ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 7ರಂದು ಅನೌನ್ಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್ ಹಾಗೂ ಇನ್ವೇನಿಯೋ ಫಿಲ್ಮ್ಸ್ ಇಂಡಿಯಾ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಹಳೆಯ ಸೀರೆಯುಲ್ಲಿಯೂ ವಿಭಿನ್ನವಾಗಿ, ಸುಂದರವಾಗಿ ಕಾಣಲು ಅನುಸರಿಸಿ ಈ ಟಿಪ್ಸ್
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಸೇರಿದಂತೆ ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ರವಿಶಂಕರ್ ಗೌಡ ಮಧುಸೂದನ್ ರಾವ್ ವಾಸುಕಿ ವೈಭವ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಬಾಲಿವುಡ್ ನ ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರದ ಒಂದು ಹಾಡಿಗೆ ಸ್ಟೆಪ್ ಹಾಕಿದ್ದಾರೆ.