alex Certify ಅಸ್ಸಾಂ ಪೊಲೀಸ್​ ಜೊತೆ ರೋಹಿತ್​ ಶರ್ಮಾ; ಫೋಟೋ ನೋಡಿದ್ರೆ ಬಂಧನಕ್ಕೊಳಗಾದಂತೆ ಕಾಣ್ತಿದೆ ಅಂದ್ರು ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಸಾಂ ಪೊಲೀಸ್​ ಜೊತೆ ರೋಹಿತ್​ ಶರ್ಮಾ; ಫೋಟೋ ನೋಡಿದ್ರೆ ಬಂಧನಕ್ಕೊಳಗಾದಂತೆ ಕಾಣ್ತಿದೆ ಅಂದ್ರು ನೆಟ್ಟಿಗರು

ಸಾಮಾನ್ಯವಾಗಿ ಕ್ರಿಕೆಟಿಗರು, ರಾಜಕಾರಣಿಗಳು, ಚಿತ್ರರಂಗದ ತಾರೆಯರನ್ನು ಕಂಡೊಡನೆ ಜನಸಾಮಾನ್ಯರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಪೊಲೀಸರೊಳಗಿನ ಅಭಿಮಾನವೂ ಕೆಲವೊಮ್ಮೆ ಎದ್ದುಕೂರುತ್ತದೆ. ಇದರ ಪರಿಣಾಮ ಪೊಲೀಸರು ಸಹ ತಾವು ಕರ್ತವ್ಯದಲ್ಲಿ ಇದ್ದಾಗಲೇ ಸೆಲೆಬ್ರಿಟಿಗಳ ಪಕ್ಕ ನಿಂತೂ ಫೋಟೋ ತೆಗೆಸಿಕೊಳ್ಳುವುದುಂಟು.

ಈಗ ಇಂತದ್ದೊಂದು ಪ್ರಸಂಗ ಚರ್ಚೆ ಹುಟ್ಟುಹಾಕಿದೆ. ಭಾರತದ ಸ್ಟಾರ್​ ಕ್ರಿಕೆಟಿಗ ರೋಹಿತ್​ ಶರ್ಮಾ ಅಸ್ಸಾಂನ ಡೆಪ್ಯುಟಿ ಕಮಿಷನರ್​ ಆಫ್​ ಪೊಲೀಸ್​ ಪೊಂಜಿತ್​ ದೋವಾರಾ ಅವರೊಂದಿಗೆ ಫೋಟೋವನ್ನು ಪೋಸ್ಟ್​ ಮಾಡಿದ ನಂತರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಏಕ್​ ಸೆಂಚುರಿ ಬನ್​ ತಾ ಹೇ ಎಂಬ ಶೀರ್ಷಿಕೆಯೊಂದಿಗೆ ಫೋಟೋ ಪೋಸ್ಟ್​ ಮಾಡಿದ್ದು, ನೆಟ್ಟಿಗರನೇಕರು ಶರ್ಮಾರನ್ನು ಬಂಧಿಸಲಾಗಿದೆ ಎಂದು ಭಾವಿಸಿದ್ದರಂತೆ.

ಮೊದಲು ನೋಡಿದಾಗ ನೀವು ಅವರನ್ನು ಬಂಧಿಸುತ್ತೀದ್ದಿರಿ ಎಂದು ನಾನು ಭಾವಿಸಿದೆ ಎಂದು ಟ್ವಿಟ್ಟರ್​ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, ಒಂದು ಕ್ಷಣದಲ್ಲಿ ಒಬ್ಬ ಅಪರಾಧಿ ಸಿಕ್ಕಿಬಿದ್ದಿದ್ದಾನೆ ಎಂದು ನಾನು ಭಾವಿಸಿದೆ ಎಂದು ಬರೆದಿದ್ದಾರೆ.

ರೋಹಿತ್​ ಶರ್ಮಾ ನೆಟ್ಟಿಗರ ಗಮನ ಸೆಳೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಅವರು 75 ನೇ ಸ್ವಾತಂತ್ರ್ಯೋತ್ಸವದ ದಿನ ಹಂಚಿಕೊಂಡ ಪೋಸ್ಟ್​ ಮೈಕ್ರೋಬ್ಲಾಗಿಂಗ್​ ಸೈಟ್​ ಟ್ವಿಟರ್​ನಲ್ಲಿ ಸಾಕಷ್ಟು ಸದ್ದು ಮಾಡಿತು. ಆ ಚಿತ್ರವನ್ನು ಫೋಟೋಶಾಪ್​ ಮಾಡಲಾಗಿದೆ ಎಂಬುದು ನೆಟ್ಟಿಗರ ವಾದವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...