alex Certify ಇಂದು ಒಂದೇ ರಾಶಿಗೆ 7 ಗ್ರಹ ಪ್ರವೇಶ: ಬೆಚ್ಚಿಬೀಳಿಸುವಂತಿದೆ ಜ್ಯೋತಿಷಿಗಳು ಹೇಳಿದ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಒಂದೇ ರಾಶಿಗೆ 7 ಗ್ರಹ ಪ್ರವೇಶ: ಬೆಚ್ಚಿಬೀಳಿಸುವಂತಿದೆ ಜ್ಯೋತಿಷಿಗಳು ಹೇಳಿದ ಭವಿಷ್ಯ

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಸ್ಫೋಟಗೊಂಡಿದ್ದು, ಭಾರೀ ವಿನಾಶಕ್ಕೆ ಕಾರಣವಾಗಿದೆ. ಭಯಾನಕ ಪ್ರಕೃತಿ ವಿಕೋಪಕ್ಕೆ ಜ್ಯೋತಿಷ್ಯಿಗಳು ಚಿಂತಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗಬಹುದು ಎಂದು ಜ್ಯೋತಿಷ್ಯಿಗಳು ಹೇಳಿದ್ದಾರೆ.

ಮಕರ ರಾಶಿಯಲ್ಲಿ ಈಗಾಗಲೇ ಆರು ಗ್ರಹಗಳಿವೆ. ಮಕರ ರಾಶಿಯಲ್ಲಿ ಶನಿ, ಗುರು, ಬುಧ, ಶುಕ್ರ, ಫ್ಲುಟೋ ಮತ್ತು ಸೂರ್ಯರಿದ್ದಾರೆ. ಆದ್ರೆ ಫೆಬ್ರವರಿ 9ರಂದು ಚಂದ್ರ ಕೂಡ ಮಕರ ರಾಶಿ ಪ್ರವೇಶ ಮಾಡಲಿದ್ದಾನೆ. ಒಂದು ರಾಶಿಯಲ್ಲಿ ಐದಕ್ಕಿಂತ ಹೆಚ್ಚು ಗ್ರಹಗಳು ಬಂದು ಸೇರಿದ್ರೆ ಅದನ್ನು ಅಶುಭವೆನ್ನಲಾಗುತ್ತದೆ. ಇಂದು ರಾತ್ರಿ 8 ಗಂಟೆ 31 ನಿಮಿಷಕ್ಕೆ ಈ ಗ್ರಹಗಳು ಒಟ್ಟಾಗಿ ಸೇರಲಿವೆ ಎನ್ನಲಾಗಿದೆ.

ಹಿಮನದಿ ಸ್ಪೋಟದಿಂದ ಭಾರೀ ಅನಾಹುತ: 153 ಜನ ನಾಪತ್ತೆಯಾಗಿರುವ ಮಾಹಿತಿ ಲಭ್ಯ – ಮುಂದುವರೆದ ಕಾರ್ಯಾಚರಣೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 59 ವರ್ಷಗಳ ನಂತ್ರ ಇಂಥ ಸ್ಥಿತಿ ಬಂದಿದೆ. ಇದಕ್ಕಿಂತ ಮೊದಲು 1962ರಲ್ಲಿ ಮಕರ ರಾಶಿಯಲ್ಲಿ 7 ಗ್ರಹಗಳು ಬಂದು ಸೇರಿದ್ದವು. ಆ ಸಂದರ್ಭದಲ್ಲೂ ದೇಶ, ಪ್ರಪಂಚ ಸಂಕಟದ ಸ್ಥಿತಿ ಎದುರಿಸಿತ್ತು. ಡಿಸೆಂಬರ್ 26,2019 ರಲ್ಲೂ ಧನು ರಾಶಿಗೆ ಐದು ಗ್ರಹಗಳು ಬಂದಿದ್ದವು. ಆ ಸಂದರ್ಭದಲ್ಲಿ ಮಹಾಮಾರಿ ಕೊರೊನಾ ಪ್ರವೇಶವಾಗಿತ್ತು. ಮಕರ ರಾಶಿಗೆ 7ನೇ ಗ್ರಹ ಪ್ರವೇಶ ಮಾಡುವ ಮೊದಲೇ ಹಿಮ ನದಿ ಸ್ಫೋಟಗೊಂಡು ಭಯಹುಟ್ಟಿಸಿದೆ.

ಪ್ರಕೃತಿ ವಿಕೋಪದ ಜೊತೆಗೆ ಇದು ರಾಜಕೀಯದ ಮೇಲೂ ಪರಿಣಾಮ ಬೀರಲಿದೆ. ರಾಜಕೀಯದಲ್ಲಿ ಸಾಕಷ್ಟು ಏರುಪೇರುಗಳಾಗಲಿದೆ. ಸುಮಾರು ಎರಡು ತಿಂಗಳುಗಳ ಕಾಲ ಸಮಸ್ಯೆ ಕಾಡಲಿದೆ ಎಂದು ಜ್ಯೋತಿಷ್ಯಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...