ಅಸ್ಸಾಂನ ಬಿಸ್ವನಾಥ್ ಜಿಲ್ಲಾಡಳಿತವು ಹೊಸ ವರ್ಷದಂದು ಡ್ರಿಂಕ್ ಅಂಡ್ ಡ್ರೈವ್ ಸಮಸ್ಯೆಯನ್ನು ಎದುರಿಸಲು ಎರಡು ಸಹಾಯವಾಣಿ ಸಂಖ್ಯೆಗಳನ್ನು ಜಾರಿಗೊಳಿಸಿದೆ. ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ, ಉದ್ದೇಶದಿಂದ ಡ್ರಾಪ್ ಹೋಮ್ ಕಾರ್ಯಕ್ರಮವನ್ನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಕಾರ್ಯಕ್ರಮದಿಂದ ಕುಡುಕರನ್ನು ಅವರ ನಿವಾಸಗಳಿಗೆ ಬಿಡಲು ಸಹಾಯವಾಣಿ ಸಹಾಯ ಮಾಡುತ್ತದೆ. ಈ ಕಾರ್ಯದ ಭಾಗವಾಗಿ, ಜಿಲ್ಲಾಡಳಿತವು ಎರಡು ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಿ, ಈ ಉದ್ದೇಶಕ್ಕಾಗಿ ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಿದೆ.
ಡಿಸೆಂಬರ್ 31 ರಂದು ಈ ಸೌಲಭ್ಯ ಲಭ್ಯವಾಗಲಿದೆ. ಅತಿಯಾಗಿ ಮದ್ಯ ಸೇವಿಸಿ ವಾಹನ ಚಲಾಯಿಸಲು ಆಗದಿದ್ದವರು ಈ ಸಹಾಯವಾಣಿ ಸಂಖ್ಯೆಗಳನ್ನು ಡಯಲ್ ಮಾಡುವ ಮೂಲಕ ಸಹಾಯ ಪಡೆಯಬಹುದು. ಇದಕ್ಕಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಹತ್ತು ವಾಹನಗಳನ್ನು ನಿಯೋಜಿಸಲಾಗಿದೆ.
ಡಿಸೆಂಬರ್ 31 ರ ರಾತ್ರಿಯನ್ನು ಆಚರಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆಚರಣೆಯ ಸಂದರ್ಭದಲ್ಲಿ ಯಾರಾದರೂ ಕುಡಿದು ಮನೆಗೆ ಹಿಂತಿರುಗಲು ಸಾಧ್ಯವಾಗದಿದ್ದವರಿಗೆ ಸಹಾಯ ಮಾಡಲು ಈ ಸಹಾಯವಾಣಿಯನ್ನ ತರಲಾಗಿದೆ ಎಂದು ಬಿಸ್ವನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಲೀನಾ ಡೋಲಿ ತಿಳಿಸಿದ್ದಾರೆ.
ಬಿಸ್ವನಾಥ್ ಪೊಲೀಸ್ ಠಾಣೆಯಲ್ಲಿ ಮೂರು ವಾಹನಗಳು, ಗೋಹ್ಪುರ್ ಮತ್ತು ಸೂಟಿಯಾ ಪೊಲೀಸ್ ಠಾಣೆಯಲ್ಲಿ ತಲಾ ಎರಡು ವಾಹನಗಳು, ಜಿಂಜಿಯಾ, ಹೆಲೆಮ್ ಮತ್ತು ಬೆಹಾಲಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸೇರಿದಂತೆ 10 ವಾಹನಗಳು ಲಭ್ಯವಿರುತ್ತವೆ. ಈ ವಾಹನಗಳು ಡಿಸೆಂಬರ್ 31 ರ ರಾತ್ರಿ ಚಾಲಕರಿಗೆ ಲಭ್ಯವಿರುತ್ತವೆ” ಎಂದು ಲೀನಾ ಡೋಲಿ ಹೇಳಿದರು. 9854684760 ಮತ್ತು 9954758961 ಈ ನಂಬರ್ ಗಳಿಗೆ ಕರೆ ಮಾಡಿ ಡ್ರಾಪ್ ಹೋಮ್ ಸೇವೆ ಪಡೆಯಬಹುದು ಎಂದು ಲೀನಾ ಡೋಲಿ ತಿಳಿಸಿದ್ದಾರೆ.