alex Certify ʼಜಿಮ್ʼ ನಲ್ಲಲ್ಲ ಪಾರ್ಲರ್‌ ಮೂಲಕ ಎರಡೇ ದಿನದಲ್ಲಿ ಸಿಕ್ಸ್‌ ಪ್ಯಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜಿಮ್ʼ ನಲ್ಲಲ್ಲ ಪಾರ್ಲರ್‌ ಮೂಲಕ ಎರಡೇ ದಿನದಲ್ಲಿ ಸಿಕ್ಸ್‌ ಪ್ಯಾಕ್…!

Man tired of spending hours at the gym gets six pack tattooed on his  stomach instead | indy100ದೇಹ ಫಿಟ್ ಆಗಿರಲು ಅಥವಾ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಅಂತೆಲ್ಲಾ ಯುವಜನತೆ ಜಿಮ್‌ನಲ್ಲಿ ವರ್ಕೌಟ್ ಮಾಡೋದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ವರ್ಷಗಟ್ಟಲೇ ಜಿಮ್ ನಲ್ಲಿ ಬೆವರು ಹರಿಸಿದರೂ ಸಹ ಸಿಕ್ಸ್ ಪ್ಯಾಕ್ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕಾಗಿ ಈತ ಜಿಮ್ ತೊರೆದು ಟ್ಯಾಟೂ ಪಾರ್ಲರ್ ಗೆ ಹೋಗಿದ್ದಾನೆ. ಅಯ್ಯೋ…… ಇದೇನಿದು ಟ್ಯಾಟು ಅಂದ್ರೆ ಹಚ್ಚೆ ಹಾಕಿಸಿಕೊಳ್ಳುವುದು.. ಅದ್ಹೇಗೆ ಈತ ಟ್ಯಾಟೂ ಪಾರ್ಲರ್ ನಲ್ಲಿ ಸಿಕ್ಸ್ ಪ್ಯಾಕ್ ಪಡೆದುಕೊಳ್ಳಲು ಸಾಧ್ಯ ಅಂತಾ ನಿಮ್ಮ ತಲೆ ಕೊರೆಯುತ್ತಿರಬಹುದು. ಬನ್ನಿ ಹಾಗಿದ್ರೆ ಈ ಸ್ಟೋರಿ ಓದಿ..

ಜಿಮ್‌ಗೆ ವರ್ಷಗಟ್ಟಲೆ ಹೋದರೂ ಸಿಕ್ಸ್ ಪ್ಯಾಕ್ ಪಡೆಯಲು ಸಾಧ್ಯವಾಗದ ವ್ಯಕ್ತಿಯೊಬ್ಬ ಟ್ಯಾಟೂ ಪಾರ್ಲರ್ ಅನ್ನು ಸಂಪರ್ಕಿಸಿದ್ದಾನೆ. ಆಶ್ಚರ್ಯಕರವಾಗಿ ಆತ ಕೇವಲ ಎರಡು ದಿನಗಳಲ್ಲಿ ಸಿಕ್ಸ್ ಪ್ಯಾಕ್ ಪಡೆದಿದ್ದಾನೆ. ಟ್ಯಾಟೂ ಕಲಾವಿದ ಡೀನ್ ಗುಂಥರ್ ಅವರು ಟಿಕ್‌ಟಾಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮಲ್ಲಿ ಬಂದ ಗ್ರಾಹಕ ಟೋನ್ಡ್ (ಗಟ್ಟಿಯಾದ) ಹೊಟ್ಟೆಯನ್ನು ಹೊಂದಲು ಬಯಸಿದ್ದರು. ಅವರು ಹೊಟ್ಟೆಯ ಮೇಲೆ ಪ್ರಭಾವಶಾಲಿಯಾಗಿ ಕಾಣುವ ಎಬಿಎಸ್‌ ಅನ್ನು ಕೆತ್ತಿದ್ದಾರೆ.

ಟ್ರಾವೆಲಿಂಗ್ ಟ್ಯಾಟೂ ಆರ್ಟಿಸ್ಟ್ ಆಗಿರುವ ಡೀನ್, ತಾನು ಕಲರ್ ರಿಯಲಿಸಂನಲ್ಲಿ ಪರಿಣತಿ ಹೊಂದಿದ್ದರಿಂದ ಅದನ್ನು ಬಳಸಲು ಬಯಸಿದ್ದಾಗಿ ತಿಳಿಸಿದ್ದಾರೆ. ಇದು ತನಗೆ ಫ್ಯಾಶನ್ ಪ್ರಾಜೆಕ್ಟ್ ಆಗಿರುವುದರಿಂದ ಟ್ಯಾಟೂಗಾಗಿ ಗ್ರಾಹಕರಿಗೆ ಶುಲ್ಕ ವಿಧಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಟಿಕ್‌ಟಾಕ್ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಶಾಶ್ವತ ಬಾಹ್ಯರೇಖೆಯ ಹಚ್ಚೆ ಹಾಕಿಸಿಕೊಂಡ ನಂತರ, ಇದೀಗ ಟ್ಯಾಟೂ ಮುಖಾಂತರ ವ್ಯಕ್ತಿಯೊಬ್ಬ ಸಿಕ್ಸ್ ಪ್ಯಾಕ್ ಮಾಡಿಸಿಕೊಂಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...