ಅವು ಮುದ್ದು ಮುದ್ಧಾಗಿರೋ ಪುಟಾಣಿ ಹುಲಿ ಮರಿಗಳು. ಅವುಗಳನ್ನ ನೋಡ್ತಿದ್ರೇನೆ ಪ್ರೀತಿ ಉಕ್ಕಿ ಬಂದ್ಬಿಡುತ್ತೆ. ಅಂಥಾ ಮುದ್ದು ಮರಿಗಳು ಇವು. ತಾಯಿ ಹುಲಿಗೆ ಅದೇನು ಆಗಿತ್ತೋ ಏನೋ, ಈ ಮರಿಹುಲಿಗಳು ಹುಟ್ಟಿದಾಕ್ಷಣ ದೂರ ಮಾಡಿಬಿಟ್ಟಿತ್ತು. ಹಾಲು ಕುಡಿಸೋದಕ್ಕೂ ತಾಯಿ ಹುಲಿ ನಿರಾಕರಿಸಿತ್ತು. ಅಮ್ಮನಿಂದ ದೂರವಾಗಿದ್ದ ಈ ಮರಿಹುಲಿಗಳಿಗೆ ಪ್ರೀತಿ ಸಿಕ್ಕಿದ್ದು, ಶ್ವಾನವೊಂದರಿಂದ.
ತಾಯಿ ಹೃದಯ ಮನುಷ್ಯನದ್ದೇ ಆಗಿರಲಿ ಇಲ್ಲಾ ಪ್ರಾಣಿಗಳದ್ದೇ ಆಗಿರಲಿ, ಆ ಪ್ರೀತಿ ಅಗಾಧ. ಅದೇ ಪ್ರೀತಿಯ ಸಾಕ್ಷಾತ್ಕಾರ ಇಲ್ಲಿ ನೋಡಲು ಸಿಗ್ತಿದೆ. ಇದು ಮನಸ್ಸಿಗೆ ಖುಷಿ ಕೊಡುವಂತಹ ದೃಶ್ಯ. ಶ್ವಾನವೊಂದು ಹುಲಿಮರಿಗಳಿಗೆ ಅಮ್ಮನ ಪ್ರೀತಿ ಕೊಡುವ ರೀತಿ ನೋಡೋದೇ ಒಂಥರಾ ಖುಷಿ.
ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ
ಅದು ಲ್ಯಾಬ್ರಡೋರ್ ತಳಿಯ ಶ್ವಾನ, ಅದರ ಸುತ್ತ ಈ ಹುಲಿಮರಿಗಳು ಹೇಗೆಲ್ಲ ಆಟ ಆಡ್ತಿವೆ ನೋಡಿ. ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ವಿಡಿಯೋ ಇದು. ಪ್ರಾಣಿಗಳಿಗೆ ಸಂಬಂಧಿಸಿದಂತೆ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಆದರೆ ಈ ವಿಡಿಯೋ ಎಲ್ಲರ ಮನಸ್ಸನ್ನೇ ಗೆದ್ದಿದೆ.
@apieceofnature ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು. ನೆಟ್ಟಿಗರು ಈ ವಿಡಿಯೋ ನೋಡಿ ಫುಲ್ ಫಿದಾ ಆಗಿ ಹೋಗಿದ್ದಾರೆ. ಈ ಹುಲಿಮರಿಗಳು ಕೂಡಾ ತಾಯಿ ಹುಲಿಯನ್ನ ಮರೆತು ಈ ಶ್ವಾನವನ್ನೇ ತಮ್ಮ ತಾಯಿ ಅಂದುಕೊಂಡು ಬಿಟ್ಟಿರೋ ಹಾಗಿದೆ. ಶ್ವಾನಕ್ಕೂ ಕೂಡಾ ಈಗ ಈ ಹುಲಿಮರಿಗಳೇ ಸರ್ವಸ್ವ ಆಗಿ ಹೋಗಿವೆ.