ಕೋವಿಡ್-19ನ ಹೊಸ ಅವತಾರಿ ಒಮಿಕ್ರಾನ್ ರೋಗ ಲಕ್ಷಣಗಳ ಬಗ್ಗೆ ಅದಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಮಿಕ್ರಾನ್ ವ್ಯಾಪಕವಾಗಿ ಹಬ್ಬಬಲ್ಲ ಸೋಂಕಾಗಿದ್ದು, ಈ ಬಗ್ಗೆ ಅನೇಕ ಸಂಸ್ಥೆಗಳು ಅದಾಗಲೇ ಎಚ್ಚರಿಕೆ ನೀಡಿವೆ.
ಕೋವಿಡ್ನ ಡೆಲ್ಟಾವತಾರಿಯು ಜಗತ್ತಿನಾದ್ಯಂತ ಭಾರೀ ಪ್ರಮಾಣದಲ್ಲಿ ಜನರು ಆಸ್ಪತ್ರೆ ಸೇರುವಂತೆ ಮಾಡಿದ್ದಲ್ಲದೇ ಬಹಳಷ್ಟು ಮಂದಿಯ ಸಾವಿಗೆ ಕಾರಣವಾಗಿತ್ತು. ಈ ಸೋಂಕು ತೀವ್ರವಾಗಿ ಹಬ್ಬುವ ಸಾಧ್ಯತೆ ಇರುವುದಲ್ಲದೇ, ಲಘುವಾದ ರೋಗಲಕ್ಷಣಗಳಾದ ತೀವ್ರ ಜ್ವರ, ಕೆಮ್ಮು/ನೆಗಡಿ, ಎದೆ ನೋವು ಹಾಗೂ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ತಗ್ಗುವಂತೆ ಮಾಡುತ್ತದೆ.
ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್ ಖಾನ್…!
ಒಮಿಕ್ರಾನ್ನ ಈ ಐದು ರೋಗ ಲಕ್ಷಣಗಳ ಬಗ್ಗೆ ನಿಮಗೆ ಗೊತ್ತಿರಲಿ:
1.ಸುಸ್ತು, ಆಯಾಸ
2. ಗಂಟಲು ಕೆರೆತ
3. ಲಘು ಜ್ವರ
4. ಇರುಳಿನ ವೇಳೆ ಬೆವರುವುದು ಹಾಗೂ ಮೈಕೈ ನೋವು
5. ಒಣಕೆಮ್ಮು
ಕೋವಿಡ್ನ ಹಿಂದಿನ ಅವತಾರಿಗಳಂತೆ ಒಮಿಕ್ರಾನ್ನಿಂದ ಮೂಗು ಕಟ್ಟಿಕೊಳ್ಳುವುದು, ವಾಸನಾ ಕ್ಷಮತೆ, ರುಚಿ ಗ್ರಹಿಕೆ ಕಳೆದುಕೊಂಡಂಥ ಲಕ್ಷಣಗಳು ಕಂಡು ಬಂದಿಲ್ಲ.