ದೆಹಲಿ: ಭಾರತದಲ್ಲಿ ಆಹಾರ ಬ್ಲಾಗಿಂಗ್ ಅಗಾಧವಾಗಿ ಜನಪ್ರಿಯವಾಗಿದೆ. ನೀವು ಯೂಟ್ಯೂಬ್ ಮತ್ತು ಇಂಟರ್ನೆಟ್ನಲ್ಲಿ ಹಲವಾರು ರೀತಿಯ ಪಾಕಪದ್ಧತಿಯ ವಿಡಿಯೋಗಳನ್ನು ನೋಡಿರಬಹುದು. ಇದರ ಜೊತೆಗೆ ಹಲವಾರು ರೀತಿಯ ಆಹಾರ ಸವಾಲುಗಳು ಸಹ ವೈರಲ್ ಆಗುತ್ತಿವೆ. ಇದೀಗ ಈ ವಿಶಿಷ್ಟ ಪಾನಿ ಪುರಿ ಚಾಲೆಂಜ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಆಗ್ರಾ-ಫಿರೋಜಾಬಾದ್ ಮೇಲ್ಸೇತುವೆ ಬಳಿಯ ಪಾನಿಪುರಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಗೋಲ್ಗಪ್ಪ ಸವಾಲನ್ನು ಪ್ರಾರಂಭಿಸಿದ್ದಾರೆ. ಒಂದು ದೊಡ್ಡ, ಕಚೋರಿ ಗಾತ್ರದ ಗೋಲ್ ಗಪ್ಪಾವನ್ನು ಒಂದೇ ಬಾರಿಗೆ ತಿನ್ನುವುದು ನಿಮಗಿರುವ ಸವಾಲಾಗಿದೆ.
ಲಕ್ಷಕ್ಕೂ ಆಧಿಕ ಲೈಕ್ಸ್ ಗಿಟ್ಟಿಸಿದೆ ಸ್ನೇಹಿತನಿಗೆ ಹೆದರಿಸಿದ ವ್ಯಕ್ತಿಯ ತಮಾಷೆ ವಿಡಿಯೋ
ಈ ದೊಡ್ಡ ಗಾತ್ರದ ಪಾನಿಪುರಿಯಲ್ಲಿ ಆಲೂಗಡ್ಡೆ ಮಸಾಲಾ, ಮತ್ತು ಪಾನಿಯನ್ನು ಬೆರೆಸಲಾಗುತ್ತದೆ. ವ್ಯಾಪಾರಿ ನಿಮಗೆ ಒಣ ಶುಂಠಿಯ ಸಿಹಿ ಚಟ್ನಿಯನ್ನೂ ನೀಡುತ್ತಾನೆ. ಆಗ್ರಾ-ಫಿರೋಜಾಬಾದ್ ಹೆದ್ದಾರಿಯಲ್ಲಿ ಗೋಲ್ಗಪ್ಪ ವ್ಯಾಪಾರಿಯೊಬ್ಬರು ಈ ಚಾಲೆಂಜ್ ಆರಂಭಿಸಿದ್ದಾರೆ.
ಒಂದೇ ಬಾರಿಗೆ ಬೃಹತ್ ಗೋಲ್ಗಪ್ಪವನ್ನು ತಿನ್ನುವಂತೆ ಜನರಲ್ಲಿ ವ್ಯಾಪಾರಿಯು ಕೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಗ್ರಾಹಕರು ಸವಾಲನ್ನು ಪೂರ್ಣಗೊಳಿಸಿದ್ರೆ, ಅವರಿಗೆ ತಕ್ಷಣವೇ 500 ರೂ. ಬಹುಮಾನ ನೀಡಲಾಗುತ್ತದೆ ಎಂದು ವ್ಯಾಪಾರಿ ಈಗಾಗಲೇ ಘೋಷಿಸಿದ್ದಾರೆ.
ಇಡೀ ಪಾನಿಪುರಿಯನ್ನು ಒಮ್ಮೆಲ್ಲೇ ಬಾಯಿಗೆ ಹಾಕಿಕೊಳ್ಳಬೇಕು ಎಂಬುದು ಪಂದ್ಯದ ಷರತ್ತಾಗಿದೆ. ಅದನ್ನು ತಿನ್ನುವಾಗ ನಿಮ್ಮ ಬಾಯಿಂದ ಒಂದು ಹನಿ ನೀರು ಬಿದ್ದರೂ, ನೀವು ಅನರ್ಹರಾಗುತ್ತೀರಿ. ಅನರ್ಹತೆ ಪಡೆದ ವ್ಯಕ್ತಿ ಒಂದು ಗೋಲ್ಗಪ್ಪಗೆ 100 ರೂ. ಪಾವತಿ ಮಾಡಬೇಕು.
ಹೆಚ್ಚುತ್ತಿದೆ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟ
ಇನ್ನು ಚಾಲೆಂಜ್ ಬಗ್ಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ತಿಳಿದ ಜನರು ಬಹಳ ಉತ್ಸುಕರಾಗಿದ್ದಾರೆ. ಬಹುತೇಕ ಎಲ್ಲರೂ ಈ ಸವಾಲನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಯಾರೂ ಯಶಸ್ವಿಯಾಗಲಿಲ್ಲ. 500 ರೂ. ಗೆಲ್ಲುವ ಭರವಸೆಯಿಂದ ಜನರು ಬಂದು ಇಲ್ಲಿ ಗೊಲ್ಗಪ್ಪಗಳನ್ನು ತಿನ್ನುತ್ತಿದ್ದಾರೆ. ಆದರೆ, ಅವರು ಸೋತ ತಕ್ಷಣ 100 ರೂ. ಪಾವತಿ ಮಾಡಬೇಕಿದೆ.