇಟ್ ಪಾಸ್

ನವದೆಹಲಿ: ಅದಕ್ಷ ಮತ್ತು ಭ್ರಷ್ಟ ನೌಕರರನ್ನು ಗುರುತಿಸಿ ಅಂತವರಿಗೆ ಅವಧಿ ಪೂರ್ವದಲ್ಲೇ ನಿವೃತ್ತಿ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ Read more…

ಕೊರೊನಾ ನಿಯಂತ್ರಣ, ಲಸಿಕೆ: ದೇಶದ ಜನತೆಗೆ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ದೇಶದಲ್ಲಿ ಕೊರೋನಾ ಸೋಂಕು ದೀಪಾವಳಿ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ Read more…

ಮಳೆ ನೀರಿನಲ್ಲಿ ನಾಯಿಯ ಸಖತ್‌ ಚಿನ್ನಾಟ

ಪ್ರಾಣಿಗಳು ವಿನೋದದಲ್ಲಿ ತೊಡಗಿರುವುದನ್ನು ನೋಡುವುದು ಬಲೇ ಆನಂದಕರ ಅನುಭವ. ಲ್ಯಾಬ್ರಡಾರ್‌ ನಾಯಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ರಸ್ತೆಯಲ್ಲಿ ಕುಳಿತಿರುವ ನಾಯಿಯು, ಮಳೆ ನೀರು ಹರಿದುಕೊಂಡು Read more…

ಶಾಕಿಂಗ್…! ಬಸ್ ನಲ್ಲೆ ನಡೆದಿದೆ ನಡೆಯಬಾರದ ಘಟನೆ

ಮಥುರಾ: ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಶನಿವಾರ ಖಾಸಗಿ ಬಸ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ದೆಹಲಿ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ Read more…

‘ಪ್ರಾಮಾಣಿಕತೆ’ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ಕಳೆದು ಹೋಗಿದ್ದ ಪರ್ಸ್ ಒಂದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಕೇರಳದ ವ್ಯಕ್ತಿಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಆ ವ್ಯಾಲೆಟ್‌ನಲ್ಲಿ 65,000 ರೂ.ಗಳು ಇತ್ತು ಎಂದು ತಿಳಿದುಬಂದಿದೆ. ಕೊಚ್ಚಿಯ ನೌಕಾ ರಿಪೇರಿ Read more…

ನೋಡಲು ಸೊಗಸಾಗಿದೆ ಚಿರತೆ ನೀರು ಕುಡಿಯುವ ವಿಡಿಯೋ

ಚಿರತೆ ಅಮ್ಮ-ಮಗು ಜೋಡಿಯೊಂದರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಚಿರತೆ ಹಾಗೂ ಅದರ ಮರಿಯು ಜೊತೆಯಾಗಿ ನೀರು ಕುಡಿಯುತ್ತಿರುವ ಈ ಚಿತ್ರವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ Read more…

ಪತಿಯ ಹೆಸರಲ್ಲಿ ಪ್ರಿಯಕರನ ಪಾಸ್ಪೋರ್ಟ್: ಪ್ರವಾಸಕ್ಕೆ ಹೋಗಿ ಸಿಕ್ಕಿಬಿದ್ದ ಪತ್ನಿ

ನವದೆಹಲಿ: ಗಂಡನ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಮಹಿಳೆ ವಿರುದ್ಧ ದೂರು ದಾಖಲಾಗಿದೆ. ಕಳೆದ ಮಾರ್ಚ್ ನಲ್ಲಿ Read more…

ಕೊರೊನಾ ಗೆದ್ದ 110 ವರ್ಷದ ಕೇರಳ ವೃದ್ದೆ

ಕೇರಳದ 110 ವರ್ಷದ ವೃದ್ದೆ ಕೊರೊನಾದಿಂದ ಗುಣ ಹೊಂದಿದ್ದಾರೆ. ಕೊರೊನಾದಿಂದ ಗುಣಮುಖವಾದ ಕೇರಳ ರಾಜ್ಯದ ಅತಿ ಹಿರಿಯ ಮಹಿಳೆ ಅವರಾಗಿದ್ದಾರೆ. ಮಂಜೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಅವರು ಶನಿವಾರ Read more…

8ನೇ ಮಹಡಿಯಿಂದ ಬಿದ್ದರೂ ವರ್ಕ್ ಆದ ಮೊಬೈಲ್…!

ಮೊಬೈಲ್‌ ಗಳು ಎಂದರೆ ಸೂಕ್ಷ್ಮ ವಸ್ತುಗಳು. ಸ್ವಲ್ಪ ಕೆಳಗೆ ಬಿದ್ದರೂ, ಹೊಡೆದು ಹೋಗುತ್ತವೆ ಎನ್ನುವ ಮಾತಿತ್ತು. ಆದರೀಗ ಜಿಯೊಮಿಯ ಮೊಬೈಲ್ ಒಂದು ಎಂಟನೇ ಮಹಡಿಯಿಂದ ಬಿದ್ದರೂ, ಏನು ಆಗದೇ Read more…

ಭೀಕರ ಅಪಘಾತ: ಲಾರಿಗೆ ಡಿಕ್ಕಿ, ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಲಾರಿಗೆ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿಯಲ್ಲಿ ನಡೆದಿದೆ. ಕರ್ನಾಟಕದಿಂದ ಕಾರ್ ನಲ್ಲಿ ರಾಜ್ಯದ ನಾಲ್ವರು ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ. Read more…

ಬದಲಾಯ್ತು ಹೈದ್ರಾಬಾದ್ ನೆಕ್ಲೆಸ್ ರಸ್ತೆ ಹೆಸರು

ಹೈದ್ರಾಬಾದ್: ನಗರದ ಪ್ರಸಿದ್ಧ ನೆಕ್ಲೆಸ್ ರಸ್ತೆಗೆ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ಹೆಸರನ್ನು ಮರು ನಾಮಕರಣ ಮಾಡಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆದೇಶಿಸಿದ್ದಾರೆ. Read more…

ಮಕ್ಕಳು, ವಿಜ್ಞಾನ, ಯೋಧರು, ಗೇಮ್ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಸ್ವಾವಲಂಬಿ ಭಾರತ ದೇಶದ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ವಿಜ್ಞಾನದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿ Read more…

ಬಿಗ್ ನ್ಯೂಸ್: ‘ಮನ್ ಕಿ ಬಾತ್’ನಲ್ಲಿ ಚನ್ನಪಟ್ಟಣದ ಗೊಂಬೆ ಬಗ್ಗೆ ಮೋದಿ ಮಾತು

ನವದೆಹಲಿ: 68ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿ ಕೊರೋನಾ ಕಾರಣದಿಂದಾಗಿ ಕಾರ್ಯಕ್ರಮಗಳ ಆಯೋಜನೆ ವೇಳೆ ಜನ ಎಚ್ಚರಿಕೆ ವಹಿಸಿದ್ದಾರೆ. ಆನ್ಲೈನ್ ನಲ್ಲಿ ಗಣೇಶೋತ್ಸವ ಆಚರಿಸಲಾಗಿದೆ‌‌‌‌.‌ ಕೊರೋನಾ ನಡುವೆ Read more…

ಎನ್ ಕೌಂಟರ್: ಮೂವರು ಉಗ್ರರನ್ನು ಸದೆಬಡಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಕಳೆದ ಎರಡು ದಿನಗಳಿಂದಲೂ ಕಾಶ್ಮೀರದಲ್ಲಿ ಉಗ್ರರು ಹಾಗೂ Read more…

ಬಿಗ್ ನ್ಯೂಸ್: ಕೇಂದ್ರ ಸಂಪುಟಕ್ಕೆ ಮೇಜರ್ ಸರ್ಜರಿ – ಸಿಂಧಿಯಾಗೆ ಚಾನ್ಸ್ ಗ್ಯಾರಂಟಿ, ರಾಜ್ಯದಿಂದ ಒಬ್ಬರಿಗೆ ಅವಕಾಶ…?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಸೆಪ್ಟಂಬರ್ ನಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದ್ದು, ಇತ್ತೀಚೆಗೆ ಕಾಂಗ್ರೆಸ್ ನಿಂದ Read more…

ಬಿಗ್ ನ್ಯೂಸ್: ಶಾಲಾ ಹಂತದಿಂದಲೇ ಪಠ್ಯದಲ್ಲಿ ಕೃಷಿ ಶಿಕ್ಷಣ

ನವದೆಹಲಿ: ಕೃಷಿ ಸಂಬಂಧಿತ ಶಿಕ್ಷಣವನ್ನು ಮಾಧ್ಯಮಿಕ ಶಿಕ್ಷಣ ಹಂತದಿಂದಲೇ ನೀಡುವ ಅಗತ್ಯವಿದೆ ಎನ್ನುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರಪ್ರದೇಶದ ಝಾನ್ಸಿಯಲ್ಲಿ ರಾಣಿ Read more…

ದೇಶದಲ್ಲಿ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ಪತ್ತೆ

ನವದೆಹಲಿ: ದೇಶಾದ್ಯಂತ ಸೆ.1 ರಿಂದ ಅನ್ ಲಾಕ್ 4.0 ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸವೂ ಮುಂದುವರೆದಿದ್ದು, Read more…

ಇಂದೋರ್‌ IITಯಿಂದ ಸಂಸ್ಕೃತದಲ್ಲಿ ಪ್ರಾಚೀನ ಗಣಿತ – ವಿಜ್ಞಾನ ಬೋಧನೆ

ಇಂದೋರ್ ‌ನ ಭಾರತೀಯ ತಾಂತ್ರಿಕ ವಿಶ್ವವಿದ್ಯಾಲಯವು ಗಣಿತ ಹಾಗೂ ವೈಜ್ಞಾನಿಕ ಜ್ಞಾನಾರ್ಜನೆಗೆಂದು ವಿಶಿಷ್ಟವಾದ ಹೆಜ್ಜೆಯೊಂದನ್ನು ಇಟ್ಟಿದೆ. ಸಂಸ್ಕೃತದ ಪುರಾತನ ಲಿಪಿಗಳ ಅಧ್ಯಯನಕ್ಕೆ IIT-I ಚಾಲನೆ ಕೊಟ್ಟಿದೆ. “Understanding Classical Read more…

ಜೆಇಇ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಈ ವರ್ಷದ ಜೆಇಇ(ಮೇನ್) ಪರೀಕ್ಷೆಗಳನ್ನು ಸೆಪ್ಟೆಂಬರ್ 1ರಿಂದ 6 ರವರೆಗೆ ಆಯೋಜಿಸಲಾಗಿದೆ. ಈ ಬಾರಿ ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯಬೇಕಿದ್ದು, ಕೋವಿಡ್-19 ಕಾರಣದಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. Read more…

ತಡರಾತ್ರಿಯಿಂದ ನಡೆದ ಕಾರ್ಯಾಚರಣೆ ಅಂತ್ಯ: ಬೆಳ್ಳಂಬೆಳಗ್ಗೆ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಭಾರತೀಯ ಸೇನೆ ಇವತ್ತು 3 ಉಗ್ರರನ್ನು ಹತ್ಯೆಗೈದಿದೆ. ದುರಾದೃಷ್ಟವಶಾತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಎಸ್ಐ ಹುತಾತ್ಮರಾಗಿದ್ದಾರೆ. ಶ್ರೀನಗರದ ಪಂಥಾ Read more…

ವಿಶ್ವದ ಶ್ರೀಮಂತ ದೇಗುಲದ ಆದಾಯದಲ್ಲಿ ಭಾರೀ ಕುಸಿತ: ಮಹತ್ವದ ತೀರ್ಮಾನ ಕೈಗೊಂಡ ಟಿಟಿಡಿ

ತಿರುಪತಿ: ಕೊರೋನಾ ಕಾರಣದಿಂದ ಆದಾಯದಲ್ಲಿ ಭಾರಿ ಕುಸಿತವಾಗಿರುವುದರಿಂದ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ದೈನಂದಿನ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಮಾಸಿಕ ಬಡ್ಡಿ ಪಡೆಯಲು ತೀರ್ಮಾನ ಕೈಗೊಂಡಿದೆ. ದೇವಾಲಯದ ಠೇವಣಿಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...