alex Certify ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ

ಕಳ್ಳರನ್ನು ಪತ್ತೆ ಮಾಡಲು, ಬಾಂಬ್ ಪತ್ತೆಗೆ ಶ್ವಾನಗಳ‌ ಬಳಕೆ ಬಹಳ ಹಿಂದಿನಿಂದಲೂ ಇದೆ. ನಾಯಿಗಳ‌ ವಿಶೇಷ ಸಾಮರ್ಥ್ಯ ಬಳಸಿಕೊಳ್ಳುವ ಸಂಶೋಧನೆ ಅಧ್ಯಯನಗಳೂ ನಡೆದಿವೆ. ಇದೀಗ ವಿಶ್ವಕ್ಕೆ ಅಂಟಿದ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆಯೂ ನಾಯಿಗಳ‌ ಮೇಲೆ ಅಧ್ಯಯನ ನಡೆದಿದ್ದು, ಅಚ್ಚರಿಯ ಫಲಿತಾಂಶ ಸಿಕ್ಕಿದೆ.

ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತರಬೇತಿ ಪಡೆದ ನಾಯಿಗಳು ಕೋವಿಡ್ 19 ಗೆ ಕಾರಣವಾಗುವ ವೈರಸ್ ಸೋಂಕಿತ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಮೂಸುವ ಮೂಲಕ ನಿಖರವಾಗಿ ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ.

ವಾಟ್ಸಾಪ್‌ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್: ಗ್ರೂಪಿನಿಂದ ಎಕ್ಸಿಟ್ ಆಗುವುದು ಇನ್ನು ಮತ್ತಷ್ಟು ಸುಲಭ

ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ ಮತ್ತು ಅಗತ್ಯ ಸಂಪನ್ಮೂಲಗಳು ಇನ್ನೂ ಲಭ್ಯವಿಲ್ಲದಿರುವಾಗ ಮಾತ್ರವಲ್ಲದೆ ಪ್ರಸ್ತುತ ಸಂದರ್ಭದಲ್ಲೂ ಸಾಂಕ್ರಾಮಿಕ ರೋಗವನ್ನು ಪತ್ತೆಮಾಡಲು ಸಹಾಯ ಬಯಸುವ ಬಗ್ಗೆ ಸಂಶೋಧಕರು ಹೇಳಿದ್ದಾರೆ.

ಹೆಲ್ಸಿಂಕಿ ವಿಶ್ವವಿದ್ಯಾಲಯ ಮತ್ತು ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾಲಯ ಆಸ್ಪತ್ರೆಯ ಸಂಶೋಧಕರು 2020ರಲ್ಲಿ ಸಾರ್ಸ್ – ಕೋವಿಡ್ 2 ಅನ್ನು ಪತ್ತೆಹಚ್ಚಲು ನಾಲ್ಕು ನಾಯಿಗಳಿಗೆ ತರಬೇತಿ ನೀಡಿದರು. ಪ್ರತಿ ನಾಯಿಗಳು ಈ ಹಿಂದೆ ಅಕ್ರಮ ಔಷಧ ಅಥವಾ ಅಪಾಯಕಾರಿ ಸರಕುಗಳು, ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ತರಬೇತಿ ಪಡೆದಿದ್ದವು.

ನಾಯಿಗಳ ಪತ್ತೆ ಕೌಶಲ್ಯವನ್ನು ಪರೀಕ್ಷಿಸಲು 420 ವಾಲೆಂಟಿಯರ್‌ಗಳು ತಲಾ ನಾಲ್ಕು ಸ್ವ್ಯಾಬ್ ಮಾದರಿಗಳನ್ನು ಒದಗಿಸಿದರು.

ನಾಲ್ಕು ನಾಯಿಗಳು ಪಿಸಿಆರ್ ಸ್ವ್ಯಾಬ್ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ್ದ 114 ಮಂದಿಯ ಚರ್ಮದ ಮಾದರಿಯನ್ನು ಪತ್ತೆ ಮಾಡಿದವು.‌ ಎಲ್ಲಾ ಮಾದರಿಗಳ ರೋಗನಿರ್ಣಯದ ನಿಖರತೆಯು ಶೇಕಡಾ 92 ರಷ್ಟಿತ್ತು. ಸೋಂಕಿಲ್ಲದವರನ್ನು ಪತ್ತೆಹಚ್ಚುವ ನಿಖರತೆ 91 ಪ್ರತಿಶತ ಇತ್ತು. ಕೇಲವೊಂದನ್ನು ಮಾತ್ರ ನೆಗೆಟಿವ್ ಎಂದು ತಪ್ಪಾಗಿ ಗುರುತಿಸಿದ್ದವು.

ನಂತರ ನಾಲ್ಕು ನಾಯಿಗಳನ್ನು ಸೆಪ್ಟೆಂಬರ್ 2020 ಮತ್ತು ಏಪ್ರಿಲ್ 2021 ರ ನಡುವೆ ಫಿನ್‌ಲ್ಯಾಂಡ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 303 ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಯಿತು. ಪ್ರತಿ ಪ್ರಯಾಣಿಕರು ಪಿಸಿಆರ್ ಸ್ವ್ಯಾಬ್ ಪರೀಕ್ಷೆಯನ್ನು ಸಹ ತೆಗೆದುಕೊಂಡರು. ಶೇ.99 ಸರಿಯಾದ ಫಲಿತಾಂಶ ಗುರುತಿಸಿದವು‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...