ಶಿವಮೊಗ್ಗ: ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಆಗುಂಬೆ ಘಾಟ್ ನಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ನ 4ನೇ ತಿರುವಿನಲ್ಲಿ ರಸ್ತೆಗೆ ಅಡ್ದಲಾಗಿ ಬೃಹತ್ ಮರ ಧರಾಶಾಹಿಯಾಗಿದೆ. ಇದರಿಂದಾಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಇದರಿಂದಾಗಿ ಆಗುಂಬೆ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮರ ಬಿದ್ದಿರುವುದರಿಂದ ವಾಹನಗಳು ನಿಂತಲ್ಲೇ ನಿಂತಿದ್ದು, ಸವಾರರು ಪರದಾಡುವಂತಾಗಿದೆ. ತೀರ್ಥಹಳ್ಳಿ-ಉಡುಪಿ ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಸ್ಥಗಿತಗೊಂಡಿವೆ.
ಮರ ಬಿದ್ದು ವಾಹನಸವಾರರು ಪರದಾಡುತ್ತಿದ್ದರೂ ಘಟನ ಅಸ್ಥಳಕ್ಕೆ ಈವರೆಗೆ ಯಾವುದೇ ಅಧಿಕಾರಿಗಳು ಬಂದು ಮರ ತೆರವು ಮಾಡಿಲ್ಲ. ಘಾಟ್ ನಲ್ಲಿ ಸಂಚರಿಸುವ ಲಾರಿ ಚಾಲಕರು ಮರ ತೆರವಿಗೆ ಯತ್ನಿಸುತ್ತಿದ್ದಾರೆ. ಆದರೆ ಬೃಹತ್ ಮರವಾಗಿರುವುದರಿಂದ ತೆರವು ಕಾರ್ಯ ಸುಲಭಸಾಧ್ಯವಲ್ಲ ಎನ್ನಲಾಗಿದೆ.
ಮರ ತೆರವುಗೊಳಿಸುವವರೆಗೂ ಆಗುಂಬೆ ಘಾಟ್ ನಲ್ಲಿ ಕೆಲ ಸಮಯದವರೆಗೆ ವಾಹನ ಸಂಚಾರ ಬಂದ್ ಅಗಲಿದೆ ಎಂದು ತಿಳಿದುಬಂದಿದೆ.

