ಪ್ರೇಮ ನಿವೇದನೆ ಮಾಡಿಕೊಳ್ಳಲು ಒಬ್ಬೊಬ್ಬರು ಒಂದೊಂದು ವೇದಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಂದು ವಿಭಿನ್ನ ಘಟನೆಯಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಿಚಿಗನ್ ವಿದ್ಯಾರ್ಥಿಯೊಬ್ಬ ಕಾಲೇಜು ಪ್ರೇಮಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ.
ಹೊಸದಾಗಿ ಪದವಿ ಪಡೆದ ವಿದ್ಯಾರ್ಥಿ ಡೇವಿಡ್ ಶೂಮೇಕರ್ ತನ್ನ ಗೆಳತಿಯನ್ನು ಪದವಿ ಪ್ರದಾನ ಸಮಾರಂಭದ ವೇದಿಕೆಯ ಮಧ್ಯಕ್ಕೆ ಕರೆತರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಡೇವಿಡ್ ಒಂದು ಮೊಣಕಾಲು ಊರಿದಾಗ ಯುವತಿ ರಿಯಾನ್ ಮೊದಲಿಗೆ ನಿಜವಾಗಿಯೂ ಗೊಂದಲಕ್ಕೊಳಗಾಗುತ್ತಾಳೆ. ನಂತರ ಸಂತೋಷದಿಂದ ಕಣ್ಣೀರು ಸುರಿಸುತ್ತಾಳೆ.
ಈ ಸಂದರ್ಭದಲ್ಲಿ ರಿಯಾನ್ಗೆ ಪ್ರಪೋಸ್ ಮಾಡುತ್ತಾನೆ. ಇದರಿಂದ ಖುಷಿಯಾದ ರಿಯಾನ್ ಆತನಿಗೆ ಚುಂಬಿಸುತ್ತಾಳೆ. ಅಲ್ಲಿದ್ದವರು ಚಪ್ಪಾಳೆ ತಟ್ಟುತ್ತಾರೆ. ಈ ವಿಡಿಯೋಗೆ ಪರ- ವಿರೋಧ ನಿಲುವು ವ್ಯಕ್ತವಾಗಿದೆ. ಕೆಲವರು ಇದನ್ನು ಪ್ರೀ ಪ್ಲ್ಯಾನ್ಡ್ ಎಂದೂ ಹೇಳಿದ್ದಾರೆ.