ಓಮಿಕ್ರಾನ್ ರೂಪಾಂತರಿ ಹೆಚ್ಚುತ್ತಿರುವ ನಡುವೆಯೇ ಆರೋಗ್ಯ ತಜ್ಞರು ಬಟ್ಟೆಯ ಮಾಸ್ಕ್ಗಳ ಬದಲಾಗಿ ಎನ್ 95 ಅಥವಾ ಕೆಎನ್ 95 ಮಾಸ್ಕ್ಗಳನ್ನೇ ಧರಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ಹಾಗಾದರೆ ಬಟ್ಟೆಯ ಮಾಸ್ಕ್ ಏಕೆ ಸುರಕ್ಷಿತವಲ್ಲ..? ಬಟ್ಟೆಯ ಮಾಸ್ಕ್ಗಳಿಗಿಂತ ಎನ್ 95 ಮಾಸ್ಕ್ಗಳಲ್ಲಿ ಇರುವ ವಿಶೇಷತೆ ಏನು ಇಲ್ಲಿದೆ ಮಾಹಿತಿ :
ಕೊರೊನಾದ ಓಮಿಕ್ರಾನ್ ರೂಪಾಂತರಿಯು ಕೋವಿಡ್ ಮೂರನೆ ಅಲೆಗೆ ಕಾರಣವಾಗಿರುವುದು ಮಾತ್ರವಲ್ಲದೇ ಈ ಹಿಂದೆ ಯಾವುದೇ ರೂಪಾಂತರಿಯು ಹರಡದಷ್ಟು ವೇಗದಲ್ಲಿ ಹರಡುತ್ತಿದೆ. ಅತಿಯಾದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಓಮಿಕ್ರಾನ್ ರೂಪಾಂತರಿಯ ಆತಂಕವು ಇನ್ನಷ್ಟು ಹೆಚ್ಚಿರುತ್ತದೆ.
ಇತ್ತೀಚೆಗಷ್ಟೇ ಅಮೆರಿಕದ ರೋಗ ನಿಯಂತ್ರಣ ಕೇಂದ್ರವು ಆರೋಗ್ಯ ಕಾರ್ಯಕರ್ತರು ಬಳಕೆ ಮಾಡುವ ಫೇಸ್ ಮಾಸ್ಕ್ಗಳ ಬಗ್ಗೆ ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡಿದೆ. ಅಲ್ಲದೇ ಮುಖಕ್ಕೆ ಸರಿಯಾಗಿ ಫಿಟ್ ಆಗುವಂತಹ ಮಾಸ್ಕ್ಗಳನ್ನೇ ಧರಿಸಬೇಕು ಎಂದು ಸಹ ಹೇಳಿದೆ.
ಯಾವುದೇ ಮಾಸ್ಕ್ ಧರಿಸದೇ ಇರುವುದಕ್ಕಿಂತ ಯಾವುದಾದರೊಂದು ಮಾಸ್ಕ್ ಧರಿಸುವುದು ಉತ್ತಮ ಎಂಬುದು ನಮ್ಮ ಮುಖ್ಯ ಸಂದೇಶವಾಗಿದೆ ಎಂದು ಸಿಡಿಸಿ ವಕ್ತಾರ ಕ್ರಿಸ್ಟನ್ ನೋರ್ಡ್ಲಂಡ್ ಹೇಳಿದ್ದಾರೆ.
ಈ ಮೊದಲು ಕಡಿಮೆ ಉತ್ಪಾದನೆ ಹಿನ್ನೆಲೆಯಲ್ಲಿ ಎನ್ 95 ಮಾಸ್ಕ್ ಕೇವಲ ಆರೋಗ್ಯ ಸಿಬ್ಬಂದಿ ಮಾತ್ರ ಬಳಕೆ ಮಾಡಬೇಕು ಎಂದು ಹೇಳಿದ್ದರು. ಸರ್ಜಿಕಲ್ ಎನ್ 95 ಎಂಬ ವಿಶೇಷವಾದ ಮಾಸ್ಕ್ ಒಂದಿದ್ದು, ಇದನ್ನು ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ನೀಡಲಾಗುತ್ತಿತ್ತು. ಈ ವ್ಯವಸ್ಥೆಯು ಇದೇ ರೀತಿ ಮುಂದುವರಿಯಲಿದೆ ಎಂದು ಸಿಡಿಸಿ ಹೇಳಿದೆ.
ಎನ್ 95 ಮಾಸ್ಕ್ ಎಷ್ಟು ಸುರಕ್ಷಿತ..?
ಬಟ್ಟೆಯ ಮಾಸ್ಕ್ಗಳಿಗಿಂತ ಎನ್ 95 ಮಾಸ್ಕ್ಗಳನ್ನು ನಿಮ್ಮ ಮುಖದ ಅಳತೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಅಲ್ಲದೇ ವೈರಾಣುಗಳು ಮೂಗನ್ನು ಪ್ರವೇಶಿಸದಂತೆ ತಡೆಯಲು ವಿಶೇಷವಾದ ಪದರವನ್ನು ಎನ್ 95 ಮಾಸ್ಕ್ಗಳಲ್ಲಿ ಅಳವಡಿಸಲಾಗಿರುತ್ತದೆ.
ಬಟ್ಟೆ ಮಾಸ್ಕ್ಗಳಿಗೆ ಹೋಲಿಕೆ ಮಾಡಿದರೆ ಎನ್ 95 ಮಾಸ್ಕ್ಗಳಲ್ಲಿ ರಂಧ್ರಗಳು ಅತ್ಯಂತ ಚಿಕ್ಕದಾಗಿ ಇರುತ್ತದೆ. ಹೀಗಾಗಿ ಯಾವುದೇ ರೀತಿಯ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳು ಒಳಗೆ ಹೋಗುವುದಿಲ್ಲ.
ಎನ್ 95 ಮಾಸ್ಕ್ಗಳಂತೆಯೇ ಕೆಎನ್ 95 ಹಾಗೂ ಕೆಎಫ್94 ಎಸ್ ಮಾಸ್ಕ್ಗಳು ಕೂಡ ವೈರಾಣುಗಳ ವಿರುದ್ಧ ಉತ್ತಮ ರಕ್ಷಣೆಯನ್ನು ನೀಡುತ್ತವೆ ಎಂದು ಸಿಡಿಸಿ ಹೇಳಿದೆ.