ಬುಧವಾರವನ್ನ ಗಣೇಶನ ವಾರ ಎಂದು ಕರೆಯಲಾಗುತ್ತೆ. ಈ ದಿನದಂದು ನೀವು ಗಣೇಶನನ್ನ ಆರಾಧಿಸಿದ್ರೆ ಕಷ್ಟಗಳೆಲ್ಲ ದೂರವಾಗುತ್ತೆ ಎಂಬ ನಂಬಿಕೆಯಿದೆ. ವಿಘ್ನ ನಿವಾರಕನೆಂದೇ ಹೆಸರು ಪಡೆದಿರೋ ಈತ ಯಾರಿಗೆ ಒಲಿಯುತ್ತಾನೋ ಅಂತವರ ಬಾಳಲ್ಲಿ ಕಷ್ಟವೇ ಬರಲ್ಲ ಎಂದು ಹೇಳಲಾಗುತ್ತೆ.

ಗಣಪತಿಯನ್ನ ಆರಾಧಿಸೋಕು ಮುನ್ನ ನೀವು ಆತನಿಗೆ ಯಾವ ವಸ್ತುಗಳೆಂದರೆ ಇಷ್ಟ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಬುಧವಾರದ ದಿನದಂದು ನೀವು ಈ ವಸ್ತುಗಳನ್ನ ಗಣಪತಿಗೆ ಅರ್ಪಿಸಿದ್ರೆ ನಿಮ್ಮ ಸಕಲ ಕಷ್ಟಗಳೂ ದೂರಾಗಲಿವೆ ಎಂದು ಶಾಸ್ತ್ರ ಹೇಳಿದೆ.

ಮೊದಕ ನೈವೇದ್ಯ ಮಾಡಿ :  ಗಣಪತಿಗೆ ಮೋದಕ ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಬುಧವಾರ ಗಣೇಶನಿಗೆ ಮೋದಕವನ್ನ ನೈವೇದ್ಯ ಮಾಡಿ. ಬಿಳಿ ಮೋದಕವನ್ನ ಗಣೇಶನಿಗೆ ಅರ್ಪಿಸೋದ್ರಿಂದ ನಿಮ್ಮ ಮನೆ ಹಾಗೂ ಮನದಲ್ಲಿ ಶಾಂತಿ ನೆಲೆಸಲಿದೆ.

ಹಣದ ಸಮಸ್ಯೆ ನಿವಾರಣೆಯಾಗಲು ಮಂಗಳವಾರದಂದು ಈ ಎಲೆಗಳಿಂದ ಗಣಪತಿ ಪೂಜೆ ಮಾಡಿ

ಶಮಿ ಎಲೆಗಳನ್ನ ಅರ್ಪಿಸಿ : ಬುಧವಾರದಂದು ಗಣಪತಿಗೆ ಶಮಿ ಎಲೆಗಳನ್ನ ಅರ್ಪಿಸೋದ್ರಿಂದ ಜ್ಞಾನ ಹೆಚ್ಚಲಿದೆ ಎಂದು ಹೇಳಲಾಗುತ್ತೆ. ಅಲ್ಲದೇ ಮನೆಯಲ್ಲಿರುವ ಕೆಟ್ಟ ಶಕ್ತಿಗಳು ಇದರಿಂದ ದೂರಾಗಲಿವೆ.

ಹೂವುಗಳು ಹಾಗೂ ಕುಂಕುಮ : ಕೆಂಪು ಬಣ್ಣದ ಹೂವು ಗಣಪತಿಗೆ ಶ್ರೇಷ್ಠ ಎಂದು ಹೇಳಲಾಗುತ್ತೆ. ಹಾಗಂತ ನೀವು ಬೇರೆ ಬಣ್ಣದ ಹೂವುಗಳನ್ನೂ ಬಳಕೆ ಮಾಡಬಾರದು ಎಂದೇನಿಲ್ಲ. ಗಣೇಶನಿಗೆ ಕುಂಕುಮವನ್ನ ಹಚ್ಚಿದರೂ ಕೂಡ ಆತ ಪ್ರಸನ್ನನಾಗುತ್ತಾನೆ. ಇದರಿಂದ ನಿಮಗೆ ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ.

ದೂರ್ವೆಯನ್ನ ಅರ್ಪಿಸಿ :  ಗಣಪತಿಗೆ ದೂರ್ವೆ ಅಂದರೆ ತುಂಬಾನೇ ಇಷ್ಟ. ಹೀಗಾಗಿ ಪೂಜೆ ವೇಳೆ ದೂರ್ವೆ ಇರೋದು ಕಡ್ಡಾಯ. ಈ ರೀತಿ ಮಾಡಿದ್ರೆ ಗಣೇಶನ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರಲಿದೆ. ಹಾಗೆಯೇ ಗಣಪತಿಗೆ ತುಳಸಿಯನ್ನ ಅರ್ಪಿಸಲ್ಲ ಅನ್ನೋದನ್ನ ಮರೆಯದಿರಿ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003