ಪಶ್ಚಿಮ ಬಂಗಾಳದಲ್ಲಿ ಮೇ ತಿಂಗಳ ಕೊನೆಯಲ್ಲಿ ಆಚರಿಸಲಾಗುವ ಪವಿತ್ರ ಬಕ್ರೀದ್ (ಈದ್-ಅಲ್-ಅದಾ) ಹಬ್ಬದ ಸಂಭ್ರಮದ ನಡುವೆಯೇ ಒಂದು ದೊಡ್ಡ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಭಾಜಪ (BJP) ಸರ್ಕಾರವು ಜಾನುವಾರು ಮಾರಾಟ ಮತ್ತು ವಧೆಯ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತಂದ ಬೆನ್ನಲ್ಲೇ, ಈ ಬಾರಿಯ ಹಬ್ಬಕ್ಕೆ ಹಸುಗಳನ್ನು ಖರೀದಿಸಬೇಡಿ ಎಂದು ಮುಸ್ಲಿಂ ಧರ್ಮಗುರುಗಳು ತಮ್ಮ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಒಂದೆಡೆ ಇದು ಕೋಮು ಸೌಹಾರ್ದತೆ ಮತ್ತು ನೆರೆಹೊರೆಯವರ ಭಾವನೆಗಳಿಗೆ ಗೌರವ ನೀಡುವ ನಿರ್ಧಾರದಂತೆ ಕಂಡರೂ, ಇದರ ಹಿಂದಿರುವ ಅಸಲಿ ಕತೆ ಬೇರೆಯೇ ಇದೆ. ಸರ್ಕಾರದ ಈ ಕಠಿಣ ಆದೇಶದಿಂದಾಗಿ ಹಬ್ಬದ ಮಾರುಕಟ್ಟೆಯನ್ನೇ ನಂಬಿಕೊಂಡಿದ್ದ ಹಿಂದೂ ಸಮುದಾಯದ (ಗೌಡ/ಗೋವಾಲ) ಡೈರಿ ಮಾಲೀಕರು ಮತ್ತು ಜಾನುವಾರು ಸಾಕಾಣಿಕೆದಾರರು ಈಗ ಸಂಪೂರ್ಣ ಬೀದಿಗೆ ಬೀಳುವ ಸ್ಥಿತಿ ತಲುಪಿದ್ದಾರೆ.
https://www.instagram.com/reel/DYmHnIVDoJ5/?igsh=MTd0NG8wdTJrZjE3dw==
ಸರ್ಕಾರದ ಆದೇಶದಲ್ಲೇನಿದೆ? ತಲೆಯ ಮೇಲಿದೆಯೇ ಜೈಲು ಭೀತಿ?
ಪಶ್ಚಿಮ ಬಂಗಾಳದ ಗೃಹ ಇಲಾಖೆಯು ಮೇ 13 ರಂದು ಹೊರಡಿಸಿರುವ ಹೊಸ ಅಧಿಸೂಚನೆಯು ‘ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ 1950’ ಮತ್ತು 2018ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದೆ. ಈ ನಿಯಮಗಳು ಅತ್ಯಂತ ಕಠಿಣವಾಗಿವೆ:
14 ವರ್ಷದ ಗಡುವು: 14 ವರ್ಷಕ್ಕಿಂತ ಮೇಲ್ಪಟ್ಟ, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿಗೆ ಅಸಮರ್ಥವಾಗಿರುವ ಜಾನುವಾರುಗಳನ್ನು ಮಾತ್ರ ವಧೆ ಮಾಡಬಹುದು.
ಅಧಿಕಾರಿಗಳ ಸರ್ಟಿಫಿಕೇಟ್ ಕಡ್ಡಾಯ: ಮುನ್ಸಿಪಾಲಿಟಿ ಅಧ್ಯಕ್ಷರು/ಪಂಚಾಯತ್ ಸಭಾಪತಿಗಳು ಮತ್ತು ಸರ್ಕಾರಿ ಪಶುವೈದ್ಯರು ಜಂಟಿಯಾಗಿ ಲಿಖಿತ ಪ್ರಮಾಣಪತ್ರ ನೀಡಿದರೆ ಮಾತ್ರ ವಧೆಗೆ ಅವಕಾಶ. ನಿಯಮ ಮೀರಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ಗ್ಯಾರಂಟಿ.
ಕೋರ್ಟ್ ಆದೇಶ: ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಸುವಿನ ಬಲಿ ಇಸ್ಲಾಂ ಧರ್ಮದ ಕಡ್ಡಾಯ ಭಾಗವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ದನದ ಮಾಂಸ ತಿನ್ನುವುದನ್ನೇ ನಿಲ್ಲಿಸಿ ಎಂದ ಇಮಾಮ್
ಸರ್ಕಾರದ ಈ ನಿಯಮಕ್ಕೆ ಕಾನೂನು ಹೋರಾಟ ಅಥವಾ ವಿರೋಧ ವ್ಯಕ್ತಪಡಿಸುವ ಬದಲು ಮುಸ್ಲಿಂ ಧರ್ಮಗುರುಗಳು ಪರ್ಯಾಯ ದಾರಿ ಕಂಡುಕೊಂಡಿದ್ದಾರೆ.
ಕೋಲ್ಕತ್ತಾದ ಐತಿಹಾಸಿಕ ನಾಖೋಡಾ ಮಸೀದಿಯ ಇಮಾಮ್ ಮೌಲಾನಾ ಶಫೀಕ್ ಖಾಸ್ಮಿ ಮಾತನಾಡಿ, “ನಮ್ಮ ಮುಸ್ಲಿಂ ಬಾಂಧವರು ಬಕ್ರೀದ್‌ಗೆ ಹಸುಗಳನ್ನು ಅರ್ಪಿಸಬೇಡಿ, ದನದ ಮಾಂಸ ತಿನ್ನುವುದನ್ನೇ ನಿಲ್ಲಿಸಿ. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ. ಆದರೆ, ದುರದೃಷ್ಟವಶಾತ್ ಇದರಿಂದ ನಮ್ಮ ಹಿಂದೂ ಸಹೋದರರಿಗೇ ನಷ್ಟವಾಗಲಿದೆ. ಏಕೆಂದರೆ ಅವರೇ ಹಸುಗಳನ್ನು ಸಾಕಿ ನಮಗೆ ಮಾರಾಟ ಮಾಡುತ್ತಿದ್ದರು” ಎಂದು ಹೇಳಿದ್ದಾರೆ.
ಇದೇ ಧಾಟಿಯಲ್ಲಿ ಫುರ್ಫುರಾ ಷರೀಫ್ ದರ್ಗಾದ ಪೀರ್ಜಾದಾ ಜಿಯಾವುದ್ದೀನ್ ಸಿದ್ದಿಕಿ ಕೂಡ, ಹಸುಗಳ ಬದಲಾಗಿ ಕುರಿ ಅಥವಾ ಮೇಕೆಗಳನ್ನು ಮಾತ್ರ ಬಳಸಲು ಸಮುದಾಯಕ್ಕೆ ಕರೆ ನೀಡಿದ್ದಾರೆ.
ಮುಸ್ಲಿಂ ಬಾಂಧವರು ಹಸುಗಳನ್ನು ಖರೀದಿಸುವುದಿಲ್ಲ ಎಂದು ನಿರ್ಧರಿಸಿದ್ದೇ ತಡ, ಸ್ಥಳೀಯ ಜಾನುವಾರು ಮಾರುಕಟ್ಟೆಗಳು ಸಂಪೂರ್ಣವಾಗಿ ಕಳೆಗುಂದಿವೆ. ಇದರಿಂದ ಹಿಂದೂ ಜಾನುವಾರು ಸಾಕಾಣಿಕೆದಾರರು ಕಂಗಾಲಾಗಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಭಾಂಗರ್‌ನ ಡೈರಿ ಮಾಲೀಕ ಶಂಭು ಘೋಷ್ ಅವರ ಅಳಲು ಇಡೀ ಬಿಕ್ಕಟ್ಟಿನ ಆಳವನ್ನು ತೋರಿಸುತ್ತದೆ:
ಇಂತಹ ನೂರಾರು ಡೈರಿ ಮಾಲೀಕರು ಸರ್ಕಾರದ ಸಹಾಯ ಕೋರುತ್ತಿರುವ ವಿಡಿಯೋಗಳು ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

