ಮದುವೆ ಸಮಾರಂಭಗಳಲ್ಲಿ ಒಂದಷ್ಟು ಮೋಜು ಮಸ್ತಿ, ಹಾಡು ಕುಣಿತ ಸಾಮಾನ್ಯ. ಇಲ್ಲೊಂದು ಮದುವೆಯಲ್ಲಿ ಭೋಜ್ಪುರಿ ಹಾಡಿಗೆ ವಧು – ವರರಿಗೆ ಸ್ಟೆಪ್ ಹಾಕ ಬಯಸಿದ ಅವರ ಕುಟುಂಬದವರು, ಸ್ನೇಹಿತರು ಸುತ್ತುವರಿದು ಮಜಾ ಪಡೆಯಲು ಪ್ರಯತ್ನಿಸಿದ್ದಾರೆ.
ವರನು ಡಿಜೆ ಫ್ಲೋರ್ನಲ್ಲಿ ಹಾಡಿಗೆ ಯಾವುದೇ ಅಳುಕಿಲ್ಲದೇ ಡ್ಯಾನ್ಸ್ ಆರಂಭಿಸಿದರೆ, ವಧುಗೆ ಎಲ್ಲರೆದುರು ಡ್ಯಾನ್ಸ್ ಮಾಡಲು ನಾಚಿಕೆ ಪಡುವ ಸನ್ನಿವೇಶ ನೆಟ್ಟಿಗರ ಮನ ಗೆದ್ದಿದೆ. ಆಕೆಯ ನಾಚಿಕೆಯೇ ವಿಡಿಯೋ ಹೈಲೈಟ್.
ಕೊನೆಗೆ ಕುಟುಂಬ ಮತ್ತು ಸ್ನೇಹಿತರು ಒತ್ತಾಯಿಸಿದಾಗ ಆಕೆ ಸಣ್ಣದಾಗಿ ಸ್ಟೆಪ್ ಹಾಕುತ್ತಾಳೆ. ಆಕೆಯ ನಗು, ನಾಚಿಕೆಯನ್ನು ಅಲ್ಲಿದ್ದವರು ಆನಂದಿಸುತ್ತಾರೆ ನಂತರ ವರನು ಆಕೆಯನ್ನು ಪ್ರೋತ್ಸಾಹಿಸಿದಾಗ ಮುಕ್ತವಾಗಿ ನೃತ್ಯ ಮಾಡುತ್ತಾಳೆ. ವರನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟುವುದೂ ಸಹ ಕಾಣಬಹುದು. ನಂತರ ಮುಕ್ತವಾಗಿ ವರ ಸೇರಿದಂತೆ ಎಲ್ಲರನ್ನೂ ಆವರಿಸುವ ರೀತಿಯಲ್ಲಿ ನೃತ್ಯ ಮಾಡಿದರು.
ಈ ಡ್ಯಾನ್ಸ್ ವಿಡಿಯೋವನ್ನು ವಿಕೆ ವಿಲೇಜ್ ವಿಡಿಯೋ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಆ ಮಟ್ಟಿಗೆ ಜನರ ಮನ ಗೆದ್ದಿದೆ. ಕಳೆದ ವರ್ಷ ವೈರಲ್ ಆದ ನಂತರ ಈ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ನೆಟ್ಟಿಗರು ತಮಾಷೆಯ ಕಾಮೆಂಟ್ಗಳನ್ನು ಮಾಡಿ ಖುಷಿಪಟ್ಟಿದ್ದಾರೆ.
https://www.youtube.com/watch?v=0ojlfxBbvlI&feature=emb_logo