ದೀರ್ಘಕಾಲದ ಕಾನೂನು ಹೋರಾಟಗಳ ನಂತರ ವಿಚ್ಛೇದನ ಪಡೆದ 18 ಪುರುಷರಿಗಾಗಿ ಸಂಭ್ರಮಾಚರಣೆ ಆಯೋಜನೆಗೊಂಡಿದ್ದು, ಆಹ್ವಾನ ಪತ್ರಿಕೆ ವೈರಲ್ ಆಗಿದೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಸರ್ಕಾರೇತರ ಸಂಸ್ಥೆ (ಎನ್ಜಿಒ) ಭಾಯಿ ವೆಲ್ಫೇರ್ ಸೊಸೈಟಿ ವಿಚ್ಛೇದನ ಬಯಸುವ ಪುರುಷರಿಗಾಗಿ ಸಹಾಯವಾಣಿಯನ್ನು ನಡೆಸುತ್ತಿದೆ.
ವಿವಾಹ ವಿಚ್ಛೇದನ ಸಮಾರೋಹ್ (ಮದುವೆ ವಿಸರ್ಜನಾ ಕಾರ್ಯ) ಎಂಬ ಕಾರ್ಯಕ್ರಮವು ಸೆಪ್ಟೆಂಬರ್ 18 ರಂದು ರಾಜಧಾನಿ ನಗರದ ಹೊರವಲಯದಲ್ಲಿರುವ ರೆಸಾರ್ಟ್ನಲ್ಲಿ ನಡೆಯಲಿದೆ ಎಂದು ಎನ್ಜಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಭ್ರಮಾಚರಣೆಯ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೆೈರಲ್ ಆಗಿದೆ.
ಇದು ಗೆಟ್- ಟುಗೆದರ್ ಆಗಿತ್ತು, ಆದರೆ ಈವೆಂಟ್ನ ಆಹ್ವಾನವು ಸಣ್ಣ ಗುಂಪಿಗೆ ಮೀಸಲಾಗಿತ್ತು, ಆಕಸ್ಮಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ವಿರೋಧಿಸುತ್ತಿರುವ ಜನರಿಂದ ನನಗೆ ಈಗ ಕರೆಗಳು ಬರುತ್ತಿದೆ ಎಂದು ಸಂಘಟನೆಯ ಸಂಚಾಲಕ ಝಕಿ ಅಹ್ಮದ್ ತಿಳಿಸಿದ್ದಾರೆ.
ಗುಂಪಿನಲ್ಲಿರುವ ಜನರು ಈಗಾಗಲೇ ತಮ್ಮ ವಿಚ್ಛೇದನ ಪಡೆದುಕೊಂಡಿದ್ದಾರೆ. ದೀರ್ಘಕಾಲದ ಕಾನೂನು ಕದನದ ನಂತರ ದೊಡ್ಡ ಜೀವನಾಂಶವನ್ನು ಪಾವತಿಸುತ್ತಿದ್ದಾರೆ ಎಂದು ಅವರು ಹೇಳಿದರು.