alex Certify ಕೋಟ್ಯಾಂತರ ಮೌಲ್ಯದ ನೋಟಿನಿಂದ ಧನಲಕ್ಷ್ಮಿ ಅಲಂಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟ್ಯಾಂತರ ಮೌಲ್ಯದ ನೋಟಿನಿಂದ ಧನಲಕ್ಷ್ಮಿ ಅಲಂಕಾರ

Goddess at Telangana Temple Adorned with 'Flowers' Made of Currency Notes worth Rs 1.11 Crore

ಭಕ್ತರು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಸಂಭ್ರಮಿಸುವುದು ಪರಂಪರೆ. ತೆಲಂಗಾಣದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು 1.11 ಕೋಟಿ ರೂ. ಕರೆನ್ಸಿಯಲ್ಲಿ ಅಲಂಕರಿಸಿ ಪೂಜಿಸಿ ಗಮನ ಸೆಳೆಯುವಂತೆ ಮಾಡಿದ್ದಾರೆ.

ಗಡ್ವಾಲ್ ಜಿಲ್ಲೆ ಜೋಗುಲಾಂಬದಲ್ಲಿರುವ ದೇವಸ್ಥಾನದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ದೇವಿಯನ್ನು ವಿವಿಧ ಬಣ್ಣಗಳ ಕರೆನ್ಸಿ ಗಳಿಂದ ಮಾಡಿದ ಹೂವುಗಳ ಹೂಮಾಲೆಯಿಂದ ಅಲಂಕರಿಸಲಾಗಿತ್ತು.

ಆರ್ಯವೈಶ್ಯ ಸಂಘದ ಆಶ್ರಯದಲ್ಲಿ ನಡೆದ ನವರಾತ್ರಿ ಸಂದರ್ಭದಲ್ಲಿ ಈ ಧನಲಕ್ಷ್ಮಿ ಅವತಾರವನ್ನು ಸಾವಿರಾರು ಭಕ್ತರು ಪೂಜಿಸಿದರು. ಜನರಿಂದಲೇ ಸಂಗ್ರಹಿಸಿದ ಹಣದಿಂದ ಅಲಂಕಾರ ಮಾಡಿ ನಂತರ ಹಣವನ್ನು ಅವರಿಗೆ ಹಿಂತಿರುಗಿಸಲಾಗುವ ವಾಡಿಕೆ ಇಲ್ಲಿದೆ. ಈ ಬಾರಿ 50 ಭಕ್ತರು ಅಲಂಕಾರಕ್ಕೆ ಹಣವನ್ನು ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...