HomeBusinessಬೆಂಗಳೂರಿನಲ್ಲಿ ತರಕಾರಿ ವ್ಯಾಪಾರಿಯ ‘AI’ ಕರಾಮತ್ತು ಗಂಟೆಗೆ ₹350 ಎಕ್ಸ್‌ಟ್ರಾ ಇನ್‌ಕಮ್ ಗಳಿಸುವ ಯುವಕನ ವಿಡಿಯೋ...

ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರಿಯ ‘AI’ ಕರಾಮತ್ತು ಗಂಟೆಗೆ ₹350 ಎಕ್ಸ್‌ಟ್ರಾ ಇನ್‌ಕಮ್ ಗಳಿಸುವ ಯುವಕನ ವಿಡಿಯೋ ಭಾರಿ ವೈರಲ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ತಂತ್ರಜ್ಞಾನದ ಹಬ್ ಅನ್ನೋದ್ರಲ್ಲಿ ಯಾವುದೇ ಡೌಟಿಲ್ಲ. ಆದರೆ, ಇಲ್ಲಿನ ಸಾಮಾನ್ಯ ತರಕಾರಿ ವ್ಯಾಪಾರಿಯೊಬ್ಬರು (Vegetable Vendor) ಐಫೋನ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಸಿ ಕಾರ್ಪೊರೇಟ್ ಉದ್ಯೋಗಿಗಳಿಗಿಂತಲೂ ಹೆಚ್ಚು ಆದಾಯ ಗಳಿಸುತ್ತಿರುವ ರೋಚಕ ಸಂಗತಿಯೊಂದು ಈಗ ಬೆಳಕಿಗೆ ಬಂದಿದೆ ತಲೆಯ ಮೇಲೆ ಐಫೋನ್ ಕಟ್ಟಿಕೊಂಡು ಓಡಾಡುತ್ತಿರುವ ಈ ಯುವಕನ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಒಮ್ಮೆಗೆ ಆಶ್ಚರ್ಯ ಮತ್ತು ಗೊಂದಲದ ಕಡಲಲ್ಲಿ ತೇಲಿಸಿದೆ.

ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಸಿಕ್ಕಿತು ಬಿಗ್ ಟ್ವಿಸ್ಟ್

ವೈಭವ್ ಎಂಬ ವ್ಯಕ್ತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಅಪರೂಪದ ದೃಶ್ಯವನ್ನು ಹಂಚಿಕೊಂಡಿದ್ದಾರೆ. “ನಾನು ಸ್ಕೂಟಿಯಲ್ಲಿ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಈ ವಿಭಿನ್ನ ಸಿಸ್ಟಮ್ ನೋಡಿ ಶಾಕ್ ಆದೆ. ತಕ್ಷಣವೇ ಬೈಕ್ ನಿಲ್ಲಿಸಿ ಆ ತರಕಾರಿ ವ್ಯಾಪಾರಿಯನ್ನು ಮಾತನಾಡಿಸಿ ವಿಡಿಯೋ ಮಾಡಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಆ ಯುವಕ ಸಾಮಾನ್ಯ ತರಕಾರಿ ವ್ಯಾಪಾರದ ಜೊತೆಗೆ ಜಾಗತಿಕ ಮಟ್ಟದ ಎಐ (AI) ಮಾದರಿಗಳಿಗೆ ತರಬೇತಿ ನೀಡುವ ಹೈಟೆಕ್ ಕೆಲಸದಲ್ಲೂ ತೊಡಗಿಸಿಕೊಂಡಿರುವುದು ಆಗ ರಿವೀಲ್ ಆಗಿದೆ

ಏನಿದು ತಲೆ ಮೇಲಿನ ಐಫೋನ್ ರಹಸ್ಯ? (Real World Data)

ವಿಡಿಯೋದಲ್ಲಿರುವಂತೆ, ಈ ತರಕಾರಿ ವ್ಯಾಪಾರಿ ತನ್ನ ತಲೆಗೆ ಒಂದು ವಿಶೇಷವಾದ ಬೆಲ್ಟ್ ಧರಿಸಿದ್ದು, ಅದಕ್ಕೆ ಐಫೋನ್ (iPhone) ಮತ್ತು ಮೆಮೊರಿ ಡಿವೈಸ್ ಒಂದನ್ನು ಕನೆಕ್ಟ್ ಮಾಡಿದ್ದಾರೆ. ಅಸಲಿಗೆ ಈತ ಮಾಡುತ್ತಿರುವುದಾದರೂ ಏನು? ಎಂದು ವೈಭವ್ ಪ್ರಶ್ನಿಸಿದಾಗ ಊಹೆಗೂ ನಿಲುಕದ ಉತ್ತರ ಸಿಕ್ಕಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭವಿಷ್ಯದ ರೊಬೊಟಿಕ್ಸ್ ಮತ್ತು ಹ್ಯೂಮನಾಯ್ಡ್ (ಮನುಷ್ಯ ರೂಪದ ರೊಬೊಗಳು) ಗಳ ಅಭಿವೃದ್ಧಿಗಾಗಿ ಬೇಕಾಗುವ ‘ರಿಯಲ್ ವರ್ಲ್ಡ್ ಡೇಟಾ’ (Real World Data) ವನ್ನು ತಾನು ಸಂಗ್ರಹಿಸುತ್ತಿರುವುದಾಗಿ ಆ ಯುವಕ ತಿಳಿಸಿದ್ದಾನೆ. ಅಂದರೆ, ಮನುಷ್ಯರು ದಿನನಿತ್ಯದ ಮಾರುಕಟ್ಟೆಯಲ್ಲಿ ಹೇಗೆ ವರ್ತಿಸುತ್ತಾರೆ ಗ್ರಾಹಕರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಮತ್ತು ವಸ್ತುಗಳನ್ನು ಹೇಗೆ ಹಿಡಿದುಕೊಳ್ಳುತ್ತಾರೆ ಎಂಬುದನ್ನು ಈ ಐಫೋನ್ ಲೈವ್ ಆಗಿ ರೆಕಾರ್ಡ್ ಮಾಡುತ್ತಿದೆ.

ಟೆಕ್ಕಿಗಳ ಸಂಬಳವನ್ನೇ ಮೀರಿದ ಆದಾಯ: ಲೆಕ್ಕಾಚಾರ ಇಲ್ಲಿದೆ

ಈ ವಿಡಿಯೋದಲ್ಲಿ ರಿವೀಲ್ ಆಗಿರುವ ಅತ್ಯಂತ ಶಾಕಿಂಗ್ ಸಂಗತಿ ಎಂದರೆ, ಈ ಡೇಟಾ ಕಲೆಕ್ಷನ್ ಕೆಲಸಕ್ಕಾಗಿ ಆ ತರಕಾರಿ ವ್ಯಾಪಾರಿಗೆ ಭಾರಿ ಮೊತ್ತದ ಸಂಬಳ ಸಿಗುತ್ತಿದೆ

ಒಂದು ಗಂಟೆಗೆ ಸಿಗುವ ಹಣ: ₹350

ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ: ₹3,500

ತಿಂಗಳ ಒಟ್ಟು ಆದಾಯ: ಬರೋಬ್ಬರಿ ₹1,05,000 ಕ್ಕೂ ಅಧಿಕ

ತಲೆಯ ಮೇಲೆ ಕೇವಲ ಒಂದು ಸ್ಮಾರ್ಟ್ ಫೋನ್ ಧರಿಸಿ ಓಡಾಡುತ್ತಾ, ನಮ್ಮ ಕಾರ್ಪೊರೇಟ್ ಇಂಡಿಯಾದಲ್ಲಿ ಹಗಲಿರುಳು ಕಷ್ಟಪಡುವ ಅರ್ಧದಷ್ಟು ಸಾಫ್ಟ್ ವೇರ್ ಎಂಜಿನಿಯರ್‌ಗಳಿಗಿಂತ ಈ ತರಕಾರಿ ವ್ಯಾಪಾರಿಯೇ ಸ್ಮಾರ್ಟ್ ಆಗಿ ಹೆಚ್ಚು ಆದಾಯ ಗಳಿಸುತ್ತಿದ್ದಾನೆ ಎಂದು ವೈಭವ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೇವಲ ಐಟಿ ಉದ್ಯೋಗಿಗಳು ಮಾತ್ರವಲ್ಲ, ತರಕಾರಿ ಮಾರುವವರೂ ಕೂಡ ಹೈಟೆಕ್ ಆಗಿದ್ದಾರೆ ಅನ್ನೋದಕ್ಕೆ ಈ ವೈರಲ್ ವಿಡಿಯೋವೇ ಸಾಕ್ಷಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular