HomeKarnatakaBREAKING: ಪಿಕಪ್ ವಾಹನ-ಆಟೋ ಭೀಕರ ಅಪಘಾತ: ಓರ್ವ ವಿದ್ಯಾರ್ಥಿನಿ ದುರ್ಮರಣ

BREAKING: ಪಿಕಪ್ ವಾಹನ-ಆಟೋ ಭೀಕರ ಅಪಘಾತ: ಓರ್ವ ವಿದ್ಯಾರ್ಥಿನಿ ದುರ್ಮರಣ

ಮಂಗಳೂರು: ಶಾಲಾ ಮಕ್ಕಳ ಪಿಕಪ್ ವಾಹನ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಪಾದೆ ಬಳಿ ನಡೆದಿದೆ.

ದೇರಳಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಆಯಿಷಾ ವಹಿದಾ (10) ಮೃತ ವಿದ್ಯಾರ್ಥಿನಿ. ಬಡಕಬೈಲು ಮೊಹಮ್ಮದ್ ಮುನ್ಝಿಯಾ ದಂಪತಿಯ ಪುತ್ರಿ ಮೃತ ಬಾಲಕಿ.

ಮದಕ ಕಡೆಯಿಂದ ದೇರಳಕಟ್ಟೆ ಕಡೆಗೆ ಬರುತ್ತಿದ್ದ ಆಟೋ ಕಲ್ಲಪಾದೆ ಬಳಿ ವೇಗವಾಗಿ ಬಂದ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲಿಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular