ಅಪಘಾತ ಸಣ್ಣದಾಗಿರಲಿ, ದೊಡ್ಡ ಪ್ರಮಾಣದಲ್ಲಿಯೇ ಆಗಿರಲಿ. ಅದರ ಪರಿಣಾಮ ಮಾತ್ರ ಭೀಕರವಾಗಿರುತ್ತದೆ. ಅಪಘಾತದ ಗಾಯಗಳು ವಾಸಿಯಾದರೂ ನೆನಪುಗಳು ಮಾತ್ರ ಹಸಿಯಾಗಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದಲ್ಲಿ ಮಹಿಳೆಯೊಬ್ಬರು ಕಾರು ಅಪಘಾತದಲ್ಲಿ ಏರ್ಬ್ಯಾಗ್ನಿಂದಾಗಿ ಬದುಕುಳಿದರೂ ಅವರ ಕೈ ಮೇಲೆ ಮಾತ್ರ ಮಾಸದ ಹೆಗ್ಗುರುತೊಂದು ಮೂಡಿದೆ. ಇದು ಗಾಯವಲ್ಲದಿದ್ದರೂ ಅವರ ನೆಮ್ಮದಿಯನ್ನು ಮಾತ್ರ ಕೆಡಿಸಿದೆ.
ಹೌದು, ಟೆಕ್ಸಾಸ್ ನಿವಾಸಿಯಾಗಿರುವ ಆ್ಯಂಡ್ರಿಯಾ ಜುವಾರೆಜ್ ಅವರು ಇತ್ತೀಚೆಗೆ ಕಾರು ಚಲಾಯಿಸುವಾಗ ಅಪಘಾತ ಸಂಭವಿಸಿದೆ. ಕಾರಿನ ಏರ್ಬ್ಯಾಗ್ನಿಂದಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಏರ್ಬ್ಯಾಗ್ ಏಕಾಏಕಿ ಅವರನ್ನು ಕವರ್ ಮಾಡಿದ್ದು ಹಾಗೂ ಅಪಘಾತದ ತೀವ್ರತೆ ಜಾಸ್ತಿ ಇದ್ದ ಕಾರಣ ಅವರ ಕೈ ಮೇಲೆ ಬ್ಯಾಗ್ ಮೇಲಿದ್ದ ’ನಿಸಾನ್’ ಎಂಬ ಲೋಗೊ ಅಚ್ಚೊತ್ತಿದೆ. ಅಪಘಾತದ ಬಳಿಕ ಲೋಗೊ ನೋಡಿದ ಮಹಿಳೆಯು ಎಷ್ಟು ಹೊತ್ತು ತೊಳೆದರೂ, ಸಾಬೂನು ಹಾಕಿ ಉಜ್ಜಿದರೂ ಲೋಗೊ ಮಾತ್ರ ಮರೆಮಾಚುತ್ತಿಲ್ಲ. ಇದರಿಂದ ಅವರ ನೆಮ್ಮದಿಯೂ ಹಾಳಾಗಿದೆ.
GOOD NEWS: ಇನ್ಮುಂದೆ ಸೀಟ್ ಮಾತ್ರವಲ್ಲ, ಇಡೀ ರೈಲು ಅಥವಾ ಬೋಗಿಯನ್ನೇ ಬುಕ್ ಮಾಡಬಹುದು….!
ಕೈಮೇಲೆ ಅಚ್ಚೊತ್ತಿರುವ ಚಿತ್ರವನ್ನು ಜುವಾರೆಜ್ ಅವರು ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದು, ಸಾವಿರಾರು ಜನ ಲೈಕ್ ಮಾಡಿದ್ದಾರೆ. ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿಯಂತೂ ತಮಗೂ ಉಂಟಾದ ಇಂತಹ ಅಚ್ಚರಿಯ ಘಟನೆ ಕುರಿತು ಮಾಹಿತಿ ನೀಡಿದ್ದಲ್ಲದೆ, ’ಹ್ಯುಂಡಾಯ್ ಎಚ್’ ಎಂಬ ಲೋಗೊ ಅಚ್ಚೊತ್ತಿರುವ ಫೋಟೊವನ್ನು ಸಹ ಅಪ್ಲೋಡ್ ಮಾಡಿದ್ದಾರೆ. ಒಟ್ಟಿನಲ್ಲಿ ಆಧುನಿಕ ಕಾಲದಲ್ಲಿ ಏರ್ಬ್ಯಾಗ್ಗಳು ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿದ್ದರೂ, ಕೆಲವೊಬ್ಬರ ವಿಚಾರದಲ್ಲಿ ನಡೆಯುವ ಇಂತಹ ವಿಚಿತ್ರ ಘಟನೆಗಳು ಅಚ್ಚರಿಯ ಜತೆಗೆ ಆತಂಕವನ್ನೂ ಮೂಡಿಸುತ್ತವೆ.
https://twitter.com/pieIcanela/status/1499787700743856133?ref_src=twsrc%5Etfw%7Ctwcamp%5Etweetembed%7Ctwterm%5E1499919583406608384%7Ctwgr%5E%7Ctwcon%5Es2_&ref_url=https%3A%2F%2Fzeenews.india.com%2Fauto%2Fairbag-saved-life-but-leaves-a-wacky-bruise-on-driver-s-arm-check-pics-2443399.html