ಮಾನಸಿಕ ಅಸ್ವಸ್ಥನಾಗಿದ್ದ ಪುತ್ರ ತನ್ನ ತಾಯಿ ಹಾಗೂ ಸಹೋದರಿಯ ಮೇಲೆ ಡಂಬೆಲ್ನಿಂದ ಹಲ್ಲೆ ನಡೆಸಿದ್ದಾನೆ. ತೆಲಂಗಾಣದ ಹೈದರಾಬಾದ್ ಸುಲ್ತಾನ್ ಬಜಾರ್ನಲ್ಲಿ ಈ ಶಾಕಿಂಗ್ ಘಟನೆಯು ವರದಿಯಾಗಿದೆ.
24 ವರ್ಷದ ಸುಧೀರ್ ಕುಮಾರ್ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೇಹದಂಡನೆ ಮಾಡುತ್ತಿದ್ದ ಎನ್ನಲಾಗಿದೆ .ಇದನ್ನು ಗಮನಿಸಿದ ತಾಯಿ ಕೊಂಡ ಪಾಪಮ್ಮ ವ್ಯಾಯಾಮ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಇಷ್ಟಕ್ಕೆ ತಾಯಿ ಮೇಲೆ ಕೋಪಗೊಂಡ ಪುತ್ರ ತಾಯಿಯ ಮೇಲೆ ಡಂಬೆಲ್ನಿಂದ ದಾಳಿ ನಡೆಸಿದ್ದಾನೆ. ಇದನ್ನು ತಪ್ಪಿಸಲು ಬಂದ ಸಹೋದರಿ ಸುಚಿತ್ರಾ ಮೇಲೂ ಈತ ಹಲ್ಲೆ ನಡೆಸಿದ್ದಾನೆ.
ಪುತ್ರ ನಡೆಸಿದ ದಾಳಿಯಲ್ಲಿ ತಾಯಿ ಕೊಂಡ ಪಾಪಮ್ಮ ಸಾವನ್ನಪ್ಪಿದ್ದಾರೆ. ಸಹೋದರಿ ಸುಚಿತ್ರಾಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸುಧೀರ್ನನ್ನು ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪದವಿ ಪೂರೈಸಿದ್ದ ಸುಧೀರ್ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ವರ್ಷ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಈತ ಮನೆಯಲ್ಲಿಯೇ ವಾಸವಿದ್ದ ಎನ್ನಲಾಗಿದೆ.
ತನಿಖೆಯ ವೇಳೆಯಲ್ಲಿ ಪೊಲೀಸರಿಗೆ ಸುಧೀರ್ ಒಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಅಲ್ಲದೇ ಈತ ಕೆಲ ಸಮಯದ ಹಿಂದಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಆರಂಭಿಸಿದ್ದ ಎನ್ನಲಾಗಿದೆ. ಈತನ ತಂದೆ ಮೃತಪಟ್ಟಿದ್ದು ಕಳೆದ 7 ವರ್ಷಗಳಿಂದ ತಾಯಿ ಹಾಗೂ ಸಹೋದರಿಯ ಜೊತೆಯಲ್ಲಿ ವಾಸವಿದ್ದ.