ಕೋವಿಡ್-19ನ ಹೊಸ ರೂಪಾಂತರಿ ಒಮಿಕ್ರಾನ್ ವ್ಯಾಪಕವಾಗಿ ಪಸರುತ್ತಾ ಭಾರೀ ಭೀತಿ ಮೂಡಿಸುತ್ತಿದೆ. ಕೋವಿಡ್ ಸಾಂಕ್ರಮಿಕ ಇನ್ನೂ ಮುಗಿದಿಲ್ಲ ಎಂದು ಒಮಿಕ್ರಾನ್‌ನ ಆಗಮನ ನಮಗೆ ಸಾರಿ ಹೇಳುತ್ತಿದೆ.
ಈ ರೂಪಾಂತರಿಯ ಬಗ್ಗೆ ಹೆಚ್ಚಿನ ಅರಿವಿಗಾಗಿ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೇ ವೇಳೆ, ರೋಗ ಲಕ್ಷಗಣಗಳ ಬಗ್ಗೆ ಗೊತ್ತಿದ್ದರೆ, ಒಮಿಕ್ರಾನ್ ಸೋಂಕು ತಗುಲಿರಬಹುದಾದ ಅನುಮಾನ ಮೂಡಲು ನೆರವಾಗುತ್ತದೆ.
BREAKING NEWS: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪ
ಒಮಿಕ್ರಾನ್ ಸೋಂಕಿನ ಮುಖ್ಯವಾದ ರೋಗ ಲಕ್ಷಣಗಳು ಕೆಳಕಂಡಂತಿವೆ:
1. ಸುರಿಯುವ ಮೂಗು
2. ಉಸಿರಾಡಲು ಪರದಾಟ
3. ಗಂಟಲು ನೋವು
4. ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಕ್ಷೀಣಿಸುವುದು
5. ವಿಪರೀತ ಸೀನುವುದು
6. ಸುಸ್ತಾಗುವುದು
7. ತಲೆನೋವು
ಕೋವಿಡ್-19ನ ಹಿಂದಿನ ರೂಪಾಂತರಿಗಳಿಗಿಂತಲೂ ಒಮಿಕ್ರಾನ್ ಸೋಂಕು ಹೆಚ್ಚಾಗಿ ಜ್ವರ ಮತ್ತು ಶೀತಗಳಿಗೆ ಸಾಮ್ಯತೆ ಹೊಂದಿದೆ ಎಂದು ಸದ್ಯದ ಮಟ್ಟಿಗಿನ ಮಾಹಿತಿ ತೋರುತ್ತಿದೆ.
https://twitter.com/hjelle_brian/status/1471574985349079041?ref_src=twsrc%5Etfw%7Ctwcamp%5Etweetembed%7Ctwterm%5E1471574985349079041%7Ctwgr%5E%7Ctwcon%5Es1_&ref_url=https%3A%2F%2Fwww.dailyo.in%2Fvariety%2Fomicron-symptoms-different-than-delta-cases-in-india%2Fstory%2F1%2F35021.html