ಭಾರೀ ಶಕ್ತಿಶಾಲಿ ಮಾಧ್ಯಮವಾದ ಅಂತರ್ಜಾಲದಲ್ಲಿ ಯಾವುದೇ ವ್ಯಕ್ತಿ ಆಹೋರಾತ್ರಿ ಸಂಚಲನ ಸೃಷ್ಟಿಸಬಹುದು ಎಂಬುದಕ್ಕೆ ರಾನು ಮೊಂಡಲ್ರಿಂದ ಹಿಡಿದು ಭುಬನ್ ಬಡ್ಯಾಕರ್ವರೆಗೂ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಇದೀಗ ಈ ಪಟ್ಟಿಗೆ ಹೊಸದೊಂದು ಹೆಸರು ಸೇರ್ಪಡೆಗೊಂಡಿದೆ.
ಕೇರಳದ ಜನನಿಬಿಡ ಪ್ರದೇಶಗಳಲ್ಲಿ ಬಲೂನ್ ಮಾರಾಟ ಮಾಡುವ ಹುಡುಗಿಯೊಬ್ಬಳು ಆನ್ಲೈನ್ನಲ್ಲಿ ಹೆಸರು ಮಾಡಿದ್ದಾಳೆ. ವೆಡ್ಡಿಂಗ್ ಛಾಯಾಗ್ರಾಹಕರೊಬ್ಬರು ಈ ಹುಡುಗಿಯ ಖ್ಯಾತಿಗೆ ಕಾರಣರಾಗಿದ್ದಾರೆ.
ಹೀಲಿಯಂ ಅನಿಲ ಸೇವಿಸಿದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ..!
ಅರ್ಜುನ್ ಕೃಷ್ಣನ್ ಹೆಸರಿನ ಈ ಛಾಯಾಗ್ರಾಹಕ ಕೇರಳದ ಅಳಂದೂರ್ ಕಾವು ಉತ್ಸವದ ಸಂದರ್ಭದಲ್ಲಿ ಈ ಹುಡುಗಿಯನ್ನು ಪತ್ತೆ ಮಾಡಿದ್ದಾರೆ. ಆ ವೇಳೆ ಆಕೆ ಬಲೂನ್ಗಳೊಂದಿಗೆ ಕುಳಿತಿದ್ದ ರೀತಿ ಛಾಯಾಗ್ರಾಹಕರಿಗೆ ಒಂದೊಳ್ಳೇ ಚಿತ್ರ ಸೆರೆ ಹಿಡಿಯಲು ಪ್ರೇರೇಪಿಸಿದೆ. ಕೂಡಲೇ ಆಕೆಯ ಚಿತ್ರ ಸೆರೆ ಹಿಡಿದ ಅರ್ಜುನ್ ಅದನ್ನು ಆಕೆ ಮತ್ತು ಆಕೆಯ ತಾಯಿಯೊಂದಿಗೆ ಅಲ್ಲೇ ಹಂಚಿಕೊಂಡಿದ್ದಾರೆ.
ಕಿಸ್ಬು ಹೆಸರಿನ ರಾಜಸ್ಥಾನದ ಈ ಹುಡುಗಿ ಕೇರಳದಲ್ಲಿ ಬಲೂನ್ ಮಾರಾಟ ಮಾಡುತ್ತಾಳೆ. ತಾವು ಸೆರೆ ಹಿಡಿದ ಆಕೆಯ ಚಿತ್ರವನ್ನು ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.