ಪೆಟ್ರೋಲ್ –ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಮುಂಬೈನಲ್ಲಿ ಪೆಟ್ರೋಲ್ ರೇಟ್ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 120 ರೂಪಾಯಿ 21 ಪೈಸೆ ಆಗಿದೆ. ಬುಧವಾರ ಪ್ರತಿ ಲೀಟರ್ಗೆ 80 ಪೈಸೆ ಹೆಚ್ಚಳವಾಗಿತ್ತು. ಅದಾದ್ಮೇಲೆ 3 ದಿನಗಳ ಕಾಲ ಪೆಟ್ರೋಲ್ ದರ ಬದಲಾಗಿಲ್ಲ.
ಆದರೂ 120 ರೂಪಾಯಿ ದಾಟಿರೋದು ಜನಸಾಮಾನ್ಯರ ಆತಂಕ ಹೆಚ್ಚಿಸಿದೆ. ಕೇವಲ 17 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 10 ರೂಪಾಯಿ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 111.25 ರೂ. ಡೀಸೆಲ್ 94.81 ರೂಪಾಯಿ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 105.41 ರೂಪಾಯಿಗಳಿದ್ದು, ಡೀಸೆಲ್ ದರ ಒಂದು ಲೀಟರ್ಗೆ 96.67 ರೂಪಾಯಿ ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ 104.77 ರೂಪಾಯಿಗೆ ಮಾರಾಟವಾಗ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 115.08 ರೂಪಾಯಿ, ಡೀಸೆಲ್ ಬೆಲೆ 99 ರೂಪಾಯಿ 82 ಪೈಸೆ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 110 ರೂಪಾಯಿ 89 ಪೈಸೆ ಇದ್ದು, ಡೀಸೆಲ್ ಒಂದು ಲೀಟರ್ಗೆ 100 ರೂಪಾಯಿ 98 ಪೈಸೆಗೆ ಬಂದು ನಿಂತಿದೆ.
2021ರ ನವೆಂಬರ್ 4 ರಿಂದ 2022ರ ಮಾರ್ಚ್ 22ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಮಾರ್ಚ್ 22ರ ನಂತರ 17 ದಿನಗಳಲ್ಲಿ 14 ಬಾರಿ ಬೆಲೆ ಹೆಚ್ಚಳವಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆಯಾಗಿದ್ರಿಂದ ಭಾರತಕ್ಕೂ ಅದರ ಬಿಸಿ ತಟ್ಟಿದೆ. ಯಾಕಂದ್ರೆ ಭಾರತವು ಶೇ.85ರಷ್ಟು ಕಚ್ಚಾ ತೈಲವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.