ಮಕ್ಕಳು ತಿಳಿಯುತ್ತಾ ಬೆಳೆಯುವ ವಿಧಾನವೇ ಒಂದು ಕುತೂಹಲ. ಇದೀಗ ತಾಯಿಯೊಬ್ಬಳು ತನ್ನ ಮಗು ತನ್ನ ಮೇಲೆ ಬರೆದ ಪ್ರಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.
ಪತ್ರಕರ್ತೆ ರಿತುಪರ್ಣಾ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ, ಶಾಲೆಯಲ್ಲಿ ತನ್ನ ಮಗು ತನ್ನ ಮೇಲೆ ಬರೆದ ಪ್ರಬಂಧವನ್ನು ಹಂಚಿಕೊಂಡಿದ್ದಾರೆ. ಈಗ ನಾನು ಅಳಲು ಹೋಗುತ್ತಿದ್ದೇನೆ ಎಂದು ಭಾವುಕ ಶೀರ್ಷಿಕೆಯನ್ನೂ ನೀಡಿದ್ದಾರೆ.
ಶಾಲೆಯಲ್ಲಿ ಮಗು ಸ್ನೇಹಿತ, ಕುಟುಂಬದ ಸದಸ್ಯರು ಅಥವಾ ಯಾವುದೇ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಪ್ಯಾರಾಗ್ರಾಫ್ ಬರೆಯಬೇಕಿತ್ತು. ಆ ಮಗು ತನ್ನ ತಾಯಿಯ ವ್ಯಕ್ತಿತ್ವ ವರ್ಣಿಸುತ್ತಾ ಹೋಗಿದೆ.
“ನನ್ನ ತಾಯಿ ನನಗೆ ಕಾಳಜಿ ಕಲಿಸಿದರು. ನನಗೆ ನಡೆಯಲು ಕಲಿಸಿದಳು. ಅವಳು ತುಂಬಾ ತಮಾಷೆಯ ವ್ಯಕ್ತಿ ಮತ್ತು ಒಳ್ಳೆಯ ಹಾಸ್ಯ ಮಾಡುತ್ತಾಳೆ. ತುಂಬಾ ಅಡುಗೆ ಮಾಡುತ್ತಾಳೆ, ಕೆಲಮೊಮ್ಮೆ ನನಗೆ ಪುಡಿಂಗ್ ಮಾಡುತ್ತಾಳೆ, ಅವಳು ನನ್ನನ್ನು ಯಾವಾಗಲೂ ನಗಿಸುತ್ತಾಳೆ, ಮನೆಯಲ್ಲಿ ಕೆಲಸ ಮಾಡುತ್ತಾಳೆ ಮತ್ತು ನನ್ನನ್ನು ನೋಡಿಕೊಳ್ಳುತ್ತಾಳೆ, ದಿನಕ್ಕೆ ಎರಡು ಗಂಟೆ ಓದುವಂತೆ ಮಾಡಿ. ವಾರಕ್ಕೆ ಎರಡು ಬಾರಿ ಈಜಲು ಕರೆದುಕೊಂಡು ಹೋಗುತ್ತಾಳೆ. ನನ್ನ ತಾಯಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ ಏಕೆಂದರೆ ಅವಳು ಪ್ರಪಂಚದಲ್ಲೇ ಅತ್ಯುತ್ತಮಳು ಎಂದು ಮಗು ಬರೆದಿದೆ.
ಈ ಪ್ರಬಂಧದ ಇಮೇಜ್ ನೆಟ್ಟಿಗರನ್ನು ವಿಸ್ಮಯಗೊಳಿಸಿದೆ. ಅಪ್ಲೋಡ್ ಮಾಡಿದ ನಂತರ, ಇದು 1ಕೆ ಲೈಕ್ ಗಳಿಸಿದೆ. ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವರು ಈ ಪತ್ರವನ್ನು ಜೋಪಾನ ಮಾಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ.