ಕೊರೊನಾ ಸೋಂಕಿನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಕೊರೊನಾ ಸಾಂಕ್ರಾಮಿಕದಿಂದಾಗಿ ಮದುವೆಯ ಕಾರ್ಯಗಳಂತೂ ಚಿತ್ರವಿಚಿತ್ರವಾಗಿ ನಡೆಯುತ್ತಿದೆ ಅಂತಾ ಹೇಳಿದ್ರೆ ತಪ್ಪಾಗಲಾರದು. ಮೊದಲೆಲ್ಲ ದೇಶಿ ಮದುವೆಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಈಗ ಇದಕ್ಕೆಲ್ಲ ಕೋವಿಡ್ ಫುಲ್ ಸ್ಟಾಪ್ ಇಡೋ ರೀತಿ ಕಾಣ್ತಿದೆ.
ಕೊರೊನಾದಿಂದಾಗಿ ವರ್ಚುವಲ್ ಸಭೆಗಳು ಮುನ್ನಲೆಗೆ ಬಂದಿದ್ದನ್ನು ಕೇಳಿದ್ದೀರಿ. ಆದರೆ, ಇಲ್ಲೊಂದು ನವಜೋಡಿ ಅತಿಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ವರ್ಚುವಲ್ ಮದುವೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಹೌದು..! ಸಂದೀಪನ್ ಸರ್ಕಾರ್ ಹಾಗೂ ಅದಿತಿ ದಾಸ್ ಅವರ ಮದುವೆಗೆ ಕೇವಲ 100 ಮಂದಿ ಮಾತ್ರ ಕಲ್ಯಾಣ ಮಂಟಪದಲ್ಲಿ ಹಾಜರಿರಲಿದ್ದಾರೆ. ಉಳಿದ 350 ಅತಿಥಿಗಳು ಗೂಗಲ್ ಮೀಟ್ ಮೂಲಕ ಮದುವೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ಅಲ್ಲದೇ ಅತಿಥಿಗಳಿಗೆ ಮದುವೆ ಊಟ ಮಿಸ್ ಆಗಬಾರದು ಅಂತಾ ಎಲ್ಲಾ ಅತಿಥಿಗಳಿಗೆ ಜೊಮ್ಯಾಟೋ ಮೂಲಕ ಫುಡ್ ಆರ್ಡರ್ ಮಾಡಲು ನಿರ್ಧರಿಸಲಾಗಿದೆ.
ಇದು ನಮ್ಮ ಪಾಲಿಗಂತೂ ಹೊಸ ಐಡಿಯಾವಾಗಿದೆ. ನಾವು ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಈ ಕೆಲಸಕ್ಕೆ ಮುಂದಾದೆವು. ಮದುವೆಯ ಡೆಲಿವರಿ ನೀಡಲು ಒಂದು ತಂಡವನ್ನೆ ರಚಿಸಿದ್ದೆವು.ಈ ರೀತಿಯ ಕಾರ್ಯಕ್ರಮಗಳನ್ನು ಇನ್ನಷ್ಟು ಮಾಡಲು ಉತ್ಸುಕರಾಗಿದ್ದೇವೆ ಎಂದು ಜೊಮ್ಯಾಟೋ ಕಂಪನಿ ಹೇಳಿದೆ. ಅಂದ ಹಾಗೆ, ಈ ಜೋಡಿಯ ಡಿಫರೆಂಟ್ ಮದುವೆ ಇದೇ ತಿಂಗಳ 24ನೇ ತಾರೀಖಿನಂದು ನೆರವೇರಲಿದೆ.