ಕೀವ್; ರಷ್ಯಾ ಶೆಲ್ ದಾಳಿಗೆ ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ವಿದೇಶಾಂಗ ಇಲಾಖೆ, ಭಾರತೀಯರ ಸ್ಥಳಾಂತರಕ್ಕೆ ಸುರಕ್ಷಿತ ಮಾರ್ಗಕ್ಕಾಗಿ ರಷ್ಯಾ-ಉಕ್ರೇನ್ ರಾಯಭಾರಿಗಳಿಗೆ ಮನವಿ ಮಾಡಿದೆ.
ಖಾರ್ಕಿವ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮೊದಲು ಭದ್ರತೆ ನೀಡಬೇಕು. ಅವರ ಸುರಕ್ಷಿತ ಸ್ಥಳಾಂತರಕ್ಕೆ ಮಾರ್ಗಗಳನ್ನು ಹೇಳಿ ಎಂದು ರಷ್ಯಾ ಹಾಗೂ ಉಕ್ರೇನ್ ರಾಯಭಾರಿಗಳನ್ನು ಕರೆಸಿಕೊಂಡು ವಿದೇಶಾಂಗ ಕಾರ್ಯದರ್ಶಿ ಮನವಿ ಮಾಡಿದ್ದಾರೆ.
ಉಕ್ರೇನ್ ನ ಇತರ ನಗರಗಳಲ್ಲಿರುವ ಭಾರತೀಯರ ತುರ್ತು ಸುರಕ್ಷತೆ ಬಗ್ಗೆಯೂ ಇದೇ ವೇಳೆ ಮನವಿ ಮಾಡಲಾಗಿದೆ.
ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್ ಕಹಾನಿ’
ಖಾರ್ಕಿವ್ ನಗರದಲ್ಲಿ ರಷ್ಯಾ ಭೀಕರ ದಾಳಿ ನಡೆಸುತ್ತಿದ್ದು, ತಾಯ್ನಾಡಿಗೆ ವಾಪಸ್ ಆಗಬೇಕೆಂಬ ಹಂಬಲದಿಂದ ಪೋಲ್ಯಾಂಡ್ ಗಡಿಗೆ ತೆರಳುತ್ತಿದ್ದ ರಾಜ್ಯದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಈ ನಡುವೆ ಖಾರ್ಕಿವ್ ನಗರದ ಹಾಸ್ಟೇಲ್ ಬಂಕರ್ ನಲ್ಲಿ ಆಶ್ರಯ ಪಡೆದಿರುವ ರಾಜ್ಯದ ವಿದ್ಯಾರ್ಥಿಗಳು ಆಹಾರ ನೀರಿಲ್ಲದೇ ಪರದಾಡುತ್ತಿದ್ದು, ನಮ್ಮನ್ನು ತಕ್ಷಣ ಸ್ಥಳಾಂತರ ಮಾಡಿ ರಷ್ಯಾ ಗುಂಡಿನ ದಾಳಿ, ಬಾಂಬ್ ಸ್ಫೋಟದ ಆತಂಕದಲ್ಲಿ ಹೊರ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.