ಇಂಪೀರಿಯಲ್ ಕಾಲೇಜು ಲಂಡನ್ ಸಂಶೋಧಕರ ನೇತೃತ್ವದ ತಂಡವು ನಡೆಸಿದ ಹೊಸ ಅಧ್ಯಯನದ ಪ್ರಕಾರ ಕೊರೊನಾ ವೈರಸ್ ಸಂಪರ್ಕಕ್ಕೆ ಬಂದ 2 ದಿನಗಳ ನಂತರ ಕೋವಿಡ್ 19 ಸೋಂಕಿನ ರೋಗ ಲಕ್ಷಣಗಳು ಬಹಳ ವೇಗವಾಗಿ ಬೆಳೆಯಲು ಆರಂಭವಾಗುತ್ತದೆ. ಅಂದರೆ ಈ ಹಿಂದಿನ ಅಧ್ಯಯನಗಳು ಹೇಳಿದ್ದಕ್ಕಿಂತ ಅತ್ಯಂತ ಮುಂಚಿತವಾಗಿ ಅಂದರೆ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ಕೇವಲ 48 ಗಂಟೆಗಳ ಅವಧಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಈ ಅಧ್ಯಯನವು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಐದರಿಂದ ಆರು ದಿನಗಳ ಕಾಲವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿತ್ತು.
ಕೋವಿಡ್ ಸೋಂಕು ಮೊದಲು ಗಂಟಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ಒಳಗಾದ ಐದು ದಿನಗಳ ಬಳಿಕ ಲಕ್ಷಣಗಳು ಮಿತಿಮೀರುತ್ತದೆ ಎಂದು ಈ ಹೊಸ ಅಧ್ಯಯನವು ಹೇಳಿದೆ. ವೈರಸ್ ಮೂಗಿಗಿಂತ ಹೆಚ್ಚಾಗಿ ಗಂಟಲಿನಲ್ಲಿ ಇರುತ್ತದೆ. ಇದರಿಂದಾಗಿ ಬಾಯಿಯಿಂದ ವೈರಸ್ಗಳು ಹೊರಹೋಗುವ ಅಪಾಯಗಳು ಹೆಚ್ಚಿರುತ್ತದೆ ಎಂದು ಈ ಅಧ್ಯಯನವು ಹೇಳಿದೆ.