HomeKarnatakaಬರಪೀಡಿತ ತಾಲೂಕುಗಳ‌ ಪಟ್ಟಿಗೆ 53 ತಾಲೂಕಗಳ ಸೇರ್ಪಡೆ: ಇಂದೇ ಅಧಿಕೃತ ಘೋಷಣೆ ಎಂದ...

ಬರಪೀಡಿತ ತಾಲೂಕುಗಳ‌ ಪಟ್ಟಿಗೆ 53 ತಾಲೂಕಗಳ ಸೇರ್ಪಡೆ: ಇಂದೇ ಅಧಿಕೃತ ಘೋಷಣೆ ಎಂದ ಡಿಸಿಎಂ ಪರಮೇಶ್ವರ್

ಬೆಂಗಳೂರು: ಬರಪೀಡಿತ ತಾಲೂಕುಗಳ‌ ಪಟ್ಟಿಗೆ ಇಂದು 53 ತಾಲೂಕಗಳನ್ನ‌ ಸೇರ್ಪಡೆಗೊಳಿಸಿ ಇಂದೇ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.

ವಿಧಾನಮಂಡಲ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ಬರದ ವಿಚಾರವಾಗಿ ವಿಶೇಷ ಚರ್ಚೆ ವೇಳೆ ವಿಧಾನಪರಿಷತ್​ನಲ್ಲಿ ಮಾತನಾಡಿದ ಪರಮೇಶ್ವರ್, ಮೊದಲ‌ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಕೆಲ ಶಾಸಕರು ಹಾಗೂ ರೈತರು ತಮ್ಮ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲವೆಂದು ಅಸಮಾಧಾನ ವ್ಯಕ್ತಿಪಡಿಸಿದ್ದರು. ಬಳಿಕ ಮುಂದಿನ ಹಂತದ ಪರಿಶೀಲನೆ ವೇಳೆ 23 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆವು. ಇಂದು 53 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತೇವೆ. ಈ ಮೂಲಕ ಒಟ್ಟು 177 ತಾಲೂಕು ಬರಪೀಡಿತ ತಾಲೂಕು ಘೋಷಣೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಒಟ್ಟು 210ರವರೆಗೆ ತಾಲೂಕು ಘೋಷಣೆ ಮಾಡಬಹುದು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ 852 ಮಿಲಿಮೀಟರ್ ಮಳೆಯಾಗಬೇಕಿತ್ತು. ಆದರೆ, 642 ಮಿಲಿಮೀಟರ್ ಮಳೆ ಮಾತ್ರ ಆಗಿದೆ. ಜೂನ್ ತಿಂಗಳಿನಿಂದ ಈವರೆಗೂ ರಾಜ್ಯದಲ್ಲಿ ಸರಾಸರಿ ಮೈನಸ್ ಶೇ.36ರಷ್ಟು ಮಳೆ ಕೊರತೆಯಾಗಿದೆ. ಶೇ.82ರಷ್ಟು ಬೆಳೆ ನಷ್ಟವಾಗಿದೆ. ಮಳೆ ಕೊರೆತೆಯಿಂದ ಬೆಳೆ ನಾಶವಾಗಿದೆ. 2020ರಲ್ಲಿ ಕೇಂದ್ರದ ಬರ ಮಾನದಂಡ ಆಧರಿಸಿ ಬರಪೀಡಿತ ಎಂದು ಘೋಷಿಸಬೇಕಿದೆ ಎಂದು ಸದನಕ್ಕೆ ವಿವರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ಸದಸ್ಯ ಸಿ.ಟಿ.ರವಿ, ಗದಗ ಜಿಲ್ಲೆ ಈ ಬರ ಪಟ್ಟಿಯಲ್ಲಿ ಇದೆಯಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪರಮೇಶ್ವರ್, ಹೊಸಪಟ್ಟಿಯಲ್ಲಿ ಗದಗ ಸಹ ಸೇರಿದೆ ಎಂದರು. ಅಂದರೆ ರಾಜೀನಾಮೆ ಬೆದರಿಕೆ ಹಾಕಿದ ಮೇಲೆ ಬರ ಪಟ್ಟಿ ಘೋಷಣೆಯಾಗುತ್ತದೆ. ಬರ ಪಟ್ಟಿ ಘೋಷಿಸುವುದರಲ್ಲಿಯೂ ಭ್ರಷ್ಟಾಚಾರವೇ? ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಸದ್ಯ ಒಬ್ಬರ ರಾಜೀನಾಮೆ‌ ತಪ್ಪಿಸಿದರಲ್ಲ ಎಂದು ವ್ಯಂಗ್ಯವಾಡಿದರು.

ಹೆಚ್.ಕೆ ಪಾಟೀಲ್ ಅವರು ರಾಜೀನಾಮೆ ಕೊಡಲಿದ್ದಾರೆ ಎಂದು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರದ ನಿಯಮಾನುಸಾರ ಆಧರಿಸಿ ಬರಪೀಡಿತ ಎಂದು ಘೋಷಿಸಲಾಗುತ್ತದೆ‌. ಮಾನದಂಡ ಉಲ್ಲಂಘಿಸುವುದಾದರೆ ಎಲ್ಲ ತಾಲೂಕುಗಳನ್ನೂ ಬರ ಎಂದು ಘೋಷಿಸಲಾಗುತ್ತದೆ. ಕೇಂದ್ರದಿಂದ ಹಣ ಕೊಡ್ತಾರಾ? ಎಂದು ಡಿಸಿಎಂ ಪ್ರಶ್ನಿಸಿದರು.

ಎಲ್ಲ ತಾಲೂಕುಗಳು ಬರಪೀಡಿತ ಎಂದು ಮಾನದಂಡ ಪ್ರಕಾರ ಬರುವುದಾದರೆ ಮಾಡಲೇಬೇಕು. ಮೊದಲು ರಾಜ್ಯ ಸರ್ಕಾರ ಬರ ಪರಿಹಾರ ಘೋಷಿಸಬೇಕು. ಬಳಿಕ ಕೇಂದ್ರ ಸರ್ಕಾರ ಬಳಿ ಕೇಳಿ. ನಿಮ್ಮ ಬೆಂಬಲಕ್ಕೆ ನಾವು ಬರುತ್ತೇವೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಚರ್ಚೆ ಮುಂದುವರೆಸಿದ ಪರಮೇಶ್ವರ್, ಕಳೆದ ಬಾರಿ ರಾಜ್ಯದಲ್ಲಿ 39 ಸಾವಿರ ಕೋಟಿ ಬರದಿಂದ ನಷ್ಟವಾಗಿತ್ತು. ಕೇಂದ್ರದ ಮಾನದಂಡ ಆಧರಿಸಿ 18 ಸಾವಿರ ಕೋಟಿ ಕೇಳಿದ್ದೆವು. ಅನುದಾನಕ್ಕಾಗಿ ಸುಪ್ರೀಂ ಮೊರೆ ಹೋದ ಬಳಿಕ 3400 ಕೋಟಿ ಕೇಂದ್ರ ಅನುದಾನ ನೀಡಿತ್ತು. ಈ ಬಾರಿ ಬರ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿಗಾಗಿ ಎಲ್ಲಾ ಕ್ಷೇತ್ರಗಳಲ್ಲಿ 1 ಕೋಟಿ ಜೊತೆಗೆ ಬರ ನಿರ್ವಹಣೆಗಾಗಿ 329 ಕೋಟಿ ಮೀಸಲಿಡಲಾಗಿದೆ‌. 101 ತಾಲೂಕಿನಲ್ಲಿ, 18 ಸಾವಿರ ಕೋಟಿ ನಷ್ಟವಾಗಿದ್ದು 3,500 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂತಿಮವಾಗಿ ಮೆಮೊರಾಂಡಂ ಸಲ್ಲಿಸಲಾಗುವುದು.‌ ಈ ಬಗ್ಗೆ ಸರ್ವಪಕ್ಷ ನಿಯೋಗ ಕೊಂಡ್ಯೊಯಲಾಗುವುದು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular