ಕೆಲ ದಶಕಗಳ ಹಿಂದೆ ಸಮಾಜದ ನಿಷಿದ್ಧ ಪದ್ಧತಿಯಾಗಿದ್ದ ಸಲಿಂಗ ಪ್ರೇಮ ಈಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾನೂನುಬದ್ಧವಾಗಿದೆ. ಇದೇ ಸಾಲಿಗೆ ಡಿಸೆಂಬರ್ 7ರಂದು ಚಿಲಿ ದೇಶ ಸೇರಿದ್ದು, ಸಲಿಂಗಿಗಳ ಮದುವೆಯನ್ನ ಲೀಗಲ್ ಮಾಡಿದ 30ನೇ ದೇಶವಾಗಿದೆ. ಚಿಲಿಯ ಈ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ನಿರ್ಧಾರದಿಂದ ಚಿಲಿಯ ಆರ್ಥಿಕ ವ್ಯವಸ್ಥೆಗೆ ಧನಾತ್ಮಕ ಪರಿಣಾಮ ಬೀರಿದೆ.
ಈ ನಿರ್ಧಾರದಿಂದ ಚಿಲಿಯಲ್ಲೆ ನೆಲೆಸಿರುವ ಸಾಕಷ್ಟು ಸಲಿಂಗ ಪ್ರೇಮಿಗಳು, ಆದಷ್ಟು ಬೇಗ ಮದುವೆಯಾಗುವ ಉತ್ಸಾಹದಲ್ಲಿದ್ದಾರೆ. ಇದರಿಂದ ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ. ಜೊತೆಗೆ ಈ ನಿರ್ಧಾರದಿಂದ ಪ್ರವಾಸಿಗರು ಚಿಲಿಯತ್ತ ಆಕರ್ಷಿತರಾಗುತ್ತಾರೆ. ಕೆಲ ಸಲಿಂಗಿಗಳಂತು, ಈ ಪದ್ಧತಿ ನಿಷೇಧವಿರುವ ದೇಶಗಳಿಗಾಗಲಿ ಪ್ರದೇಶಗಳಿಗಾಗಲಿ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತಾರೆ. ಆದರೆ ಚಿಲಿ ಈಗ ಇಂಥಾ ನೀತಿಯಿಂದ ಹೊರ ಬಂದಿದ್ದು, ಎಲ್ಲರನ್ನು ಸಮಾನರನ್ನಾಗಿ ನೋಡುತ್ತಿರುವುದು ಸಂತಸ ತಂದಿದೆ ಎಂದು ಈ ವರ್ಗದ ಸಾಮಾಜಿಕ ಕಾರ್ಯಕರ್ತರ ಮಾತು.
33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ
ಒಪನ್ ಫಾರ್ ಬ್ಯುಸಿನೆಸ್ ರಿಲೀಸ್ ಮಾಡಿರುವ ಜೂನ್ ರಿಪೋರ್ಟ್ ನಲ್ಲಿ, ಕೆರೆಬಿಯನ್ ಹಾಗೂ 12 ಆಂಗ್ಲ ದೇಶಗಳಲ್ಲಿರುವ ಆ್ಯಂಟಿ-ಗೇ ನಿಯಮಗಳಿಂದ ಈ ಭಾಗದವರಿಗೆ, ಟೂರಿಸಂ ಹಾಗೂ ಇಮಿಗ್ರೇಷನ್ ನಲ್ಲಿ 4.4 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ವರದಿಯಾಗಿದೆ. ಅದೇ ಈ ಪದ್ಧತಿಗಳಿಗೆ ಅವಕಾಶವಿರುವ ಪ್ರದೇಶಗಳಲ್ಲಿ ಇದೇ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಹೆಚ್ಚಳವಾಗುತ್ತಿರುವುದು ಚಿಲಿಗೆ ಆರ್ಥಿಕ ಬೆಳವಣಿಗೆಯ ಭರವಸೆ ಮೂಡಿಸಿದೆ.